ಸಾರಾಂಶ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರ್ ಅವರು ಗುರುವಾರ ಒಂದೇ ದಿನದಲ್ಲಿ ಗುಳೇದಗುಡ್ಡ ತಾಲೂಕಿನ ಹತ್ತಕ್ಕೂ ಹೆಚ್ಚಿನ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿ ನಡೆದಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರ್ ಅವರು ಗುರುವಾರ ಒಂದೇ ದಿನದಲ್ಲಿ ಗುಳೇದಗುಡ್ಡ ತಾಲೂಕಿನ ಹತ್ತಕ್ಕೂ ಹೆಚ್ಚಿನ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿ ನಡೆದಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಮಾಡಿದ್ದಾರೆ.ಅವರು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಗುಳೇದಗುಡ್ಡ ತಾಲೂಕಿನ 12 ಗ್ರಾಮ ಪಂಚಾಯಿತಿ ಪೈಕಿ ಸುಮಾರು 7 ಗ್ರಾಮ ಪಂಚಾಯಿತಿಗಳಲ್ಲಿ ನಡೆದಿರುವ ಅನೇಕ ಕಾಮಗಾರಿ ಪರಿಶೀಲನೆ ನಡೆಸಿದರು. ಹಂಗರಗಿ ವ್ಯಾಪ್ತಿಯ ಎಫ್ಎಸ್‌ಟಿಪಿ ಘಟಕ ನಿರ್ಮಾಣ ಕಾಮಗಾರಿ, ಕಟಗೇರಿ ವ್ಯಾಪ್ತಿಯ ಎನ್‌ಆರ್‌ಎಲ್‌ಎಂ ಕಟ್ಟಡ ಕಾಮಗಾರಿ, ರೈತ ಸಂಪರ್ಕ ಕೇಂದ್ರ, ಅಂಗನಾಡಿ ಕೇಂದ್ರ-1, ಗ್ರಾಮೀಣ ಕುಡಿಯುವ ನೀರು ಯೋಜನೆಯ ಪೈಪಲೈನ್, ಪಶು ಚಿಕಿತ್ಸಾಲಾಯ, ಕೆಲವಡಿ ವ್ಯಾಪ್ತಿಯ ಆರೋಗ್ಯ ಕೇಂದ್ರ, ತಿಮ್ಮಸಾಗರ ಗ್ರಾಮದ ನೂತನ ಅಂಗನವಾಡಿ ಕಟ್ಟಡ ಕಾಮಗಾರಿ, ಲಿಂಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿ ಶಿಕ್ಷಕರು ಪಾಠ ಮಾಡುವುದನ್ನು ವೀಕ್ಷಣೆ ಮಾಡಿದ್ದಾರೆ. ಕಬ್ಬಡಿ ಮತ್ತು ಖೋಖೋ ಮೈದಾನ ಕಾಮಗಾರಿ ಪರಿಶೀಲನೆ ಮಾಡಿದ್ದಾರೆ.ಹಂಸನೂರ ವ್ಯಾಪ್ತಿಯ ಹಂಸನೂರು ಗ್ರಾಮದ ಜೆಜೆಎಂ ಯೋಜನೆ ಕಾಮಗಾರಿ, ಡಿಜಿಟಲ್ ಗ್ರಂಥಾಲಯ ಹಾಗೂ ಗ್ರಾಪಂ ಕಾರ್ಯಾಲಯಕ್ಕೆ ಭೇಟಿ ನೀಡಿ 15ನೇ ಹಣಕಾಸಿನ ದಾಖಲೆಗಳ ಪರಿಶೀಲಿಸಿಲನೆ, ಹಾನಾಪುರ್ ಎಸ್.ಪಿ ವ್ಯಾಪ್ತಿಯ ಮುರಡಿ ಗ್ರಾಮದಲ್ಲಿ ಅಗಸಿ ಬಾಗಿಲು, ಜೆಜೆಎಂ ಕಾಮಗಾರಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ರಂಗಮಂದಿರ ಕಾಮಗಾರಿ ಪರಿಶೀಲನೆ, ಪರ್ವತಿ ವ್ಯಾಪ್ತಿಯ ಪರ್ವತಿ ಗ್ರಾಮದ ಸಹಿಪ್ರಾ ಶಾಲೆ ನೂತನ ಶಾಲಾ ಕಟ್ಟಡ ಕಾಮಗಾರಿ, ಖಾನಾಪುರ ಎಸ್.ಪಿ ಗ್ರಾಮದ ನೂತನ ಅಂಗನವಾಡಿ ಕಟ್ಟಡ ಹಾಗೂ ರಂಗಮಂದಿರ ಕಾಮಗಾರಿ, ಹುಲ್ಲಿಕೇರಿ ಎಸ್.ಪಿ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡ ಕಾಮಗಾರಿಗಳ ಪರಿವೀಕ್ಷಣೆ, ಬಾದಾಮಿ ತಾಲೂಕಿನ ಗ್ರಾಮ ನಂದಿಕೇಶ್ವರದಲ್ಲಿ ನೂತನ ಅಂಗನವಾಡಿ ಕಟ್ಟಡ ಕಾಮಗಾರಿ ಹೀಗೆ ಒಂದೇ ದಿನದಲ್ಲಿ ಇಷ್ಟೊಂದು ಕಾಮಗಾರಿಗಳ ಪರಿಶೀಲನೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಆರ್‌ಡಬ್ಲ್ಯೂಎಸ್ ಅಭಿಯಂತರ ಆಕಾಶ, ಪಿಆರ್‌ಇಡಿ ಅಭಿಯಂತರ ಬಿರಾದಾರ್, ತೋಪಲಕಟ್ಟಿ, ತಾಪಂ ಇಓ ಮಲ್ಲಿಕಾರ್ಜುನ ಬಡಿಗೇರ, ಬಾದಾಮಿ ಇಓ ಸುರೇಶ, ಆರ್ ಡಬ್ಲ್ಯೂಎಸ್ ನ ರಾಮಚಂದ್ರ ಸೇರಿದಂತೆ ಇತರರು ಇದ್ದರು.