ಮೌಲ್ಯಗಳ ಸಮಾಜಕ್ಕೆ ನೀಡುವ ಸಲುವಾಗಿ ಮಹನೀಯರ ಜಯಂತಿ ಆಚರಣೆ

| Published : Mar 30 2025, 03:03 AM IST

ಮೌಲ್ಯಗಳ ಸಮಾಜಕ್ಕೆ ನೀಡುವ ಸಲುವಾಗಿ ಮಹನೀಯರ ಜಯಂತಿ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಡಾ. ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂದೇಶಗಳನ್ನು ಜೀವನ ಮೌಲ್ಯಗಳನ್ನು ಸಮಾಜಕ್ಕೆ ನೀಡುವ ಸಲುವಾಗಿ ಈ ಇಬ್ಬರೂ ಮಹನೀಯರ ಜಯಂತಿಯನ್ನು ಎಲ್ಲ ಇಲಾಖೆಗಳ ಮತ್ತು ಸಮಾಜದ ಹಾಗೂ ಸಂಘ ಸಂಸ್ಥೆಗಳ ಸಹಕಾರದಿಂದ ಅರ್ಥಪೂರ್ಣವಾಗಿ, ವಿಜೃಂಭಣೆಯಿಂದ ಆಚರಣೆ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಹಸೀಲ್ದಾರ್ ಅನಿಲ ಬಡಿಗೇರ ಕರೆ ನೀಡಿದರು.

ಶಿರಹಟ್ಟಿ: ಡಾ. ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂದೇಶಗಳನ್ನು ಜೀವನ ಮೌಲ್ಯಗಳನ್ನು ಸಮಾಜಕ್ಕೆ ನೀಡುವ ಸಲುವಾಗಿ ಈ ಇಬ್ಬರೂ ಮಹನೀಯರ ಜಯಂತಿಯನ್ನು ಎಲ್ಲ ಇಲಾಖೆಗಳ ಮತ್ತು ಸಮಾಜದ ಹಾಗೂ ಸಂಘ ಸಂಸ್ಥೆಗಳ ಸಹಕಾರದಿಂದ ಅರ್ಥಪೂರ್ಣವಾಗಿ, ವಿಜೃಂಭಣೆಯಿಂದ ಆಚರಣೆ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಹಸೀಲ್ದಾರ್ ಅನಿಲ ಬಡಿಗೇರ ಕರೆ ನೀಡಿದರು.

ಶನಿವಾರ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಇಬ್ಬರು ನಾಯಕರ ಜನ್ಮ ದಿನ ಆಚರಣೆಗೆ ಕರೆದಿದ್ದ ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಮಾತನಾಡಿದರು. ೫ರಂದು ಡಾ. ಬಾಬು ಜಗಜೀವನರಾಂ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಗುವುದು. ಏಪ್ರಿಲ್ ೧೪ರಂದು ಉಭಯ ನಾಯಕರ ಜಯಂತಿಯನ್ನು ಸಮುದಾಯದವರ ಸಹಕಾರದಿಂದ ಸಡಗರ ಹಾಗೂ ಸಂಭ್ರಮದಿಂದ ಆಚರಣೆ ಮಾಡಲಾಗುವುದು ಎಂದು ಹೇಳಿದರು.

ಜಯಂತಿಗಳ ಆಚರಣೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಎಲ್ಲಾ ಸಮುದಾಯದವರು ಸೇರಿ ಜಯಂತಿಗಳನ್ನು ಆಚರಿಸಬೇಕು. ಜಯಂತಿಗಳ ಆಚರಣೆಯ ಉದ್ದೇಶ ಮಹನೀಯರ ಆದರ್ಶಗಳನ್ನು ಪಾಲನೆ ಮಾಡುವುದು ಆಗಿದೆ. ಪ್ರತಿ ವರ್ಷದಂತೆ ಈ ಬಾರಿಯು ಶಿಷ್ಟಾಚಾರದ ಪ್ರಕಾರ ಕಾರ್ಯಕ್ರಮ ಅಚ್ಚುಕಟ್ಟಾಗಿ ಮಾಡಬೇಕು. ಎಲ್ಲ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಹಾಜರಿರಬೇಕು. ಸಮಾಜದ ಮುಖಂಡರು ಯಶಸ್ವಿ ಕಾರ್ಯಕ್ರಮ ಆಯೋಜನೆಗೆ ಸಹಕಾರ ನೀಡಬೇಕು ಎಂದರು. ತಾಲೂಕಿನ ಎಲ್ಲ ಶಾಲೆ, ಕಾಲೇಜ, ಅಂಗನವಾಡಿ ಕೇಂದ್ರಗಳು ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಉಭಯ ಮಹನೀಯರ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಹಸೀಲ್ದಾರ್ ಸೂಚನೆ ನೀಡಿದರು.ಆಗ್ರಹ: ಕಳೆದ ಎರಡು ಮೂರು ವರ್ಷಗಳಿಂದ ವಿಧಾನಸಭಾ ಚುನಾವಣೆ, ಕೋವಿಡ್ ಅಂತಾ ಮಹನೀಯರ ಜಯಂತಿಯನ್ನು ಇಲಾಖೆಯಲ್ಲಿ ಸಾಂಕೇತಿಕವಾಗಿ ಆಚರಣೆ ಕೈಬಿಡಲಾಗಿದೆ. ಈ ಬಾರಿ ವಿಶೇಷ, ವಿಭಿನ್ನ, ವಿಜೃಂಭಣೆ, ಸಡಗರ, ಸಂಭ್ರಮದಿಂದ ಹಾಗೂ ಅರ್ಥಪೂರ್ಣವಾಗಿ ಉಭಯ ಮಹನೀಯರ ಜಯಂತಿ ಆಚರಣೆ ಮಾಡಬೇಕು. ಸಾರೋಟಿನಲ್ಲಿ ಉಭಯ ನಾಯಕರ ಭಾವಚಿತ್ರ ಮೆರವಣಿಗೆ ಮಾಡಬೇಕು ಎಂದು ಮುಖಂಡರಾದ, ಮೋಹನ್ ಗುತ್ತೆಮ್ಮನವರ, ನಾಗರಾಜ ಲಕ್ಕುಂಡಿ, ನಾಗರಾಜ ಪೋತರಾಜ, ಮುತ್ತು ಭಾವಿಮನಿ ಆಗ್ರಹಿಸಿದರು. ಮೆರವಣಿಗೆಗೆ ಕಲಾ ತಂಡ, ವೇದಿಕೆ ಅಲಂಕಾರ, ಆಸನ, ಆಮಂತ್ರರಣ ಪತ್ರಿಕೆ, ಉಪನ್ಯಾಸಕರ ಆಯ್ಕೆ ಸೇರಿಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಯಾವುದೇ ಲೋಪವಾಗದಂತೆ ಅಚ್ಚುಕಟ್ಟಾಗಿ ಮಾಡಬೇಕು ಎನ್ನುವ ಕುರಿತು ಚರ್ಚೆ ನಡೆಯಿತು. ಜಯಂತಿ ಕೇವಲ ಮುಖಂಡರು ಸೇರಿ ಆಚರಣೆ ಮಾಡಿದರೆ ಮಹತ್ವ ಬರುವುದಿಲ್ಲ. ತಾಲೂಕಿನ ಪ್ರತಿಯೊಂದು ಗ್ರಾಮದಿಂದ ಜನರನ್ನು ಕರೆ ತರುವ ವ್ಯವಸ್ಥೆ ಮಾಡಬೇಕು ಎಂದು ಜಾನು ಲಮಾಣಿ ತಿಳಿಸಿದರು. ಜಯಂತಿ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಪದವಿಯಲ್ಲಿ ಹೆಚ್ಚು ಅಂಕಗಳಿಸಿದ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸುವುದು. ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಇಲಾಖೆಗಳ ಸಹಾಯ ಸೌಲಭ್ಯ ನೀಡುವ ಕುರಿತು ಮುಖಂಡರು ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದರು. ಮುಖಂಡರಾದ ಮುತ್ತು ಭಾವಿಮನಿ, ರವಿ ಗುಡಿಮನಿ, ಜಾನು ಲಮಾಣಿ, ಬಸಣ್ಣ ನಾಯ್ಕರ, ಬಸವರಾಜ ಪೂಜಾರ, ಈರಣ್ಣ ಚವ್ಹಾಣ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೋಪಾಲ ಲಮಾಣಿ, ಶಿವಪ್ಪ ಹದ್ಲಿ, ಎಂ.ಎಸ್. ಸಂಕನೂರ, ಮರಿಗೌಡ ಸುರಕೋಡ, ರೇವಣೆಪ್ಪ ಮನಗೂಳಿ, ಫಕ್ಕೀರೇಶ ತಿಮ್ಮಾಪೂರ, ಮೃತ್ಯುಂಜಯ ಗುಡ್ಡದಾನವೇರಿ, ಬಾರಿಗಿಡದ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.