ಸಾರಾಂಶ
ಪರಸ್ಪರ ಬಾಂಧವ್ಯ, ಸಹೋದರತ್ವದ, ಸಮಾನತೆಯ ಬದುಕಿಗೆ ಪ್ರೇರಕವಾಗಿರುವ ರಂಜಾನ್ ಹಬ್ಬವನ್ನು ಗುರುವಾರ ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಿದರು.
ಹಾವೇರಿ: ಪರಸ್ಪರ ಬಾಂಧವ್ಯ, ಸಹೋದರತ್ವದ, ಸಮಾನತೆಯ ಬದುಕಿಗೆ ಪ್ರೇರಕವಾಗಿರುವ ರಂಜಾನ್ ಹಬ್ಬವನ್ನು ಗುರುವಾರ ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಿದರು.
ಹಬ್ಬದ ಅಂಗವಾಗಿ ಸಾವಿರಾರು ಮುಸ್ಲಿಂ ಬಾಂಧವರು ಹಾವೇರಿಯ ಈದ್ಗಾ ಮಸೀದಿ ಆವರಣದಲ್ಲಿ ಶ್ರದ್ಧಾ ಭಕ್ತಿಯಿಂದ ನಾಡಿನ ಶ್ರೇಯೋಭಿವೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ವೃದ್ಧರು, ಯುವಕರು, ಅಂಗವಿಕಲರು, ಮಕ್ಕಳು ಎಲ್ಲರೂ ಒಂದಾಗಿ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಧರ್ಮ ಗುರುಗಳು (ಮೌಲ್ವಿಗಳು) ಸಮಾಜ ಬಾಂಧವರಿಗೆ ಹಬ್ಬದ ಮಹತ್ವ ಹಾಗೂ ಇಸ್ಲಾಂ ಧರ್ಮದ ತತ್ವಗಳ ಕುರಿತು ಉಪದೇಶ ನೀಡಿದರು. ಹೊಸ ಬಟ್ಟೆಗಳನ್ನು ಧರಿಸಿ, ಸುಗಂಧ ದ್ರವ್ಯಗಳನ್ನು ಸಿಂಪಡಿಸಿ, ಅತಿಥಿ ಸತ್ಕಾರ, ಪರಸ್ಪರ ಆಲಿಂಗನ, ಹಸ್ತಲಾಘವದಿಂದ ಪರಸ್ಪರ ಶುಭಕೋರಿದರು. ನಂತರ ಆವರಣದಲ್ಲಿದ್ದ ಭಿಕ್ಷುಕರು, ಬಡವರಿಗೆ ದಾನ ಮಾಡಿದರು. ಒಂದು ತಿಂಗಳ ಭಕ್ತಿ ಸಾಂದ್ರವಾದ ಕಠಿಣ ಉಪವಾಸ ವ್ರತಾಚರಣೆಯ ಅನಂತರ ಚಂದ್ರದರ್ಶನ ಆಧಾರದಲ್ಲಿ ಹಬ್ಬ ಆಚರಿಸಲಾಯಿತು. ಈ ಹಬ್ಬವನ್ನು ಜಿಲ್ಲೆಯಾದ್ಯಂತ ವೈಭವದಿಂದ ಆಚರಿಸಿ ಎಲ್ಲ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ನಗರದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಇತರ ಗಣ್ಯರು ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭ ಕೋರಿದರು. ಈ ವೇಳೆ ಅಂಜುಮನ್ ಏ ಇಸ್ಲಾಂ ಕಮಿಟಿ ಅಧ್ಯಕ್ಷ ಇರ್ಫಾನ್ ಪಠಾಣ, ಉಪಾಧ್ಯಕ್ಷ ಚಮನ ಮುಲ್ಲಾ, ಅನ್ವರ್ ಕಡೆಮನಿ, ಕಾರ್ಯದರ್ಶಿ ಮುಜಫರ್ ಕೊಟ್ಟಿಗೇರಿ, ಗುಲಾಬ್ ಬಂಕಾಪುರ, ಸದಸ್ಯರಾದ ಜಮೀರ್ ಜಿಗರಿ, ಬಾಬುಲಾಲ ಬಾಲೇಬಾಯಿ, ಇಸ್ಮಾಯಿಲ್ ಲಭ್ಯೇರ್, ಸಾಧಿಕ್ ಸವಣೂರ, ಖಮರ್ ಕಲ್ಯಾಣಿ, ವಸೀಂ ಸನ್ನುಖಾನವರ, ಹಜರತ ಅಲಿ ತಹಶೀಲ್ದಾರ್, ಸಾದಿಕ ಮುಲ್ಲಾ, ಉಸಮಾನಸಾಬ ಪಟವೇಗಾರ, ಸಾದಿಕ ಕೊತ್ವಾಲ್, ವಲಿ ಅತ್ತಾರ, ಮನಸೂರ ಮುಲ್ಲಾ, ನಪ್ತಾರ ಗುಡಗೆರಿ, ಖಾದರ ಧಾರವಾಡ, ಸಾದಿಕ ಮೆಲಮೂರಿ, ಅಬ್ದುಲ್, ಖಾಸಿಂ ಅಗಡಿ, ಹಾಗೂ ಮುಸ್ಲಿಂ ಮುಖಂಡರು ಇದ್ದರು.ಹಾವೇರಿ ನಗರದ ಈದ್ಗಾ ಮಸೀದಿ ಆವರಣದಲ್ಲಿ ಈದ್ ಉಲ್ ಫಿತ್ರ್ ಹಬ್ಬದ ನಿಮಿತ್ತ ಸಾವಿರಾರು ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ನಾಡಿನ ಶ್ರಯೋಭಿವೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.೧೧ಎಚ್‌ವಿಆರ್೨ಎ-ಹಾವೇರಿ ನಗರದ ಈದ್ಗಾ ಮಸೀದಿ ಆವರಣದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಪಾಲ್ಗೊಂಡಿದ್ದರು.