ಅಂಗನವಾಡಿಗಳಿಗೆ ಸಿಇಒ ಭೇಟಿ ಪರಿಶೀಲನೆ

| Published : Sep 13 2024, 01:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಸರ್ಕಾರಿ ಅಂಗನವಾಡಿ ಕೇಂದ್ರಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂಗನವಾಡಿ ಕೇಂದ್ರದ ಆಕರ್ಷಣೀಯ ಮತ್ತು ಸುಸಜ್ಜಿತ ಕಟ್ಟಡ ಮತ್ತು ಮಕ್ಕಳ ಕಲಿಕೆ, ವಿವಿಧ ಕ್ರಿಯಾ ಚಟುವಟಿಕೆಗಳನ್ನು ವೀಕ್ಷಿಸಿದರು. ಅಲ್ಲಿರುವ ಮಕ್ಕಳೊಂದಿಗೆ ಸಂವಾದ ನಡೆಸಿ, ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಪಡೆದರು. ಅಂಗನವಾಡಿ ಕೇಂದ್ರದ ಮಕ್ಕಳಿಗಾಗಿ ಸಿದ್ಧಪಡಿಸಿದ ಆಹಾರದ ಗುಣಮಟ್ಟವನ್ನು ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಸರ್ಕಾರಿ ಅಂಗನವಾಡಿ ಕೇಂದ್ರಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಂಗನವಾಡಿ ಕೇಂದ್ರದ ಆಕರ್ಷಣೀಯ ಮತ್ತು ಸುಸಜ್ಜಿತ ಕಟ್ಟಡ ಮತ್ತು ಮಕ್ಕಳ ಕಲಿಕೆ, ವಿವಿಧ ಕ್ರಿಯಾ ಚಟುವಟಿಕೆಗಳನ್ನು ವೀಕ್ಷಿಸಿದರು. ಅಲ್ಲಿರುವ ಮಕ್ಕಳೊಂದಿಗೆ ಸಂವಾದ ನಡೆಸಿ, ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಪಡೆದರು. ಅಂಗನವಾಡಿ ಕೇಂದ್ರದ ಮಕ್ಕಳಿಗಾಗಿ ಸಿದ್ಧಪಡಿಸಿದ ಆಹಾರದ ಗುಣಮಟ್ಟವನ್ನು ಪರಿಶೀಲನೆ ನಡೆಸಿದರು. ಮಕ್ಕಳಿಗೆ ನಿರಂತರ ಆರೋಗ್ಯ ತಪಾಸಣೆ ಕೈಗೊಳ್ಳಲು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಿದರು. ಬೋಧನಾ ಉಪಕರಣದಲ್ಲಿ ವೈವಿಧ್ಯತೆಯನ್ನು ಬಳಸಿಕೊಂಡು ಮಕ್ಕಳಲ್ಲಿ ಕ್ರಿಯಾತ್ಮಕ ಚಟುವಟಿಕೆಗಳನ್ನು ಕಲಿಸುವಂತೆ ಶಿಕ್ಷಕಿಗೆ ಸಲಹೆ ನೀಡಿದರು.ಅಂಗನವಾಡಿ ಕೇಂದ್ರದ ಒಳಾಂಗಣ ಅತ್ಯುತ್ತಮವಾಗಿ ನಿರ್ವಹಿಸಿದ್ದೀರಿ, ಅದೇ ರೀತಿ ಹೊರಾಂಗಣ ಆಟದ ಮೈದಾನದಲ್ಲೂ ಸ್ವಚ್ಛತೆಯಿಂದ ನಿರ್ವಹಣೆ ಮಾಡಿ. ಲಭ್ಯವಿರುವ ಸ್ಥಳದಲ್ಲಿ ಚಿಕ್ಕ ಉದ್ಯಾನವನವನ್ನು ನಿರ್ಮಿಸುವುದು, ಕೇಂದ್ರದಲ್ಲಿ ಮಕ್ಕಳಿಗೆ ವಿಭಿನ್ನವಾದ ಹಾಗೂ ಹೊಸ ಆಟಿಕೆ ಸಾಮಗ್ರಿಗಳನ್ನು ಖರೀದಿಸುವುದು ಹಾಗೂ ಈಗಾಗಲೇ ಇರುವ ಆಟಿಕೆ ಸಾಮಗ್ರಿಗಳು ಮಕ್ಕಳ ಕೈಗೆಟುಕುವಂತೆ ವ್ಯವಸ್ಥಿತವಾಗಿ ಇಡಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ತಿಕೋಟಾ ತಾಪಂ ಇಒ ಬಸವರಾಜ ಐನಾಪುರ, ಲೋಹಗಾಂವ ಗ್ರಾಪಂ ಪಿಡಿಒ ಪದ್ಮಿನಿ ಬಿರಾದಾರ, ತಾಲೂಕು ನೋಡಲ್ ಅಧಿಕಾರಿ ಕಲ್ಯಾಣಶೆಟ್ಟಿ, ತಾಂತ್ರಿಕ ಸಹಾಯಕ ಅಭಿಯಂತರ ರೇಷ್ಮಾ ಬಾಗವಾನ, ಶ್ರೀಧರ ಸಾವಳಗಿ, ಅಂಗನವಾಡಿ ಕಾರ್ಯಕರ್ತೆ ಪ್ರಿಯಾಂಕಾ ರಾಠೋಡ ಸೇರಿದಂತೆ ಮುಂತಾದವರು ಇದ್ದರು.