ಕೊಪ್ಪಪವಿತ್ರ ಧಾರ್ಮಿಕ ಕ್ಷೇತ್ರ ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಶ್ರೀಮಠದಲ್ಲಿ ಶರನ್ನವರಾತ್ರಿ ಮಹೋತ್ಸವ 7ನೇ ದಿನ ಶನಿವಾರ, ಆಶ್ವಯುಜ ಶುಕ್ಲ ಸಪ್ತಮೀ ತಿಥಿ ಶ್ರೀ ಶಾರದಾ ಪರಮೇಶ್ವರೀ ಅಮ್ಮನ ಸನ್ನಿಧಿಯಲ್ಲಿ ಸಂಪನ್ನವಾಯಿತು.
ಹರಿಹರಪುರ ಶ್ರೀ ಶಾರದಾ ಪರಮೇಶ್ವರೀಗೆ ‘ಅಶ್ವಾರೋಹಣ’ ಅಲಂಕಾರ
ಕನ್ನಡಪ್ರಭ ವಾರ್ತೆ, ಕೊಪ್ಪಪವಿತ್ರ ಧಾರ್ಮಿಕ ಕ್ಷೇತ್ರ ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಶ್ರೀಮಠದಲ್ಲಿ ಶರನ್ನವರಾತ್ರಿ ಮಹೋತ್ಸವ 7ನೇ ದಿನ ಶನಿವಾರ, ಆಶ್ವಯುಜ ಶುಕ್ಲ ಸಪ್ತಮೀ ತಿಥಿ ಶ್ರೀ ಶಾರದಾ ಪರಮೇಶ್ವರೀ ಅಮ್ಮನ ಸನ್ನಿಧಿಯಲ್ಲಿ ಸಂಪನ್ನವಾಯಿತು.
ದೇವಿಗೆ ಅಶ್ವಾರೋಹಣ (ಐಂದ್ರಿ) ಅಲಂಕಾರ: ದಿನದ ಧಾರ್ಮಿಕ ವಿಧಿ-ವಿಧಾನಗಳ ಅಂಗವಾಗಿ ಬೆಳಗ್ಗೆ ಶ್ರೀ ಶಾರದಾ ಪರಮೇಶ್ವರೀ ಅಮ್ಮನವರಿಗೆ ನಯನಮನೋಹರ ‘ಅಶ್ವಾರೋಹಣ’ (ಐಂದ್ರಿ) ಅಲಂಕಾರ ನೆರವೇರಿಸಲಾಯಿತು.ಜಗದ್ಗುರುಗಳಿಂದ ವಿಶೇಷ ಪೂಜೆ: ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಹಸ್ತಗಳಿಂದ ಬೆಳಗ್ಗೆ ಶ್ರೀ ಶಾರದಾ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಂಪನ್ನ ಗೊಂಡಿತು. ಭಕ್ತಾದಿಗಳು ವಿಶೇಷ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ತಾಯಿಯ ಕೃಪೆಗೆ ಪಾತ್ರರಾದರು.
ಶ್ರೀಚಕ್ರ ಪೂಜೆ-ದರ್ಬಾರ್ ಸೇವೆ: ರಾತ್ರಿ ಶ್ರೀಚಕ್ರ ಪೂಜೆ ನಂತರ ಪರಮಪೂಜ್ಯ ಶ್ರೀ ಶ್ರೀಗಳವರ ದಿವ್ಯ ಸಮ್ಮುಖದಲ್ಲಿ ಸಾಂಪ್ರದಾಯಿಕ ದರ್ಬಾರ್ ಹಾಗೂ ಅಷ್ಟಾವಧಾನ ಸೇವೆಗಳು ಶ್ರದ್ಧಾ-ಭಕ್ತಿಗಳಿಂದ ನೆರವೇರಿದವು.ಈ ಪುಣ್ಯ ಪರ್ವದ ದಿನದಂದು ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆ ಭಕ್ತಾದಿಗಳು ಪಾಲ್ಗೊಂಡು ದೇವರ ದರ್ಶನ ಪಡೆದು, ಮಹಾಸ್ವಾಮಿಗಳ ಆಶೀರ್ವಾದ ಪಡೆದರು.
ಸಂಜೆ 5:30ಕ್ಕೆ ಶ್ರೀಮಠದಲ್ಲಿ ಸಾಂಸ್ಕೃತಿಕ ಸೌರಭದ ಅಂಗವಾಗಿ ವಿದುಷಿ ಸುನಾದ ಪಿ.ಎಸ್. ಮತ್ತು ವಿದುಷಿ ಕುಮಾರಿ ಸುಸ್ಮಿತ ಪಿ.ಎಸ್. ಹಾಗೂ ವೃಂದದವರಿಂದ ಭಕ್ತಿಪೂರ್ಣ ‘ದ್ವಂದ್ವ ಹಾಡುಗಾರಿಕೆ’ ಯಶಸ್ವಿಯಾಗಿ ನೆರವೇರಿತು.