ಕುಮಾರಣ್ಣ ಅವರು ಇಂದು ನಡೆಯುತ್ತಿರುವ ಜೆಎಸ್ಎಸ್ ಸ್ವಾಮೀಜಿ ಕಾರ್ಯಕ್ರಮಕ್ಕೆ ಬರುತ್ತಿದ್ದು, ಮಳವಳ್ಳಿಗೆ ರಾಷ್ಟ್ರಪತಿ ಬರಲು ಕುಮಾರಣ್ಣ ಅವರು ಕಾರಣ. ಇದು ತಾಲೂಕಿನ ನಮ್ಮ ಭಾಗ್ಯ. ಮಳವಳ್ಳಿ ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಈ ಗ್ರಾಮಕ್ಕೆ ಬಂದಿದ್ದೇನೆ.
ಕನ್ನಡಪ್ರಭ ವಾರ್ತೆ ಹಲಗೂರು
ಸಮೀಪದ ದಳವಾಯಿ ಕೋಡಿಹಳ್ಳಿಯಲ್ಲಿ ಮಾಜಿ ಸಿಎಂ, ಕೇಂದ್ರ ಕೈಗಾರಿಕೆ ಹಾಗೂ ಉಕ್ಕು ಮಂತ್ರಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಭಾವಚಿತ್ರಕ್ಕೆ ಜೆಡಿಎಸ್ ಕಾರ್ಯಕರ್ತರು ಹಾಲರವಿ ಸೇವೆ ಮಾಡಿ ಕೇಕ್ ಕತ್ತರಿಸಿ ಸಿಹಿ ಹಂಚಿ ಹುಟ್ಟುಹಬ್ಬ ಆಚರಿಸಿದರು.ಕಾರ್ಯಕರ್ತರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಪಾಲ್ಗೊಂಡು ಕೇಕ್ ಕತ್ತರಿಸಿ ಕಾರ್ಯಕರ್ತರಿಗೆ ಸಿಹಿ ತಿನಿಸಿ ಮಾತನಾಡಿ, ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ ಬಡವರು, ರೈತರು ಹಾಗೂ ಸರ್ವರ ಅಭಿವೃದ್ಧಿಗೆ ಶ್ರಮಿಸಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.
ಎಚ್ಡಿಕೆ ಹುಟ್ಟುಹಬ್ಬವನ್ನು ದಳವಾಯಿ ಕೋಡಿಹಳ್ಳಿ ಗ್ರಾಪಂ ವ್ಯಾಪ್ತಿಯ ಕೇಂದ್ರ ಸ್ಥಾನದಲ್ಲಿ ನಮ್ಮ ಆಶ್ರಯ ಕಾಲೋನಿ, ದೇವಿರಹಳ್ಳಿ, ಕೆಂಪಯ್ಯನದೊಡ್ಡಿ, ಬಾಳೆಹೊನ್ನಿಗ, ಬಸಾಪುರ ಹಗದೂರು ಗ್ರಾಮದ ಮುಖಂಡರು ಸೇರಿ ಬಹಳ ಪ್ರೀತಿಯಿಂದ ಆಚರಣೆ ಮಾಡಿದ್ದೀರಿ. ನಿಮ್ಮೆಲ್ಲರಿಗೂ ಜೆಡಿಎಸ್ ತಾಲೂಕು ಘಟಕದಿಂದ ಮತ್ತು ಬಿಜೆಪಿ ಸ್ನೇಹಿತರ ವತಿಯಿಂದ ತುಂಬು ಹೃದಯದ ಧನ್ಯವಾದ ತಿಳಿಸುತ್ತೇನೆ ಎಂದರು.ಕುಮಾರಣ್ಣ ಅವರು ಇಂದು ನಡೆಯುತ್ತಿರುವ ಜೆಎಸ್ಎಸ್ ಸ್ವಾಮೀಜಿ ಕಾರ್ಯಕ್ರಮಕ್ಕೆ ಬರುತ್ತಿದ್ದು, ಮಳವಳ್ಳಿಗೆ ರಾಷ್ಟ್ರಪತಿ ಬರಲು ಕುಮಾರಣ್ಣ ಅವರು ಕಾರಣ. ಇದು ತಾಲೂಕಿನ ನಮ್ಮ ಭಾಗ್ಯ. ಮಳವಳ್ಳಿ ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಈ ಗ್ರಾಮಕ್ಕೆ ಬಂದಿದ್ದೇನೆ. ಸುತ್ತಮುತ್ತಲಿನ ಎಲ್ಲಾ ಕುಮಾರಣ್ಣನ ಅಭಿಮಾನಿಗಳು ಆಗಮಿಸಿದ್ದೀರಿ. ಕುಮಾರಣ್ಣ ಅವರಿಗೆ ಆಯಸ್ಸು ಆರೋಗ್ಯ ಕೊಟ್ಟು ದೇವರು ಕಾಪಾಡಲಿ ಎಂದು ಶುಭ ಹಾರೈಸಿದರು.
ನಂತರ ದಳವಾಯಿ ಕೋಡಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಮಾಜಿ ಶಾಸಕ ಡಾ.ಅನ್ನದಾನಿ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿದರು. ಈ ವೇಳೆ ಹೋಬಳಿ ಘಟಕದ ಅಧ್ಯಕ್ಷ ತಮ್ಮಣ್ಣೇಗೌಡ, ದಿಶಾ ಕಮಿಟಿ ಸದಸ್ಯ ಕೃಷ್ಣ, ಶ್ರೀನಿವಾಸ್, ನಾಗರಾಜು, ಕುಮಾರ್, ಬಸವಲಿಂಗ, ಮಂಚೇಗೌಡ, ಶ್ರೀಧರ್, ಪ್ರವೀಣ್, ಪುಟ್ಟಲಿಂಗೇಗೌಡ, ಡಿ.ವೈ. ನಾಗರಾಜು (ಬಾಬು), ಕೃಷ್ಣ, ನಂದಿಪುರದ ಶ್ರೀಧರ್, ಕರಳಕಟ್ಟೆ ಸುರೇಶ್, ಗೊಲ್ಲರಳ್ಳಿ ಜಗದೀಶ್ ಸೇರಿದಂತೆ ನೂರಾರು ಕಾರ್ಯಕರ್ತರು, ಎಚ್ಡಿಕೆ ಅಭಿಮಾನಿಗಳು ಇದ್ದರು.