ಸಾರಾಂಶ
ರಾಜ್ಯದಲ್ಲಿರುವ ಮಡಿವಾಳ ಸಮಾಜದವರನ್ನು ಪರಿಶಿಷ್ಠ ಜಾತಿಗೆ ಒಳಪಡಿಸುವ ಅನ್ನಪೂರ್ಣಮ್ಮ ವರದಿ ಜಾರಿಗೊಳಿಸಬೇಕು. ರಾಯಚೂರಿನ ಧೋಬಿಘಾಟ್‌ನಲ್ಲಿ ನೀರಿನ ವ್ಯವಸ್ಥೆ ಮತ್ತು ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು
ಕನ್ನಡಪ್ರಭ ವಾರ್ತೆ ರಾಯಚೂರು
ಪ್ರತಿ ವರ್ಷದಂತೆ ಈ ವರ್ಷವು ಫೆ.1ರಂದು ಶ್ರೀಮಡಿವಾಳ ಮಾಚಿದೇವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಮಡಿವಾಳ ಮಾಚಿದೇವರ ಸಮಾಜದ ಅಧ್ಯಕ್ಷ ಜಂಬಣ್ಣ ಯಕ್ಲಾಸಪುರ ತಿಳಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಸಮಾಜ ಸೇರಿ ಇತರರ ಸಹಯೋಗದಲ್ಲಿ ಜಯಂತಿಯನ್ನು ಹಮ್ಮಿಕೊಂಡಿದ್ದು, ಅಂದು ಮುಂಜಾನೆ 6:30 ಕ್ಕೆ ಸ್ಥಳೀಯ ಝರಿ ಬೆಟ್ಟದಲ್ಲಿನ ಮಾಚಿದೇವರ ದೇವಸ್ಥಾನದಲ್ಲಿ ರುದ್ರಾಭಿಷೇಕ, ಎಲೆಪೂಜೆ ನೆರವೇರಿಸಲಾಗುತ್ತದೆ. ಬೆಳಗ್ಗೆ 8 ಕ್ಕೆ ನಗರದ ಮಡಿವಾಳ ಮಾಚಿದೇವರ ವೃತ್ತದಲ್ಲಿ ಪುತ್ಥಳಿಗೆ ಪೂಜೆ ಮತ್ತು ಪುಷ್ಪಾರ್ಚನೆ ಕಾರ್ಯಕ್ರಮ ನಡೆಯಲಿದ್ದು, ಇದರ ಸಾನ್ನಿಧ್ಯವನ್ನು ಸವಿರದೇವರು ಶಾಂತನಲ್ಲ ಶಿವಾಚಾರ್ಯ ಸ್ವಾಮೀಜಿ ಹಾಗೂ ಸೋಮವಾರ ಪೇಟೆ ಹಿರೇಮಠದ ಅಭಿನವ ರಾಚೋಟಿವಿರ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದಾರೆ. ಮೆರವಣಿಗೆಯಲ್ಲಿ ಪೂರ್ಣ ಕುಂಭಗಳ ಜೊತೆಗೆ ವಿವಿಧ ಕಲಾ ತಂಡಗಳ ಭಾಗಿಯಾಗಲಿವೆ ಎಂದರು.
ಬೆಳಗ್ಗೆ 12;30 ಕ್ಕೆ ನಗರ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಜಿಲ್ಲೆ ಸಚಿವರು, ಶಾಸಕರು, ಸಂಸದರು, ಅಧಿಕಾರಿಗಳು, ಸಮಾಜದ ಮುಖಂಡರು ಆಗಮಿಸಲಿದ್ದಾರೆ. ಇದೇ ವೇಳೆ ಎಸ್ಎಸ್ಎಲ್‌ಸಿ ಹಾಗೂ ಪಿಯುಸಿ, ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮಾಜದ ನಾಲ್ಕು ಜನ ವಿದ್ಯಾರ್ಥಿಗಳಿಗೆ ಹಾಗೂ ಸಮಾಜದ ಸೇವೆ ಮಾಡಿದ ಇಬ್ಬರು ಸಮಾಜದವರಿಗೆ ಗೌರವಿಸಲಾಗುವುದು ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಜಿ.ಸುರೇಶ, ಜಿ.ಶಿವಮೂರ್ತಿ, ಮುನಿಸ್ವಾಮಿ, ಅಂಜನೇಯ್ಯ, ವೆಂಕಟೇಶ, ಹುಸೇನಪ್ಪ ಉಪಸ್ಥಿತರಿದ್ದರು.
ರಾಜ್ಯದಲ್ಲಿರುವ ಮಡಿವಾಳ ಸಮಾಜದವರನ್ನು ಪರಿಶಿಷ್ಠ ಜಾತಿಗೆ ಒಳಪಡಿಸುವ ಅನ್ನಪೂರ್ಣಮ್ಮ ವರದಿ ಜಾರಿಗೊಳಿಸಬೇಕು. ರಾಯಚೂರಿನ ಧೋಬಿಘಾಟ್‌ನಲ್ಲಿ ನೀರಿನ ವ್ಯವಸ್ಥೆ ಮತ್ತು ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು, ಮಡಿವಾಳರ ಕುಲಕಸಬು ಮಾಡುವ ಅಂಗಡಿಗಳಿಗೆ (ಇಸ್ತ್ರಿ ಮಾಡುವ ಅಂಗಡಿ) ವಿದ್ಯುತ್ ದರದಲ್ಲಿ ರಿಯಾಯಿತಿ ಕೊಡಬೇಕು. ಸರ್ಕಾರಿ ಆಸ್ಪತ್ರೆಗಳು ಮತ್ತು ವಿವಿಧ ಇಲಾಖೆಗಳಲ್ಲಿ ಹಲವಾರು ವರ್ಷಗಳಿಂದ ದಿನಗೂಲಿ ಮಾಡುತ್ತಿರುವ ಮಡಿವಾಳ ಸಮಾಜದ ನೌಕರರನ್ನು ಖಾಯಂ ಗೊಳಿಸಬೇಕು. ಆಸ್ಪತ್ರೆ ಮತ್ತು ಖಾಸಗಿ ಹೋಟೆಲ್‌ಗಳಲ್ಲಿ ಕಾಯಕ ಮಾಡುವವರಿಗೆ ಸುರಕ್ಷಿತ ಕಿಟ್‌ಗಳನ್ನು ಪೂರೈಸ ಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಜಯಂತಿ ಸಮಾರಂಭದ ವೇದಿಕೆ ಮುಖಾಂತರ ಸಕರ್ಕಾರದ ಗಮನ ಸೆಳೆಯಲಾಗುವುದು ಎಂದರು.