ಸಾರಾಂಶ
ಬೀದರ್: ಗುರುನಾನಕರ 555ನೇ ಜಯಂತಿ ಅಂಗವಾಗಿ ಶುಕ್ರವಾರ ನಗರದ ಪವಿತ್ರ ಗುರುದ್ವಾರಾದಿಂದ ನಗರದ ವಿವಿಧ ಮುಖ್ಯ ರಸ್ತೆಗಳ ಮೂಲಕ ವಿವಿಧ ವೃತ್ತಗಳ ಮಾರ್ಗವಾಗಿ ಭವ್ಯ ಮೆರವಣಿಗೆ, ಮೈನವಿರೇಳಿಸಿದ ಸಿಖ್ ಯುವಕರ ಖಡ್ಗದ ವರಸೆ ಪ್ರದರ್ಶನ ಗಮನ ಸೆಳೆಯಿತು.ಗುರುದ್ವಾರಕ್ಕೆ ಸಚಿವ ಖಂಡ್ರೆ ಭೇಟಿ: ಗುರುವಾರ ಬೆಳಿಗ್ಗೆಯಿಂದಲೇ ನಗರದ ಗುರುದ್ವಾರ ಪರಿಸರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಶುಕ್ರವಾರ ಬೆಳಿಗ್ಗೆಯಿಂದ ಗುರುದ್ವಾರದಲ್ಲಿ ಗುರುಗ್ರಂಥ ಸಾಹೀಬ್ ಪಠಣ, ವಿಶೇಷ ಪ್ರಾರ್ಥನೆಗಳು, ದೀಪಾಲಂಕಾರ ಝಗಮಗಿಸುತ್ತಿದ್ದವಲ್ಲದೆ ಗುರುದ್ವಾರಕ್ಕೆ ವಿಶೇಷ ದೀಪಾಲಂಕರ ಎಲ್ಲರ ಗಮನ ಸೆಳೆಯಿತು.
ಬೀದರ್‌ನ ಗುರುದ್ವಾರಕ್ಕೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಿಖ್ ಧರ್ಮೀಯರು ಆಗಮಿಸಿ ಗುರುನಾನಕ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಲ್ಲದೆ ಮೆರವಣಿಗೆಯುದ್ದಕ್ಕೂ ಕೈಯಲ್ಲಿ ಖಡ್ಗ ಹಿಡಿದು ’ಬೋಲೆ ಸೋನಿಹಾಲ್ ಸಸ್ರಿಯಾಕಾಲ್’ ಎಂಬ ಘೋಷಣೆಗಳನ್ನು ಕೂಗುತ್ತ ಸಾಗಿದ್ದು ಎಲ್ಲರ ಮೈನವಿರೇಳಿಸುವಂತಿತ್ತು.ಮೆರವಣಿಗೆಯು ಗುರುದ್ವಾರ ಗುರುನಾನಕ ಗೇಟ್, ಮಡಿವಾಳ ವೃತ್ತ, ನೆಹರು ಕ್ರೀಡಾಂಗಣದ ಮಾರ್ಗ, ಡಾ. ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತದ ಮೂಲಕ ಮತ್ತೆ ಮರಳಿ ಗುರುದ್ವಾರ ಹತ್ತಿರದ ನಿಶಾನ್‌ಸಾಹೇಬ್‌ಗೆ ಬಂದು ಸಮಾರೋಪಗೊಂಡಿತು.ಮೆರವಣಿಗೆಯಲ್ಲಿ ಗುರುನಾನಕ ಝೀರಾ ಪ್ರಬಂಧಕ ಕಮಿಟಿ ಅಧ್ಯಕ್ಷ ಸರದಾರ ಬಲಬೀರ್‌ಸಿಂಗ್, ಸದಸ್ಯರಾದ ಮನಪ್ರೀತಸಿಂಗ್ ಖನೂಜ ಬಂಟಿ, ಪುನೀತ್‌ಸಿಂಗ್, ಪವಿತ್ ಸಿಂಗ್ ಸತಪಾಲ್‌ಸಿಂಗ್, ದರ್ಬಾರಾ ಸಿಂಗ್, ಮೋಂಟಿಸಿಂಗ್ ಮತ್ತಿತರರು ಸೇರಿದಂತೆ ನಾಂದೇಡ್ ಹಾಗೂ ಮತ್ತಿತರರ ಭಾಗಗಳಿಂದ ಬಂದಂತಹ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು. ಮೆರವಣಿಗೆಯು ರಾತ್ರಿ ಸಮಯದಲ್ಲಿ ಗುರುದ್ವಾರ ಬಂದು ತಲುಪಲಿತು.ಬಿಗಿ ಪೊಲೀಸ್ ಬಂದೋಬಸ್ತ್ :ಬೀದರ್‌ನಲ್ಲಿ ನಡೆದ ಗುರುನಾನಕ ಜಯಂತಿಗೆ ಎಸ್‌ಪಿ ಪ್ರದೀಪ ಗುಂಟಿ ಅವರ ಮಾರ್ಗದರ್ಶನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಎಎಸ್‌ಪಿ ಮಹೇಶ ಮೇಘಣ್ಣನವರ್ ಹಾಗೂ ಡಿಎಸ್‌ಪಿ ಶಿವನಗೌಡ ಪಾಟೀಲ್ ಯಾವುದೇ ರೀತಿಯ ಅವಘಡ ಆಗದಂತೆ ಸ್ಥಳದಲ್ಲಿಯೇ ಉಳಿದು ಕ್ರಮವಹಿಸಿದರು.
ಈಶ್ವರ ಖಂಡ್ರೆಗೆ ಸನ್ಮಾನಗುರುನಾನಕ ಜಯಂತಿ ನಿಮಿತ್ತ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಗುರುದ್ವಾರಕ್ಕೆ ತೆರಳಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಪ್ರಬಂಧಕ ಕಮಿಟಿ ಪರವಾಗಿ ಅವರನ್ನು ಗುರುದ್ವಾರ ಪ್ರಬಂಧಕ ಕಮಿಟಿಯ ಅಧ್ಯಕ್ಷ ಸರದಾರ ಬಲಬೀರಸಿಂಗ್, ಮನಪ್ರೀತಸಿಂಗ್ ಬಂಟಿ ಅವರುಗಳು ಸನ್ಮಾನಿಸಿದರು.ಖಡ್ಗದ ವರಸೆ ಪ್ರದರ್ಶನ
ಸಂಜೆ 4ರ ಸುಮಾರಿಗೆ ಗುರುದ್ವಾರದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ನಿಶಾನ್ ಸಾಹೇಬ್, ಸಿಖ್ ಯುವಕರ ಖಡ್ಗದ ವರಸೆ ಪ್ರದರ್ಶನ, ಕೈಯಲ್ಲಿ ಖಡ್ಗ ಹಿಡಿದು ಓಡುವುದು, ಸಿಖ್ ಧರ್ಮೀಯ ಗಣ್ಯವ್ಯಕ್ತಿಗಳು, ಪ್ರಮುಖರ ಪಾದಯಾತ್ರೆ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು. ರಸ್ತೆಯುದ್ದಕ್ಕೂ ಪೊಲೀಸ್ ಮೆರವಣಿಗೆ ಸುಗಮವಾಗಿ ಸಾಗಲು ವ್ಯವಸ್ಥೆ ಮಾಡಿದ್ದರು.