ಸಾರಾಂಶ
ರೈತರ ಅವಶ್ಯಕತೆಗೆ ಅನುಗುಣವಾಗಿ ಬಹು ಬೇಡಿಕೆಯ ಯೂರಿಯಾ ಹಾಗೂ ಇತರೇ ರಸಗೊಬ್ಬರ ದರ ಇಳಿಕೆಯ ಜೊತೆಗೆ ಇನ್ನಷ್ಟು ರಿಯಾಯಿತಿ ನೀಡುವ ಯೋಜನೆಗೆ ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ ಎಂದು  ಸಂಸದ ಡಾ. ಸಿ ಎನ್ ಮಂಜುನಾಥ್ ತಿಳಿಸಿದ್ದಾರೆ.   
ಕನ್ನಡಪ್ರಭ ವಾರ್ತೆ ಕುಣಿಗಲ್
ರೈತರ ಅವಶ್ಯಕತೆಗೆ ಅನುಗುಣವಾಗಿ ಬಹು ಬೇಡಿಕೆಯ ಯೂರಿಯಾ ಹಾಗೂ ಇತರೇ ರಸಗೊಬ್ಬರ ದರ ಇಳಿಕೆಯ ಜೊತೆಗೆ ಇನ್ನಷ್ಟು ರಿಯಾಯಿತಿ ನೀಡುವ ಯೋಜನೆಗೆ ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ ಎಂದು ಸಂಸದ ಡಾ. ಸಿ ಎನ್ ಮಂಜುನಾಥ್ ತಿಳಿಸಿದ್ದಾರೆ. ತಾಲೂಕಿನ ಯಾಚಘಟ್ಟ ಗ್ರಾಮದಲ್ಲಿ ಸತ್ವ ಗ್ರೂಪ್ ವತಿಯಿಂದ ತಾಲೂಕಿನ ವಿವಿಧೆಡೆಗಳಲ್ಲಿ 10 ಶುದ್ಧ ಕುಡಿಯುವ ನೀರಿನ ಉದ್ಘಾಟನೆ ಮಾಡಿ ಮಾತನಾಡಿದರು. ರಾಜ್ಯ ಸರ್ಕಾರ ರಸ್ತೆ ಚರಂಡಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವುದರ ಜೊತೆಗೆ ಆಸ್ಪತ್ರೆಗಳಲ್ಲಿ ವೈದ್ಯರನ್ನು ನೇಮಕ ಮಾಡಬೇಕಾಗಿದೆ. ರಾಜ್ಯದಲ್ಲಿ ಮೂರು ಲಕ್ಷಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇದೆ, ಇದರ ಬಗ್ಗೆ ಸರ್ಕಾರ ಗಮನಹರಿಸಬೇಕೆಂದರು. ಕೇವಲ ಬಸ್ ಹತ್ತಿಸಿ ಇಳಿಸುವ ಯೋಜನೆಯಿಂದ ಅಭಿವೃದ್ಧಿ ಸಾಧ್ಯವಿಲ್ಲ ಉತ್ತಮ ರೈತಪರ ಕಾರ್ಯಕ್ರಮಗಳನ್ನ ಮಾಡಬೇಕೆಂದು ಸಲಹೆ ನೀಡಿದರು ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆ ಅಡಿ ನಾಲ್ಕು ಲಕ್ಷದ ಎಪ್ಪತ್ತು ಸಾವಿರ ಕೋಟಿ ಅನುದಾನವನ್ನು ರೈತರಿಗೆ ನೀಡಲಾಗುತ್ತಿದೆ ರೈತರ ಆತ್ಮಹತ್ಯೆ ತಡೆಯಲು ಕೃಷಿ ಸಮ್ಮಾನ್ ಯೋಜನೆ ಅಡಿ ಹಾಗೂ ಫಸಲು ಭೀಮಾ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ ಎಂದರು ಹೆದ್ದಾರಿಯಲ್ಲಿ ಹೆಚ್ಚಾಗುತ್ತಿದ್ದ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ನಿತಿನ್ ಗಡ್ಕರಿ ಜೊತೆ ಮಾತನಾಡಿ ಹೆದ್ದಾರಿಯ ಎರಡು ಭಾಗದಲ್ಲಿ ಸರ್ವಿಸ್ ರಸ್ತೆಗಳನ್ನು ಮಾಡುವ ಕಾರ್ಯ ಪ್ರಾರಂಭ ಆಗಿದೆ. ಅಪಘಾತ ಸಂದರ್ಭದಲ್ಲಿ ಉಂಟಾಗುವ ಸಾವು ನೋವುಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಉದ್ದೇಶದಿಂದ 500 ಕೋಟಿ ರು. ವೆಚ್ಚದಲ್ಲಿ ಬೆಂಗಳೂರಿನ ಮತ್ತೊಂದು ಭಾಗವಾದ ಯಲಹಂಕ ಭಾಗದಲ್ಲಿ ಡ್ರಾಮಾ ಸೆಂಟರ್ ಅನ್ನು ಸರ್ಕಾರ ಪ್ರಾರಂಭಿಸಲು ಸಿದ್ಧತೆ ಮಾಡುತ್ತಿದೆ ಎಂದರು.ಡಾ. ರವಿ ಬಾಬು ಮಾತನಾಡಿ, ಸಂಸದ ಡಾ. ಸಿಎನ್ ಮಂಜುನಾಥ್ ಅವರನ್ನು ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಕರೆಯದೆ ರಾಜಕೀ ಮಾಡುತ್ತಿದ್ದಾರೆ. ಇದು ಸರಿ ಇಲ್ಲ ರಾಜಕೀಯ ಬಿಟ್ಟು ಅಭಿವೃದ್ಧಿಯತ್ತ ಗಮನ ಹರಿಸಬೇಕೆಂದರು. ಜೆಡಿಎಸ್ ಅಧ್ಯಕ್ಷ ಬಿಎನ್ ಜಗದೀಶ್ , ಹರೀಶ್ ನಾಯಕ್, ಪ್ರಕಾಶ್, ಕುಂಬಳಕಾಯಿ ರಾಜಣ್ಣ ಸೇರಿದಂತೆ ಇತರರು ಇದ್ದರು.
;Resize=(128,128))
;Resize=(128,128))