ಇಸ್ರೇಲ್‌ನ ಭಾರತೀಯರ ರಕ್ಷಣೆಗೆ ಕೇಂದ್ರ ಬದ್ಧ: ಯಶ್ಪಾಲ್‌ ಸುವರ್ಣ

| Published : Oct 14 2023, 01:00 AM IST

ಇಸ್ರೇಲ್‌ನ ಭಾರತೀಯರ ರಕ್ಷಣೆಗೆ ಕೇಂದ್ರ ಬದ್ಧ: ಯಶ್ಪಾಲ್‌ ಸುವರ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಇಸ್ರೇಲ್ಲ್‌ನಲ್ಲಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಬದ್ಧ: ಶಾಸಕ ಯಶ್ಪಾಲ್
ಕನ್ನಡಪ್ರಭ ವಾರ್ತೆ ಉಡುಪಿ ಯುದ್ಧಪೀಡಿತ ಇಸ್ರೇಲ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು, ಆಪರೇಶನ್ ಅಜಯ್ ಮೂಲಕ ಭಾರತೀಯರನ್ನು ತಾಯ್ನಾಡಿಗೆ ಕರೆತರುತ್ತಿದೆ, ಈ ಬಗ್ಗೆ ಆತಂಕ ಬೇಡ ಎಂದು ಎಂದು ಶಾಸಕ ಯಶ್ಪಾಲ್ ಸುವರ್ಣ ಅವರು ಉಡುಪಿ ಧರ್ಮ ಪ್ರಾಂತ್ಯದ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೋ ಅವರಿಗೆ ಮನವರಿಕೆ ಮಾಡಿದರು. ಶುಕ್ರವಾರ ಬಿಷಪ್ ಅವರನ್ನು ಭೇಟಿ ಮಾಡಿದ ಅವರು, ಕರಾವಳಿ ಜಿಲ್ಲೆಯವರು ಹೆಚ್ಚಿನ ಸಂಖ್ಯೆಯಲ್ಲಿ ಅದರಲ್ಲು ಕ್ರೈಸ್ತ ಧರ್ಮಿಯರು ಇಸ್ರೇಲ್ ನಲ್ಲಿ ಉದ್ಯೋಗದಲ್ಲಿದ್ದಾರೆ. ಅವರ ಸಹಾಯಕ್ಕಾಗಿ ಈಗಾಗಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿದೇಶಾಂಗ ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ತಮ್ಮ ಶಾಸಕರ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಿದ್ದು, ದೆಹಲಿಯ ರಾಯಭಾರಿ ಕಚೇರಿಯ ಮೂಲಕ ಸಂಪರ್ಕ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಉಡುಪಿಯ ಧರ್ಮಗುರುಗಳಾದ ಚಾರ್ಲ್ಸ್ ಮಿನೇಜಸ್, ಸಮುದಾಯದ ಪ್ರಮುಖರಾದ ರಾಜೇಶ್, ಆಲ್ವಿನ್ ಡಿಸೋಜ, ಡೆನಿಸ್ ಮಸ್ಕರೇನಸ್ , ಶೆರ್ಲಿನ್, ನಗರ ಬಿಜೆಪಿ ಕಾರ್ಯದರ್ಶಿ ದಿನೇಶ್ ಅಮೀನ್, ಮಾಜಿ ನಗರ ಸಭಾ ಸದಸ್ಯರಾದ ಪ್ರಶಾಂತ್ ಭಟ್, ಅರುಣಾ ಪೂಜಾರಿ ಇದ್ದರು.