ಝೀ ಕನ್ನಡ ಪ್ರಾಯೋಜಕತ್ವದ ಸರಿಗಮಪ ಲಿಟಲ್‌ ಚಾಂಪ್ಸ್‌ 2026ರಲ್ಲಿ ಚಾಂಪಿಯನ್‌ ಆಗಿರುವ ಮಂಗಳೂರಿನ ಅಶ್ಮಿತ್‌ ಎ.ಜೆ. ಅವರ ‘ವಿಜಯ ಸಂಭ್ರಮ’ ಕಾರ್ಯಕ್ರಮ ಆ. 29ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ಅಶ್ಮಿತ್‌ ಎ.ಜೆ. ಅಭಿಮಾನಿ ಬಳಗದ ಎಸ್‌.ಪ್ರಭಾಕರ ತಿಳಿಸಿದರು.

ಮಂಗಳೂರು: ಝೀ ಕನ್ನಡ ಪ್ರಾಯೋಜಕತ್ವದ ಸರಿಗಮಪ ಲಿಟಲ್‌ ಚಾಂಪ್ಸ್‌ 2026ರಲ್ಲಿ ಚಾಂಪಿಯನ್‌ ಆಗಿರುವ ಮಂಗಳೂರಿನ ಅಶ್ಮಿತ್‌ ಎ.ಜೆ. ಅವರ ‘ವಿಜಯ ಸಂಭ್ರಮ’ ಕಾರ್ಯಕ್ರಮ ಆ. 29ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ಅಶ್ಮಿತ್‌ ಎ.ಜೆ. ಅಭಿಮಾನಿ ಬಳಗದ ಎಸ್‌.ಪ್ರಭಾಕರ ತಿಳಿಸಿದರು.

ಅವರು ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ನಗರದ ಅಂಬೇಡ್ಕರ್‌ ವೃತ್ತದಿಂದ ಕ್ಲಾಕ್‌ ಟವರ್‌ವರೆಗೆ ಮಧ್ಯಾಹ್ನ 2 ಗಂಟೆಗೆ ಮೆರವಣಿಗೆ ನಡೆಯಲಿದ್ದು, ಬಳಿಕ 3 ಗಂಟೆಗೆ ಅಲ್ಲಿನ ರಾಜ್ಯ ಸರ್ಕಾರಿ ನೌಕರರ ನಂದಿನಿ ಸಭಾಭವನದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ ಎಂದರು.

ಮಂಗಳೂರಿನಲ್ಲಿ ವಕೀಲರಾಗಿರುವ ಜಯರಾಮ ಎ. ಮತ್ತು ಆಶಾ ಜಯರಾಮ ದಂಪತಿಯ ಪುತ್ರನಾಗಿರುವ ಅಶ್ಮಿತ್‌ 4 ವರ್ಷದಿಂದಲೇ ಹಾಡುವ ಕಲೆಯನ್ನು ಮೈಗೂಡಿಸಿಕೊಂಡಿದ್ದು, 200ಕ್ಕೂ ಅಧಿಕ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. 100ಕ್ಕೂ ಅಧಿಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದು, ಅವರು ಕರ್ನಾಟಕ ಡಾ.ಗಂಗೂಬಾಯ್‌ ಹಾನಗಲ್‌ ವಿಶ್ವವಿದ್ಯಾನಿಲಯ 2025ರ ಮೇ ತಿಗಳಲ್ಲಿ ನಡೆಸಿದ ಶಾಸ್ತ್ರೀಯ ಸಂಗೀತ ಪರೀಕ್ಷೆಯ ಜೂನಿಯರ್‌ ವಿಭಾಗದಲ್ಲಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ. ಇತ್ತೀಚೆಗೆ ತೆರೆಕಂಡಿದ್ದ ‘ಸು ಫ್ರಂ ಸೋ’ ಚಲನಚಿತ್ರದ ‘ಭಾವ ಬಂದರೋ...’ ಹಾಡಿಗೆ ಧ್ವನಿ ನೀಡಿದ್ದಾರೆ. ವಯೋಲಿನ್‌, ತಬಲಾ, ಚೆಂಡೆ, ತಾಸೆ, ಮೃಂದಗ ಹಾಗೂ ಮೆಲೋಡಿಕಾ ನುಡಿಸುತ್ತಾರೆ ಎಂದರು.

ಬಳಗದ ವೆಂಕಪ್ಪ ಎಂ.ಡಿ., ಪದ್ಮನಾಭ, ಜನಾರ್ದನ ಬುಡೋಳಿ, ವಾಸು ಇದ್ದರು.