ಸಾರಾಂಶ
ಎಸ್ಸಿ, ಎಸ್ಟಿ ಒಳಮೀಸಲಾತಿ ಕಾನೂನು ಬದ್ಧ ಎಂದು ಸುಪ್ರೀಂಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿ ಚಾಮರಾಜನಗರದ 15ನೇ ವಾರ್ಡ್‌ನಲ್ಲಿ ಡಾ.ಬಾಬುಜಗಜೀವನರಾಂ ಯುವಕರ ಸಂಘದ ವತಿಯಿಂದ ಸಂಭ್ರಮಾಚರಣೆ ಮಾಡಲಾಯಿತು.
ಚಾಮರಾಜನಗರ: ಎಸ್ಸಿ, ಎಸ್ಟಿ ಒಳಮೀಸಲಾತಿ ಕಾನೂನು ಬದ್ಧ ಎಂದು ಸುಪ್ರೀಂಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿ ನಗರದ 15ನೇ ವಾರ್ಡ್‌ನಲ್ಲಿ ಡಾ.ಬಾಬುಜಗಜೀವನರಾಂ ಯುವಕರ ಸಂಘದ ವತಿಯಿಂದ ಸಂಭ್ರಮಾಚರಣೆ ಮಾಡಲಾಯಿತು.
ಸಂಘದ ಗೌರವ ಅಧ್ಯಕ್ಷ ಕೆ.ಜಗದೀಶ್, ಅಧ್ಯಕ್ಷ ಡ್ಯಾನ್ಸ್ ಬಸವರಾಜು, ಕಾರ್ಯದರ್ಶಿ ರಾಜೇಶ್ ಅವರ ನೇತೃತ್ವದಲ್ಲಿ ಡಾ.ಬಾಬು ಜಗಜೀವನರಾಂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ಜೈಕಾರ ಕೂಗಿ ಸಂಭ್ರಮಾಚರಣೆ ಮಾಡಲಾಯಿತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಕೆ.ಜಗದೀಶ್ ಮಾತನಾಡಿ, ಒಳಮೀಸಲಾತಿ ನ್ಯಾಯಬದ್ಧವಾಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ಸ್ವಾಗತಾರ್ಹ ಎಂದರು.ರಾಜ್ಯ ಸರ್ಕಾರ ತಕ್ಕಂತೆ ಒಳ ಮೀಸಲಾತಿ ಕಲ್ಪಿಸಲು ಸ್ವತಂತ್ರವಾಗಿದೆ ಎಂದು ಕೋರ್ಟ್ ಹೇಳಿದೆ. ಆದ್ದರಿಂದ ಕೂಡಲೇ ರಾಜ್ಯ ಸರ್ಕಾರ ಸುಪ್ರೀಂಕೋರ್ಟ ಆದೇಶವನ್ನು ತಕ್ಷಣ ಜಾರಿ ಮಾಡಬೇಕು. ಸಿಎಂ ಹಾಗೂ ಕಾನೂನು ಮಂತ್ರಿಗಳು ಈ ನಿಟ್ಟಿನಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಿ ಕೆಲಸ ಮಾಡಬೇಕು ಎಂದು ಜಗದೀಶ್ ಒತ್ತಾಯಿಸಿದರು.
ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಬಸವನಪುರ ರಾಜಶೇಖರ್, ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಎಸ್.ಬಸವರಾಜು, ಕೆಎಂಎಫ್ ನಿವೃತ್ತ ಜವರಯ್ಯ, ಕಿಲಗೆರೆ ವೆಂಕಟರಾಜು, ಬಿಸಲವಾಡಿ ಸಿದ್ದರಾಜು, ಗ್ರಾ.ಪಂ ಅಧ್ಯಕ್ಷೆ ಭಾಗ್ಯಮ್ಮ ಜಿಲ್ಲಾ ಮಾದಿಗ ಮಹಾಸಭಾ ಅಧ್ಯಕ್ಷ ಎಂ. ಶಿವಕುಮಾರ, ವೆಲ್ಡಿಂಗ್ ಲಿಂಗರಾಜು, ಮಹದೇವಯ್ಯ, ಕೆ. ಕೆಸ್ತೂರು ಮರಪ್ಪ, ಕುಮಾರ್, ಆಟೋ ಲಿಂಗರಾಜು ಇತರರು ಹಾಜರಿದ್ದರು.