ಆಧುನಿಕ ಆಹಾರ-ವಿಹಾರ ಶೈಲಿಯಿಂದ ಮಾನವ ಇನ್ನಿಲ್ಲದ ರೋಗ : ರೋಗ ಮುಕ್ತ, ಸರಳ ಜೀವನಕ್ಕೆ ಸಿರಿಧಾನ್ಯ ಅವಶ್ಯಕ

| Published : Sep 01 2024, 01:55 AM IST / Updated: Sep 01 2024, 01:05 PM IST

ಆಧುನಿಕ ಆಹಾರ-ವಿಹಾರ ಶೈಲಿಯಿಂದ ಮಾನವ ಇನ್ನಿಲ್ಲದ ರೋಗ : ರೋಗ ಮುಕ್ತ, ಸರಳ ಜೀವನಕ್ಕೆ ಸಿರಿಧಾನ್ಯ ಅವಶ್ಯಕ
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕ ಆಹಾರ-ವಿಹಾರ ಶೈಲಿಯಿಂದ ಮಾನವ ಇನ್ನಿಲ್ಲದ ರೋಗಗಳಿಗೆ ಬಲಿಯಾಗುತ್ತಿದ್ದು, ಉತ್ತಮ ಆರೋಗ್ಯವನ್ನು ಪಡೆಯಬೇಕಾದರೆ ಸಿರಿಧಾನ್ಯಗಳ ಅವಶ್ಯಕತೆ ಇದೆ. ಇದರ ಬಳಕೆಯಿಂದ ರೋಗ ಮುಕ್ತ ಮತ್ತು ಸರಳ ಜೀವನ ನಡೆಸಲು ಸಾಧ್ಯವಿದೆ ಎಂದು ಯೋಜನಾಧಿಕಾರಿ ಕೆ.ಸುರೇಶ್ ಹೇಳಿದರು.

ತಿಪಟೂರು: ಆಧುನಿಕ ಆಹಾರ-ವಿಹಾರ ಶೈಲಿಯಿಂದ ಮಾನವ ಇನ್ನಿಲ್ಲದ ರೋಗಗಳಿಗೆ ಬಲಿಯಾಗುತ್ತಿದ್ದು, ಉತ್ತಮ ಆರೋಗ್ಯವನ್ನು ಪಡೆಯಬೇಕಾದರೆ ಸಿರಿಧಾನ್ಯಗಳ ಅವಶ್ಯಕತೆ ಇದೆ. ಇದರ ಬಳಕೆಯಿಂದ ರೋಗ ಮುಕ್ತ ಮತ್ತು ಸರಳ ಜೀವನ ನಡೆಸಲು ಸಾಧ್ಯವಿದೆ ಎಂದು ಯೋಜನಾಧಿಕಾರಿ ಕೆ.ಸುರೇಶ್ ಹೇಳಿದರು.

ತಾಲೂಕಿನ ನೊಣವಿನಕೆರೆಯಲ್ಲಿ ನಡೆದ ಸಿರಿಧಾನ್ಯ ಬಳಕೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜೀವ ರಕ್ಷಣೆ ಮಾಡುವ ಸಿರಿಧಾನ್ಯಗಳನ್ನು ಬೆಳೆಯುವುದು ಅವಶ್ಯಕವಾಗಿದ್ದು, ಇದರಿಂದ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು. ಸಿರಿಧಾನ್ಯ ಬೆಳೆಯುವ ರೈತರನ್ನು ಸಂಪರ್ಕಿಸಿ ಗ್ರಾಹಕರಿಗೆ ನೇರ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಿದೆ. ಸಂಸ್ಥೆ ರೈತರಿಂದ ನೇರವಾಗಿ ಖರೀದಿಸಲ್ಪಟ್ಟ ಸಿರಿಧಾನ್ಯಗಳು ಅತ್ಯುತ್ತಮ ಹಾಗೂ ಆಕರ್ಷಕ ಬೆಲೆಯಲ್ಲಿ ಗ್ರಾಹಕರಿಗೆ ಸಿಗುವಂತೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಾತ್ಯಕ್ಷಿಕೆಯಲ್ಲಿ ಸಿರಿಧಾನ್ಯಗಳಿಂದ ಬಿಸಿಬೇಳೆ ಬಾತ್, ಪಾಯಸ, ಮೊಸರನ್ನ, ಸಿರಿಧಾನ್ಯದ ಮಾಲ್ಟ್ ತಯಾರಿಸಲಾಯಿತು. ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ದಯಾನಂದ ಕಾಬೋರಪ್ಪ, ಉಡಿಸಲಮ್ಮ ಸಮುದಾಯ ಭವನದ ಅಧ್ಯಕ್ಷ ಬಸವರಾಜು ಸಿರಿಧಾನ್ಯ ಸರಬರಾಜುದಾರ ವಿರೂಪಕ್ಷಾ, ಸಂಪನ್ಮೂಲ ವ್ಯಕ್ತಿ ತ್ರಿವೇಣಿ, ಸಮನ್ವಯಾಧಿಕಾರಿ ಭಾಗ್ಯಲಕ್ಷ್ಮಿ ಸೇವಾಪ್ರತಿನಿಧಿ ಇಂದ್ರಾಣಿ, ಮಮತಾ ಇದ್ದರು.