ಸಾರಾಂಶ
ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವುದೇ ಕೊಡುಗೆ ನೀಡದ ಕಾರಣಕ್ಕಾಗಿ ಹೂರಣವಿಲ್ಲದ ಹೋಳಿಗೆಯೆಂಬುದಾಗಿ ಟೀಕಿಸಿದ್ದನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಸಮರ್ಥಿಸಿಕೊಂಡಿದ್ದಾರೆ.
ದಾವಣಗೆರೆ: ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವುದೇ ಕೊಡುಗೆ ನೀಡದ ಕಾರಣಕ್ಕಾಗಿ ಹೂರಣವಿಲ್ಲದ ಹೋಳಿಗೆಯೆಂಬುದಾಗಿ ಟೀಕಿಸಿದ್ದನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಮರ್ಥಿಸಿಕೊಂಡರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಹಜವಾಗಿಯೇ ತಾವು ಪ್ರತಿನಿಧಿಸುವ ರಾಜ್ಯಕ್ಕೆ ಏನಾದರೂ ಕೊಡುಗೆ ನೀಡುವ ನಿರೀಕ್ಷೆಯನ್ನು ರಾಜ್ಯದ ಜನತೆ ಹೊಂದಿದ್ದರು. ಆದರೆ, ಯಾವುದೇ ಯೋಜನೆ, ಹಣ ನೀಡದ ಕಾರಣಕ್ಕೆ ಹೂರಣವಿಲ್ಲದ ಹೋಳಿಗೆಯೆಂಬುದಾಗಿ ವ್ಯಾಖ್ಯಾನಿಸಿದ್ದೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ರಾಜ್ಯದ ಎಲ್ಲ ಸಂಸದರು, ಸಚಿವರು ಕೇಂದ್ರ ಬಜೆಟ್‌ಗೂ ಮುನ್ನ ಸಭೆ ಮಾಡಿ, ಕಳದೆ ವರ್ಷದ ಬಜೆಟ್‌ನ ಬೇಡಿಕೆಗಳಾದ ನೀರಾವರಿ, ದೆಹಲಿ ಏಮ್ಸ್ ಮಾದರಿಯ ಆಸ್ಪತ್ರೆ, ಐಐಟಿ ಸ್ಥಾಪನೆ, ಬೆಂಗಳೂರು ಅಭಿವೃದ್ಧಿ ಯೋಜನೆಗೆ ಸೂಕ್ತ ಅನುದಾನ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು ಎಂದು ತಿಳಿಸಿದರು.
ಆದರೂ, ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ರಾಜ್ಯಕ್ಕೆ ಅನುದಾನವನ್ನು ನೀಡಲಿಲ್ಲ. ಯಾವುದೇ ಹೊಸ ಯೋಜನೆಗಳನ್ನು ಘೋಷಿಸಲಿಲ್ಲ. ನಮ್ಮ ರಾಜ್ಯದ ಯಾವುದೇ ಬೇಡಿಕೆಗಳಿಗೆ ಕೇಂದ್ರದ ಬಜೆಟ್‌ನಲ್ಲಿ ಸ್ಪಂದನೆ ಸಿಗದ ಕಾರಣಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ರ ಬಜೆಟ್ ಹೂರಣವಿಲ್ಲದ ಹೋಳಿಗೆಯೆಂಬುದಾಗಿ ಪ್ರತಿಕ್ರಿಯೆ ನೀಡಿದ್ದೆ ಎಂದು ಪುನರುಚ್ಚರಿಸಿದರು.- - - -28ಕೆಡಿವಿಜಿ7, 8: ಡಾ.ಪ್ರಭಾ ಮಲ್ಲಿಕಾರ್ಜುನ