ಪಹಲ್ಗಾಮ್ ಹತ್ಯಾಕಾಂಡಕ್ಕೆ ಕೇಂದ್ರ ಸರ್ಕಾರ ವೈಫಲ್ಯ ಕಾರಣ: ಸೊರಕೆ

| Published : May 05 2025, 12:53 AM IST

ಪಹಲ್ಗಾಮ್ ಹತ್ಯಾಕಾಂಡಕ್ಕೆ ಕೇಂದ್ರ ಸರ್ಕಾರ ವೈಫಲ್ಯ ಕಾರಣ: ಸೊರಕೆ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಮಾಸಿಕ ಸಭೆ ನಡೆಯಿತು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಜಾತಿ, ಧರ್ಮ, ಆಕ್ರೋಶಗಳೆಲ್ಲಕ್ಕಿಂತ ದೇಶದ ಜನರ ರಕ್ಷಣೆಯೇ ಮುಖ್ಯವಾದುದು. ಪೆಹಲ್ಗಾಮ್ ಹತ್ಯಾಕಾಂಡ ಖಂಡನಾರ್ಹವಾದುದು, ಇಲ್ಲಿ ಕೇಂದ್ರ ಸರ್ಕಾರ ಜನರ ರಕ್ಷಣೆಯಲ್ಲಿ ವಿಫಲವಾದ್ದರಿಂದಲೇ ಈ ಘಟನೆ ಸಂಭವಿಸಿದೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

ಅವರು ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಮಾಸಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಮಾಜಿ ಸಂಸದ ಕೆ.ಜೆ. ಪ್ರಕಾಶ್ ಹೆಗಡೆ ಮಾತನಾಡಿ, ಕೇವಲ ಭಾಷಣ ಮಾಡಿ ಪ್ರಯೋಜನವಿಲ್ಲ ಕಾರ್ಯಸಾಧನೆ ಆಗಬೇಕು ಎಂದರು.ಪ್ರಾಸ್ತಾವಿಕ ಭಾಷಣ ಮಾಡಿದ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಕೈಗೊಂಡ ಕಾರ್ಯಕ್ರಮಗಳನ್ನು ವಿವರಿಸಿ ಮೇ 6ರಂದು ಬೈಂದೂರಿನಲ್ಲಿ ನಡೆಯುವ ಜೈ ಗಾಂಧಿ, ಜೈ ಭೀಮ್, ಜೈ ಸಂವಿಧಾನ ಸಮಾವೇಶಕ್ಕೆ ಎಲ್ಲರೂ ಬರಬೇಕೆಂದು ವಿನಂತಿಸಿದರು.ಸಭೆಯಲ್ಲಿ ಪ್ರಮುಖರಾದ ಎಂ.ಎ. ಗಬ್ಬುರ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ಮಲ್ಯಾಡಿ ಶಿವರಾಮ್ ಶೆಟ್ಟಿ, ದಿನೇಶ್ ಪುತ್ರನ್, ರಮೇಶ್ ಕಾಂಚನ್, ಸಂತೋಷ್ ಕುಲಾಲ್, ವೈ. ಸುಕುಮಾರ್, ಮಹಾಬಲ ಕುಂದರ್, ನರಸಿಂಹಮೂರ್ತಿ, ಹರೀಶ್ ಕಿಣಿ, ಶಬೀರ್ ಅಹಮ್ಮದ್, ಸೌರಬ್ ಬಲ್ಲಾಳ್, ಪ್ರತ್ಯಾತ್ ಶೆಟ್ಟಿ, ಪ್ರಶಾಂತ್ ಜತ್ತನ್, ರೋಷನ್ ಶೆಟ್ಟಿ, ನಾಗೇಶ್ ಉದ್ಯಾವರ, ಭುಜಂಗ ಶೆಟ್ಟಿ, ಸುರೇಶ್ ಶೆಟ್ಟಿ ಬನ್ನಂಜೆ, ಜ್ಯೋತಿ ಹೆಬ್ಬಾರ್, ಇಸ್ಮಾಯಿಲ್ ಆತ್ರಾಡಿ, ಹರೀಶ್ ಶೆಟ್ಟಿ ಪಾಂಗಳ, ಮುರಳಿ ಶೆಟ್ಟಿ, ಸಂಧ್ಯಾ ತಿಲಕ್ ರಾಜ್, ಲೂಯಿಸ್ ಲೋಬೊ, ಕೀರ್ತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಕಳೆದ ಅವಧಿಯಲ್ಲಿ ಅಗಲಿದ ಕಾಂಗ್ರೆಸ್ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಕೆ. ಅಣ್ಣಯ್ಯ ಸೇರಿಗಾರ್ ನಿರೂಪಿಸಿದರು. ಕೆಪಿಸಿಸಿ ಪಾನೆಲಿಸ್ಟ್ ವರೋನಿಕ ಕರ್ನೆಲಿಯೊ ವಂದಿಸಿದರು.