ಕೇಂದ್ರದ ಬಜೆಟ್ ಭಾರತ ನಂ.1 ಆಗುವ ರೋಡ್ ಮ್ಯಾಪ್: ಕಿಶೋರ್ ಕುಮಾರ್

| Published : Jul 25 2024, 01:21 AM IST

ಕೇಂದ್ರದ ಬಜೆಟ್ ಭಾರತ ನಂ.1 ಆಗುವ ರೋಡ್ ಮ್ಯಾಪ್: ಕಿಶೋರ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಜನರಿಗೆ ನೀಡಿದ ಭರವಸೆ, ಚುನಾವಣಾ ಪ್ರಣಾಂಕ ಆಧಾರದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅತ್ಯುತ್ತಮ ಬಜೆಟ್ ಮಂಡಿಸಿದ್ದು, ಪ್ರಧಾನಿ ಮೋದಿ ನುಡಿದಂತೆ ನಡೆದಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾ‌ರ್ ಕುಂದಾಪುರ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಬಡವರು ಯುವಜನತೆ, ಮಹಿಳೆ, ರೈತರ ಕೇಂದ್ರಿತವಾಗಿ ಮಂಡಿಸಿದ ಬಜೆಟ್‌ನಲ್ಲಿ 2047ರಲ್ಲಿ ಭಾರತ ಜಗತ್ತಿನಲ್ಲೇ ಅಭಿವೃದ್ಧಿ ಹೊಂದಿದ ನಂಬರ್ ವನ್ ದೇಶವಾಗಬೇಕನ್ನುವ ದೂರದೃಷ್ಟಿ ರೋಡ್ ಮ್ಯಾಪ್ ರೂಪಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾ‌ರ್ ಕುಂದಾಪುರ ಹೇಳಿದ್ದಾರೆ.

ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನರಿಗೆ ನೀಡಿದ ಭರವಸೆ, ಚುನಾವಣಾ ಪ್ರಣಾಂಕ ಆಧಾರದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅತ್ಯುತ್ತಮ ಬಜೆಟ್ ಮಂಡಿಸಿದ್ದು, ಪ್ರಧಾನಿ ಮೋದಿ ನುಡಿದಂತೆ ನಡೆದಿದ್ದಾರೆ ಎಂದರು.

ಕೃಷಿ ಉತ್ಪಾದನೆ, ಉದ್ಯೋಗ ಕೌಶಲ್ಯ, ಮಾನವ ಸಂಪನ್ಮೂಲ ಅಭಿವೃದ್ಧಿ, ಸಾಮಾಜಿಕ ನ್ಯಾಯ ಉತ್ಪಾದನೆ ಮತ್ತು ಸೇವೆ, ನಗರ ಅಭಿವೃದ್ಧಿ, ಇಂಧನ ಭದ್ರತೆ, ಮೂಲಸೌಕರ್ಯ, ಅವಿಷ್ಕಾರ ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಮಾತನಾಡಿ, ಜುಲೈ 28ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ಕಾರ್ಯಕ್ರಮದ ನೇರ ಪ್ರಸಾರವನ್ನು ಸಂಸದರು, ಶಾಸಕರು, ಪಕ್ಷದ ಪ್ರಮುಖರು, ಎಲ್ಲ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಜಿಲ್ಲೆಯ ಎಲ್ಲ 1,111 ಬೂತ್‌ಗಳಲ್ಲಿ ವೀಕ್ಷಿಸಲಿದ್ದಾರೆ ಎಂದರು.

ಬಿಜೆಪಿ ಆರ್ಥಿಕ ಪ್ರಕೋಷ್ಟ ಜಿಲ್ಲಾ ಸಂಚಾಲಕ ದಿವಾಕರ ಶೆಟ್ಟಿ, ರಾಘವೇಂದ್ರ ಕುಂದ‌ರ್, ಶಿವಕುಮಾರ್ ಅಂಬಲಪಾಡಿ, ವಿಜಯಕುಮಾರ್ ಉದ್ಯಾವರ ಉಪಸ್ಥಿತರಿದ್ದರು.