ಸಂಭ್ರಮದ ಪರ್ವತೇಶ ಕಾರ್ತಿಕೋತ್ಸವ

| Published : Jan 02 2024, 02:15 AM IST

ಸಾರಾಂಶ

ಗುಳೇದಗುಡ್ಡ: ಸಮೀಪದ ಪರ್ವತಿ ಗ್ರಾಮದ ಆರಾಧ್ಯ ದೈವ ಶ್ರೀ ಪರ್ವತೇಶ ಕಾರ್ತಿಕೋತ್ಸವದ ನಿಮಿತ್ತ ಶ್ರೀ ವೈಕುಂಠ ರಾಮ ದೇವರ ಮಹಾಪೂಜಾ ಕಾರ್ಯಕ್ರಮ ಕೂಡ್ಲಿ ಆರ್ಯ ಅಕ್ಷೋಭ್ಯ ತೀರ್ಥ ಮಠಾಧೀಶ ಶ್ರೀ ರಘು ವಿಜಯ ತೀರ್ಥ ಶ್ರೀಗಳಿಂದ ಶ್ರೀ ಪರ್ವತೇಶ ದೇವಸ್ಥಾನದಲ್ಲಿ ನಡೆಯಿತು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಸಮೀಪದ ಪರ್ವತಿ ಗ್ರಾಮದ ಆರಾಧ್ಯ ದೈವ ಶ್ರೀ ಪರ್ವತೇಶ ಕಾರ್ತಿಕೋತ್ಸವದ ನಿಮಿತ್ತ ಶ್ರೀ ವೈಕುಂಠ ರಾಮ ದೇವರ ಮಹಾಪೂಜಾ ಕಾರ್ಯಕ್ರಮ ಕೂಡ್ಲಿ ಆರ್ಯ ಅಕ್ಷೋಭ್ಯ ತೀರ್ಥ ಮಠಾಧೀಶ ಶ್ರೀ ರಘು ವಿಜಯ ತೀರ್ಥ ಶ್ರೀಗಳಿಂದ ಶ್ರೀ ಪರ್ವತೇಶ ದೇವಸ್ಥಾನದಲ್ಲಿ ನಡೆಯಿತು.

ಬೆಳಗ್ಗೆ ಶ್ರಿಗಳವರಿಂದ ಪಾಠ, ಆನಂತರ ಶ್ರೀಗಳವರಿಂದ ನಿರ್ಮಲ್ಯ ಅಭಿಷೇಕ, ಭಕ್ತರಿಂದ ಶ್ರೀಗಳ ಪಾದ ಪೂಜೆ, ಶ್ರೀಗಳಿಂದ ಶ್ರೀ ಪರ್ವತೇಶನಿಗೆ ಅಭಿಷೇಕ ಹಾಗೂ ಮಂಗಳಾರತಿ, ಸಂಸ್ಥಾನ ಮಹಾ ಪೂಜೆ ನಂತರ ತೀರ್ಥ ಪ್ರಸಾದ ಜರುಗಿತು. 30 ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದ ಹನುಮಂತರಾವ ಕಾರಕೂನ ಹಾಗೂ ಪರ್ವತೇಶ ಕಾರಕೂನ ಅವರಿಗೆ ಪರ್ವತೇಶ ಕಾರ್ತಿಕೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿ ವತಿಯಿಂದ ಗೌರವಿಸಲಾಯಿತು. ಕಾರಕೂನ, ಸುಂಕದ, ಪರ್ವತೀಕರ ಕುಟುಂಬದವರಿಂದ ಪರ್ವತೇಶ ದೇವರಿಗೆ ಗಂಡಾರತಿ ನೆರವೇರಿತು.

ಬೆಳಗ್ಗೆ ಕಾಕಡಾರತಿ, ನೀರ್ಮಲ್ಯ ಅಭಿಷೇಕ, ಪಂಚಾಮೃತ, ಮಹಾಭಿಷೇಕ ಮತ್ತು ಪರ್ವತೇಶ ದೇವರಿಗೆ ರಜತ ಕವಚ ತೊಡಿಸುವಿಕೆ ಹಾಗೂ ಅಲಂಕಾರ ಮಾಡಲಾಗಿತ್ತು. ಪಲ್ಲಕ್ಕಿ ಸೇವೆ ಹಾಗೂ ಗಂಡಾರತಿ ಸೇವೆ ಹಾಗೂ ಸುಮಂಗಲೆಯರಿಂದ ಅಗ್ನಿ ಹಾಯುವ ಕಾರ್ಯಕ್ರಮ ನಡೆಯಿತು.

ಸಮಿತಿಯ ಅಧ್ಯಕ್ಷ ಸಂಜೀವ ಕಾರಕೂನ, ಗೋಪಾಲ ಪರ್ವತೀಕರ, ನಾರಾಯಣ ಜೋಶಿ, ಕೃಷ್ಣಮೂರ್ತಿ ಕಾರಕೂನ, ಆನಂದ ನರೇಗಲ್, ವಿನೋದ ಅಂಬೇಕರ ಸೇರಿದಂತೆ ಇತರರು ಇದ್ದರು.