ಸಾರಾಂಶ
ಎನ್‌ಡಿಎ ನೇತೃತ್ವದ ಬಿಜೆಪಿ ಸರಕಾರ ಸತತ ಮೂರನೇ ಬಾರಿ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕೋಟೆ ಭಾಗದ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದರು.
ರಟ್ಟೀಹಳ್ಳಿ:ಎನ್‌ಡಿಎ ನೇತೃತ್ವದ ಬಿಜೆಪಿ ಸರಕಾರ ಸತತ ಮೂರನೇ ಬಾರಿ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕೋಟೆ ಭಾಗದ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಸುಶೀಲ್ ನಾಡಿಗೇರ ಮಾತನಾಡಿ, ಭವ್ಯ ಭಾರತದ ಪ್ರತಿಯೊಬ್ಬ ಪ್ರಜೆಗಳು ಇಂದು ಸಂಭ್ರಮ ಪಡುವಂತ ಸುದಿನವಾಗಿದ್ದು ಮೂರನೇ ಭಾರಿ ಪ್ರಧಾನ ಸೇವಕನಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ನಮ್ಮೆಲ್ಲರ ಸುದಿನ, ಮೋದಿಯವರ ಆಡಳಿತದಲ್ಲಿ ಭಾರತ ದೇಶದ ಕೀರ್ತಿ ಉತ್ತುಂಗಕ್ಕೇರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಕಳೆದ ಹತ್ತು ವರ್ಷದ ಆಡಳಿತಾವಧಿಯಲ್ಲಿ ಕಳಂಕ ರಹಿತ ಆಡಳಿತ ನೀಡಿ ದೇಶದ ಜನ ಸಾಮಾನ್ಯನ ಮನ ಗೆದ್ದ ಏಕೈಕ ಪ್ರಧಾನಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ನಮ್ಮೆಲ್ಲರಿಗೂ ಸಂತಸ ಮನೆ ಮಾಡಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.ಭಗತ್ ಸಿಂಗ್ ಗೆಳೆಯರ ಬಳಗ, ಶಿವಾಜಿ ನಗರ, ಕುಮಾರೇಶ್ವರ ಕಾಲೇಜ್ ರೋಡ್, ಒಕ್ಕಲಗೇರಿ ಓಣಿ, ಸಂಗೋಳ್ಳಿ ರಾಯಣ್ಣ ವೃತ್ತ ಹಾಗೂ ಇನ್ನಿತರ ಸ್ಥಳಗಳಲ್ಲಿ ಬಿಜೆಪಿ ಕಾರ್ಯಕರ್ತರು ಮೋದಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ರಾಜುಗೌಡ ಪಾಟೀಲ್, ರಾಜು ಉಪ್ಪಾರ, ಉಮೇಶ ಭಿಮಪ್ಪನವರ, ಗಿರೀಶ ನಾಡಿಗೇರ, ಸಿದ್ದನಗೌಡ ಪಾಟೀಲ್, ಸುನೀಲ ಬಸನಗೌಡ್ರ, ಶಾಮರಾವ್ ಜಾಧವ, ರಂಗಪ್ಪ ಸುಣಗಾರ, ಮಹೇಶ ಸೋಮನಗೌಡ್ರ, ರಾಮು ಉಪ್ಪಾರ ಲಕ್ಷ್ಮಣ ಹುಲ್ಲತ್ತಿ, ನಾಗರಾಜ ಮಾಯಾಚಾರಿ, ಜಟ್ಟೇಪ್ಪ ಸುಣಗಾರ ಮುಂತಾದವರು ಇದ್ದರು.