ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಭಾರತೀಯ ಯುವ ವೃತ್ತಿಪರರು, ಕುಟುಂಬಸ್ಥರು, ಹಿರಿಯ ಪ್ರಜೆಗಳಿಗೆ ಆರ್ಥಿಕ ರಕ್ಷಣೆಯ ಜೊತೆಗೆ ಜೀವನಾಂಶಕ ವಸ್ತುಗಳ ತೆರೆಗೆ ಶೂನ್ಯಕ್ಕೆ ಬಂದಿರುವುದರಿಂದ ಜನಸಾಮಾನ್ಯರ ಜೀವನಕ್ಕೆ ಬಂಪರ ಕೊಡುಗೆ ನೀಡಿರುವ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಹೇಳಿದರು.ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ ಅವರು, ಜೀವ ಉಳಿಸುವ ಔಷಧಿಗಳು, ವೈದ್ಯಕೀಯ ಸಾಧನಗಳು ಗಮನಾರ್ಹವಾಗಿ ಅಗ್ಗವಾಗಿವೆ. ಸಾಬೂನುಗಳು ಮತ್ತು ಶ್ಯಾಂಪೂಗಳಿಂದ ಹಿಡಿದು ಬೈಸಿಕಲ್‌ಗಳು ಮತ್ತು ಕಿಚನ್‌ವೇರ್ ವರೆಗೆ, ಜಿಎಸ್‌ಟಿ ದರಗಳನ್ನು ಶೇ.5ಕ್ಕೆ ಇಳಿಸಲಾಗಿದೆ. ಹಾಲು, ಪನೀರ್, ಚಪಾಟಿಸ್, ಪರೋಟಾಸ್-ಎಲ್ಲ ಅಗತ್ಯ ವಸ್ತುಗಳು-ಈಗ ತೆರಿಗೆ ಮುಕ್ತವಾಗಿದೆ. ದೇಶದ ರೈತರು ಟ್ರ್ಯಾಕ್ಟರ್, ಕೃಷಿ-ಉಪಕರಣಗಳು ಮತ್ತು ರಸಗೊಬ್ಬರಗಳು ಈಗ ಕೇವಲ ಶೇ.5 ಜಿಎಸ್‌ಟಿಗೆ ಒಳಪಡುವುದರಿಂದ ಕಡಿಮೆ ವೆಚ್ಚದಲ್ಲಿ, ಹೆಚ್ಚು ಉತ್ಪಾದನೆ ಮಾಡುವುದಾಗಿದೆ. ಸಣ್ಣ ವ್ಯಾಪಾರಿಗಳು, ಕುಶಲಕರ್ಮಿಗಳು ಮತ್ತು ಎಂಎಸ್‌ಎಂಇಗಳು ಕಾರ್ಯಕ್ಷಮತೆ ಹೆಚ್ಚಾಗಲಿದೆ ಎಂದರು.ಎಲೆಕ್ಟ್ರಾನಿಕ್ ವಸ್ತಗಳ ಮೇಲಿನ ಜಿಎಸ್ಟಿ ಶೇ.28 ರಿಂದ ಶೇ.18ಕ್ಕೆ ಇಳಿದಾಗಿದೆ. ಹನಿ ನೀರಾವರಿ ವ್ಯವಸ್ಥೆಗಳು ಮತ್ತು ಸ್ಪ್ರಿಂಕ್ಲರ್‌ಗಳು ಸಣ್ಣ ಡೀಸೆಲ್ ಎಂಜಿನ್‌ಗಳು ಟ್ರ್ಯಾಕ್ಟರ್‌ಗಳು ನಿರ್ದಿಷ್ಟ ಜೈವಿಕ ಕೀಟನಾಶಕಗಳು, ಸೂಕ್ಷ್ಮ ಪೋಷಕಾಂಶಗಳು-ಕೃಷಿ, ತೋಟಗಾರಿಕೆ ಅಥವಾ ಅರಣ್ಯ ಯಂತ್ರಗಳು ಮಣ್ಣಿನ ಸಿದ್ಧತೆ, ಕೃಷಿ, ಕೊಯ್ಲು ಮತ್ತು ಒಕ್ಕಣಿಕೆ ಯಂತ್ರಗಳ ಜಿಎಸ್ಟಿ ಕಡಿಮೆಯಾಗಿದೆ. ರಸಗೊಬ್ಬರ ಕಚ್ಚಾ ವಸ್ತುಗಳಾದ ಸಲ್ಫ್ಯೂರಿಕ್ ಆಮ್ಲ, ನೈಟ್ರಿಕ್ ಆಮ್ಲ, ಅಮೋನಿಯಾ, ಜೈವಿಕ ಕೀಟನಾಶಕಗಳು ಮತ್ತು ಸೂಕ್ಷ್ಮ ಪೋಷಕಾಂಶಗಳು ಶೇ.18 ಅಥವಾ ಶೇ.12 ರಿಂದ ಶೇ.5 ಕ್ಕೆ ಇಳಿದಿದ್ದು, ಕೃಷಿ ಚಟುವಟಿಕೆಗಳಿಗೆ ಬೂಸ್ಟ್ ನೀಡಿದಂತಾಗಿದೆ. ರಕ್ಷಣಾವಲಯದ ವಿಮಾನ ಸಿಮ್ಯುಲೇಟರ್‌ಗಳು, ಗುರಿ ಸಿಮ್ಯುಲೇಟರ್‌ಗಳನ್ನು ಶೇ.18 ರಿಂದ ಶೂನ್ಯ ಜಿಎಸ್ಟಿಗೆ ಇಳಿಸಲಾಗಿದ್ದು ದೇಶದ ಭದ್ರತೆ ಸುಭದ್ರದ ಕಡೆ ಸಾಗಿದೆ. ತೆರಿಗೆ ವಿವಾದಗಳ ತ್ವರಿತ ಪರಿಹಾರಕ್ಕಾಗಿ 2025ರ ಅಂತ್ಯದ ವೇಳೆಗೆ ಜಿಎಸ್ಟಿ ಮೇಲ್ಮನವಿ ನ್ಯಾಯಮಂಡಳಿ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದ್ದಾರೆ.ರಾಜಕೀಯಕ್ಕಿಂತ ಮೊದಲು ರಾಷ್ಟ್ರ ಎನ್ನುವ ಹಾಗೆ ಸಹಕಾರಿ ತತ್ವದಡಿ ಜನರ ಪರ, ಬಡವರ ಪರ, ಮಧ್ಯಮವರ್ಗದ ಪರವಾದ ನಿರ್ಣಯ ಇದಾಗಿದ್ದು, ನೇರವಾಗಿ ಜೀವನ ವೆಚ್ಚವನ್ನು ಕಡಿಮೆ ಮಾಡಿದಂತಾಗಿದೆ. ಎಲ್ಲ ಜೀವನ ಮತ್ತು ಆರೋಗ್ಯ ವಿಮಾ ಪಾಲಿಸಿಗಳ ಮೇಲೆ ಜಿಎಸ್ಟಿ ವಿನಾಯತಿ ನೀಡಿದ್ದರಿಂದ ಜೀವನ ರಕ್ಷಣೆ ನೀಡಿದಂತಾಗಿದೆ. ಶಿಕ್ಷಣಕ್ಕೆ ಸಂಬಂಧಿಸಿದ ನಕ್ಷೆಗಳು ಅಟ್ಲಾಸ್‌ಗಳು, ಗ್ಲೋಬ್‌ಗಳು ಪೆನ್ಸಿಲ್‌ಗಳು, ಕ್ರೇಯಾನ್‌ಗಳು ನೋಟ್‌ಬುಕ್ ಶೂನ್ಯ ಜಿಎಸ್ಟಿಗೆ ಒಳಪಡುವುದರೊಂದಿಗೆ ಶಿಕ್ಷಣ ವಲಯಕ್ಕೆ ಆದ್ಯತೆ ನೀಡಿದಂತಾಗಿದೆ.
-ಎಫ್.ಎಸ್.ಸಿದ್ದನಗೌಡರ, ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯರು.