ಸಾರಾಂಶ
ಪಾಳ್ಯ ಗ್ರಾಮದ ಕಾಳಿಕಾಂಬ ಕಮ್ಮಟೇಶ್ವರ ದೇವಾಲಯದಲ್ಲಿ ಶಂಕರಾಚಾರ್ಯರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಕೊಳ್ಳೇಗಾಲ: ತಾಲೂಕಿನ ಪಾಳ್ಯ ಗ್ರಾಮದ ಕಾಳಿಕಾಂಬ ಕಮ್ಮಟೇಶ್ವರ ದೇವಾಲಯದಲ್ಲಿ ಶಂಕರಾಚಾರ್ಯರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಶಂಕರಾಚಾರ್ಯರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ಶಂಕರಾಚಾರ್ಯರ ಜಯಂತಿ ಹಿನ್ನೆಲೆ ಕಾಳಿಕಾಂಬ ಕಮ್ಮಟೇಶ್ವರ ದೇಗುಲದಲ್ಲಿ ಪ್ರಧಾನ ಅರ್ಚಕ ಮಹೇಶ್ ಕುಮಾರ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಮಹೇಶ್ ಮಾತನಾಡಿ, ಶಂಕರಾಚಾರ್ಯ ತತ್ವಾದರ್ಶಗಳನ್ನು ಯುವ ಪೀಳಿಗೆ ಜೀವನದಲ್ಲಿ ಕಿಂಚಿತ್ತಾದರೂ ಅಳವಡಿಸಿಕೊಳ್ಳುವ ಮೂಲಕ ಜಯಂತಿಗೆ ಆಚರಣೆಗೆ ನೈಜ ಅರ್ಥ ನೀಡಬೇಕು, ಗಣ್ಯ- ಮಹನೀಯರ ಜಯಂತಿ ಆಚರಣೆ ಮಾಡಿದರೆ ಸಾಲದು, ಅವರು ಆದರ್ಶಗುಣಗಳನ್ನು ಅಳವಡಿಸಿಕೊಳ್ಳಬೇಕೆಂದರು. ಇಲ್ಲಿನ ದೇಗುಲವನ್ನು ಅಶರೀರವಾಣಿ ಮೊಳಗಿದ ಹಿನ್ನೆಲೆ ಸ್ಥಾಪಿಲ್ಪಟ್ಟಿದೆ ಎಂದು ಮಹೇಶ್ ಹೇಳಿದರು ಇದೇ ವೇಳೆ ವಾಸವಾಚಾರ್, ಇಂದ್ರೇಶ್, ಶಿವಪ್ರಸಾದ್,ಲೋಕೇಶ್, ಪ್ರದೀಪ್ ಕುಮಾರ್, ಶ್ರೀಧರ್ ಮತ್ತಿತರರಿದ್ದರು.