ತಾವರೆಕೆರೆ ಜಾತ್ರೆಗೆ ಸಿಇಒ ಜಿ. ಪ್ರಭು ಭೇಟಿ

| Published : Feb 16 2024, 01:46 AM IST

ಸಾರಾಂಶ

ತುಮಕೂರು: ಜಿಲ್ಲೆಯ ಶಿರಾ ತಾಲೂಕು ತಾವರೆಕೆರೆ ಗ್ರಾಮದಲ್ಲಿ ಜರುಗುತ್ತಿರುವ ಇತಿಹಾಸ ಪ್ರಸಿದ್ಧ ಶ್ರೀ ಬಂಡೀರಂಗನಾಥ ಸ್ವಾಮಿ ಜಾತ್ರೆಗೆ ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು ಭೇಟಿ ನೀಡಿ ಬಂಡೀರಂಗನಾಥ ಸ್ವಾಮಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ತುಮಕೂರು: ಜಿಲ್ಲೆಯ ಶಿರಾ ತಾಲೂಕು ತಾವರೆಕೆರೆ ಗ್ರಾಮದಲ್ಲಿ ಜರುಗುತ್ತಿರುವ ಇತಿಹಾಸ ಪ್ರಸಿದ್ಧ ಶ್ರೀ ಬಂಡೀರಂಗನಾಥ ಸ್ವಾಮಿ ಜಾತ್ರೆಗೆ ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು ಭೇಟಿ ನೀಡಿ ಬಂಡೀರಂಗನಾಥ ಸ್ವಾಮಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ನಂತರ ಬೃಹತ್ ದನಗಳ ಜಾತ್ರೆಗೆ ಭೇಟಿ ನೀಡಿ ವಿವಿದ ತಳಿಗಳ ರಾಸುಗಳನ್ನು ವೀಕ್ಷಿಸಿದರು. ಈ ವೇಳೆ ಮಾತನಾಡಿದ ಅವರು, ಬಯಲು ಸೀಮೆಯಲ್ಲಿ ಪರಂಪರಗಾತವಾಗಿ ಅಚರಿಸಲಾಗುವ ಇಂತಹ ಜಾತ್ರೆಗಳು ನಮ್ಮ ಹಿರಿಯರು ಬಿಟ್ಟು ಹೋಗಿರುವಂತಹ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ತಾಲೂಕು ಆಡಳಿತ, ಗ್ರಾಮ ಪಂಚಾಯಿತಿ, ಎಲ್ಲಾ ಇಲಾಖೆಗಳು ಹಾಗೂ ಗ್ರಾಮದ ಮುಖಂಡರು, ಯುವಕರು ಸೇರಿ ಕೊರೊನಾ ಹಿನ್ನೆಲೆ ನಿಂತು ಹೋಗಿದ್ದ ಜಾತ್ರೆಗೆ ಚಾಲನೆ ನೀಡಿರುವುದು ಭಕ್ತರಲ್ಲಿ ಸಂತಸ ತಂದಿದೆ ಎಂದ ಅವರು ತಾವರೆಕೆರೆ ಉತ್ಸವ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ಹಾಹಕ ಅಧಿಕಾರಿ ಪಿ.ಎಸ್. ಅನಂತರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜು ಸೇರಿದಂತೆ ಸಿಬ್ಬಂದಿ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.

ವಿಶೇಷವಾದ ದನಗಳ ಜಾತ್ರೆಯಲ್ಲಿ ಕೊರಟಗೆರೆ, ಮಧುಗಿರಿ, ಚಿಕ್ಕನಾಯಕನಹಳ್ಳಿ ತಾಲೂಕುಗಳಿಂದ ವಿವಿಧ ತಳಿಯ ರಾಸುಗಳು ಪಾಲ್ಗೊಂಡಿದ್ದವು ಎಂದರು.

ದನಗಳ ಜಾತ್ರೆಯಲ್ಲಿ ಭಾಗವಹಿಸಿದ್ದ ರೈತರಿಗೆ ಏರ್ಪಡಿಸಿದ್ದ ಅನ್ನ ದಾಸೋಹಕ್ಕೆ ಭೇಟಿ ನೀಡಿ ಸ್ವತಃ ಸಿಇಒ ಅವರೇ ರೈತರಿಗೆ ಊಟ ಬಡಿಸಿದ್ದು, ವಿಶೇಷವಾಗಿತ್ತು. ನಂತರ ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಪರಿಶೀಲಿಸಿದರು.