ಮಾ. ೨೫ರಂದು ನಡೆಯುವ ಬಂಡೆ ರಂಗನಾಥ ಸ್ವಾಮಿ ರಥೋತ್ಸವ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ ಮಾಡಲಾಗುತ್ತಿದೆ. ಮಾ. ೨೬ರಂದು ಬೇಟೆಗಿಡ ಉತ್ಸವ ನಡೆಯಲಿದೆ.

ಹಗರಿಬೊಮ್ಮನಹಳ್ಳಿ:ರಂಗನಾಥ ಸ್ವಾಮಿ ಲಕ್ಷ್ಮೀದೇವಿಯ ಕಲ್ಯಾಣೋತ್ಸವದಿಂದ ಸುತ್ತಮುತ್ತಲಿನ ಭಕ್ತರಿಗೆ ಕಲ್ಯಾಣ ಉಂಟಾಗುತ್ತದೆ ಎಂದು ಧರ್ಮಕರ್ತ ಉದಯ ಭಾಸ್ಕರ್ ಹೇಳಿದರು.ತಾಲೂಕಿನ ತಂಬ್ರಹಳ್ಳಿ ಬಂಡೇ ರಂಗನಾಥ ಸ್ವಾಮಿ ರಥೋತ್ಸವದ ಹಿನ್ನೆಲೆಯಲ್ಲಿ ಲಕ್ಷ್ಮೀದೇವಿ ರಂಗನಾಥ ಸ್ವಾಮಿ ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಮಾ. ೨೫ರಂದು ನಡೆಯುವ ಬಂಡೆ ರಂಗನಾಥ ಸ್ವಾಮಿ ರಥೋತ್ಸವ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ ಮಾಡಲಾಗುತ್ತಿದೆ. ಮಾ. ೨೬ರಂದು ಬೇಟೆಗಿಡ ಉತ್ಸವ ನಡೆಯಲಿದೆ. ಈಗಾಗಲೆ ರಥೋತ್ಸವಕ್ಕೆ ಅಗತ್ಯ ಸಿದ್ಧತೆ ಆರಂಭಗೊಂಡಿದ್ದು, ದೇವಸ್ಥಾನವನ್ನು ಸುಣ್ಣ-ಬಣ್ಣಗಳಿಂದ ಸುಂದರಗೊಳಿಸಲಾಗಿದೆ. ರಥೋತ್ಸವಕ್ಕೂ ಪೂರ್ವದಲ್ಲೆ ಕಲ್ಯಾಣೋತ್ಸವ ಮಾಡುವುದು ಸಾಂಪ್ರದಾಯಿಕ ಆಚರಣೆಯಾಗಿದೆ ಎಂದು ತಿಳಿಸಿದರು.

ದೇವಸ್ಥಾನದ ಅರ್ಚಕ ಯಲ್ಲಪ್ಪಗೌಡ ಪೂಜಾರ ಮಾತನಾಡಿದರು. ಗದ್ದಿಕೇರಿ ಚರಂತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆರಂಭದಲ್ಲಿ ಬೆಟ್ಟದಲ್ಲಿ ಒಡಮೂಡಿದ ರಂಗನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ರಂಗನಾಥ ಸ್ವಾಮಿ ಮತ್ತು ಲಕ್ಷ್ಮೀದೇವಿ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಕಲ್ಯಾಣೋತ್ಸವ ನೆರವೇರಿಸಲಾಯಿತು. ಕಲ್ಯಾಣೋತ್ಸವದ ಪೂಜೆಯಲ್ಲಿ ಅನೇಕ ದಂಪತಿಗಳು ಪಾಲ್ಗೊಂಡು, ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಂಡರು.

ಈ ವೇಳೆ ಚಿದಂಬರ ಭಟ್, ವೆಂಕಣ್ಣ, ವಿನಾಯಕ ಭಟ್, ಬಸವ ಯೋಗ ಸಮಿತಿ ಅಧ್ಯಕ್ಷೆ ಗೀತಾ ರಾಘವೇಂದ್ರ ಶೆಟ್ರು, ಗುಡ್ಡದ ಗಾಯತ್ರಿ, ರಾಜೇಶ್ವರಿ, ಸುಮ ನಟರಾಜ್, ಟಿ. ಸೀಮಾ, ಟಿ. ಸುರೇಖಾ, ಶಾರದಾ, ಬಂಡೆ ರಂಗನಾಥ ಸ್ವಾಮಿ ಸಮಿತಿ ಅಧ್ಯಕ್ಷ ಬಸರಕೋಡು ಲಕ್ಷ್ಮಣ, ಕಾರ್ಯದರ್ಶಿ ಪರಶುರಾಮ ಸುಣಗಾರ, ಸಮಿತಿಯ ಸರಾಯಿ ಮಂಜುನಾಥ, ಗಂಗಾಧರಗೌಡ, ರೆಡ್ಡಿ ಮಂಜುನಾಥ ಪಾಟೀಲ್, ಸೊಬಟಿ ಹರೀಶ್, ಕಡ್ಡಿ ಚನ್ನಬಸಪ್ಪ, ಕರಿಬಸಯ್ಯ, ಆನೇಕಲ್ ವಿರುಪಾಕ್ಷಿ ಇದ್ದರು.