ಕೇಂದ್ರದ ಬೆಲೆ ಏರಿಕೆ ರಾಜ್ಯ ಬಿಜೆಪಿಗೆ ಕಪಾಳಮೋಕ್ಷ ಮಾಡಿದಂತಿದೆ: ಮುನಿಯಾಲು

| Published : Apr 13 2025, 02:09 AM IST

ಕೇಂದ್ರದ ಬೆಲೆ ಏರಿಕೆ ರಾಜ್ಯ ಬಿಜೆಪಿಗೆ ಕಪಾಳಮೋಕ್ಷ ಮಾಡಿದಂತಿದೆ: ಮುನಿಯಾಲು
Share this Article
  • FB
  • TW
  • Linkdin
  • Email

ಸಾರಾಂಶ

ಯುವ ಕಾಂಗ್ರೆಸ್ ಸಮಿತಿ ಕಾರ್ಕಳ ವಿಧಾನಸಭಾ ಕ್ಷೇತ್ರ ಇದರ ವತಿಯಿಂದ ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ ವಿರುದ್ಧ ಶನಿವಾರ ಕಾರ್ಕಳ ಬಸ್ ನಿಲ್ದಾಣ ಬಳಿ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಕೇಂದ್ರ ಸರ್ಕಾರ ಗ್ಯಾಸ್, ಡಿಸೇಲ್ ಬೆಲೆ ಏರಿಸಿ ರಾಜ್ಯ ಬಿಜೆಪಿಗೆ ಕಪಾಳಮೋಕ್ಷ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶಟ್ಟಿ ಮುನಿಯಾಲು ಹೇಳಿದರು.

ಅವರು ಯುವ ಕಾಂಗ್ರೆಸ್ ಸಮಿತಿ ಕಾರ್ಕಳ ವಿಧಾನಸಭಾ ಕ್ಷೇತ್ರ ಇದರ ವತಿಯಿಂದ ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ ವಿರುದ್ಧ ಶನಿವಾರ ಕಾರ್ಕಳ ಬಸ್ ನಿಲ್ದಾಣ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಳಿಸಿದ ಹಾಗೆ ಕಾರ್ಕಳದಲ್ಲೂ ಬಿಜೆಪಿಯನ್ನು ಅಳಿಸಿಹಾಕಬೇಕಾಗಿದೆ. ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಕಟ್ಟುವ ಕಾರ್ಯ ಹಳ್ಳಿಗಳಲ್ಲಿ ನಡೆಯಲಿದೆ ಎಂದರು.ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಮಾತನಾಡಿ, ಬಿಜೆಪಿಯವರು ಅರ್ಥಶಾಸ್ತ್ರ ಓದಿಲ್ಲ, ಪಂಚ ಗ್ಯಾರಂಟಿಗಳಿಂದ ಜನರಲ್ಲಿ ಆರ್ಥಿಕ ಕ್ರೋಡಿಕರಣವಾಗಿದೆ ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಮಾತನಾಡಿ, ಪಂಚ ಗ್ಯಾರಂಟಿಯನ್ನು ಬಿಜೆಪಿ ವಿರೋಧಿಸುತ್ತಿದೆ. ಕಾರ್ಕಳ ಶಾಸಕರು ಗ್ಯಾರಂಟಿ ಸಮಿತಿ ಅಧ್ಯಕ್ಷ ಸ್ಥಾನ ಬೇಕು ಎಂದು ವಿಧಾನ‌ ಮಂಡಲದಲ್ಲಿ ಕೇಳಿದ್ದಾರೆ. ಬೆಲೆ ಏರಿಕೆ ವಿರುದ್ಧ ಹೋರಾಡಿದ ಇಲ್ಲಿನ ಶಾಸಕರಿಗೆ ಕೇಂದ್ರ ಸರ್ಕಾರ ಬೆಲೆ ಏರಿಕೆ ಏಕೆ ಕಾಣಿಸುತಿಲ್ಲ ಎಂದು ಪ್ರಶ್ನಿಸಿದರು.ಯುವ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ ಪ್ರಸ್ತಾವನೆಗೈದು, ಬೆಲೆ ಏರಿಕೆ ವಿರುದ್ಧ ಘೋಷಣೆ ಕೂಗಿದರು. ಬ್ಲಾಕ್ ಕಾಂಗ್ರೆಸ್ ಮುಖಂಡರು, ಪುರಸಭೆಯ ಕಾಂಗ್ರೆಸ್ ಸದಸ್ಯರು, ಯುವ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.