ಸಾರಾಂಶ
ತಾಲೂಕಿನ ಇತಿಹಾಸ ಪ್ರಸಿದ್ಧ ಉಚ್ಚಂಗಿದುರ್ಗದ ಐತಿಹಾಸಿಕ ಕೋಟೆ ಹಾಗೂ ಉಚ್ಚೆಂಗೆಮ್ಮನ ದೇವಸ್ಥಾನಕ್ಕೆ ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ತಾಲೂಕಿನ ಇತಿಹಾಸ ಪ್ರಸಿದ್ಧ ಉಚ್ಚಂಗಿದುರ್ಗದ ಐತಿಹಾಸಿಕ ಕೋಟೆ ಹಾಗೂ ಉಚ್ಚೆಂಗೆಮ್ಮನ ದೇವಸ್ಥಾನಕ್ಕೆ ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.ಇಲಾಖೆಯ ಅಧೀನದಡಿ ಬರುವ ಕೋಟಿಯನ್ನು ಅಧಿಕಾರಿಗಳ ತಂಡ ಕೋಟೆ ಕೊತ್ತಲು ಮೂಲಭೂತ ಸೌಕರ್ಯಗಳ ಬಗ್ಗೆ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಇಲ್ಲಿಯ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ ಮಲ್ಲಪ್ಪ ಹಲವಾರು ಸಮಸ್ಯೆಗಳ ಬಗ್ಗೆ ವಿವರಿಸಿದರು. ಮುಖ್ಯವಾಗಿ ಮೂಲಭೂತ ಸೌಕರ್ಯಗಳಿಲ್ಲ, ಅರಣ್ಯ ಇಲಾಖೆ ಮತ್ತು ಪುರತತ್ವ ಇಲಾಖೆಯವರು ಅಭಿವೃದ್ಧಿ ಮಾಡಿಲ್ಲ ವರ್ಷಕ್ಕೆ ಇಲ್ಲಿಗೆ 25 ಲಕ್ಷ ಭಕ್ತರು ಬರುತ್ತಾರೆ, ವಯಸ್ಸಾದವರಿಗೆ ದೇವಸ್ಥಾನಕ್ಕೆ ಬರಲು ತೊಂದರೆ ಇದೆ. ಇಲ್ಲಿ ಹಂದಿ, ಕತ್ತೆಗಳ ಹಾವಳಿ ಜಾಸ್ತಿ ಇದ್ದು, ಹೊಂಡದಲ್ಲಿ ಒಬ್ಬ ಭಕ್ತ ಸತ್ತಿದ್ದಾನೆ. ವಾಹನ ನಿಲುಗಡೆ ವ್ಯವಸ್ಥೆ, ರಸ್ತೆ ದುರಸ್ತಿ ಸೇರಿ ದೇವಸ್ಥಾನಕ್ಕೆ ಅಗತ್ಯವಾದ ಮೂಲ ಸೌಕರ್ಯಗಳ ಕೊರತೆ ಇದೆ ಎಂದು ತಿಳಿಸಿದರು.ಐತಿಹಾಸಿಕ ಸ್ಮಾರಕಗಳ ಕೋಟೆಯಲ್ಲಿ ಯಾವುದೇ ಸಿಮೆಂಟ್ ಮತ್ತು ಕಬ್ಬಿಣಗಳನ್ನು ಬಳಸದೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಮಾಡೋಣ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಹೇಳಿದರು.
ಈ ಸಂದರ್ಭ ದೇವಸ್ಥಾನದ ಇಒ ಮಲ್ಲಪ್ಪ, ಎಚ್.ಕೆ. ಗಂಗಾಧರ್, ಮುಖಂಡ ಶಿವಕುಮಾರಸ್ವಾಮಿ, ದೇವಸ್ಥಾನ ಸಮಿತಿ ಕಾರ್ಯಕಾರಿ ಮಂಡಳಿ ಸದಸ್ಯರು, ಅಭಿಯಂತರರು, ಸಾರ್ವಜನಿಕರು ಉಪಸ್ಥಿತರಿದ್ದರು.