ಸಿಇಟಿ: ಕ್ರಿಯೇಟಿವ್ ಕಾಲೇಜಿಗೆ 100ರೊಳಗೆ 14 ಸ್ಥಾನ

| Published : May 25 2025, 03:07 AM IST

ಸಿಇಟಿ: ಕ್ರಿಯೇಟಿವ್ ಕಾಲೇಜಿಗೆ 100ರೊಳಗೆ 14 ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ಹಲವು ಪ್ರಮುಖ ಕೋರ್ಸ್‌ಗಳಿಗೆ ಸೇರಲು ನಡೆದ ರಾಜ್ಯಮಟ್ಟದ ಪ್ರವೇಶ ಪರೀಕ್ಷೆಯಲ್ಲಿ, ಕಾಲೇಜಿನ ಸುಮಂತ್ ಗೌಡ ಎಸ್. ದಾನಪ್ಪಗೌಡರ್ ಕೃಷಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 4ನೇ ರ‍್ಯಾಂಕ್‌, ಬಿ.ಎನ್.ವೈ.ಎಸ್. ವಿಭಾಗದಲ್ಲಿ 9ನೇ ರ‍್ಯಾಂಕ್‌, ಬಿ.ಎಸ್.ಸಿ. ನರ್ಸಿಂಗ್ ವಿಭಾಗದಲ್ಲಿ 18ನೇ ರ‍್ಯಾಂಕ್‌, ಪಶು ವೈದ್ಯಕೀಯ ವಿಭಾಗದಲ್ಲಿ 18ನೇ ರ‍್ಯಾಂಕ್‌, ಬಿ/ಡಿ-ಫಾರ್ಮ್ ವಿಭಾಗಗಳಲ್ಲಿ 25ನೇ ರ‍್ಯಾಂಕ್‌ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ 34ನೇ ರ‍್ಯಾಂಕ್‌ ಗಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಕೆ ಸಿಇಟಿ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪಿ.ಯು. ಕಾಲೇಜು ರಾಜ್ಯಮಟ್ಟದ 100 ರ‍್ಯಾಂಕ್‌ನೊಳಗೆ 14 ಸ್ಥಾನ ಪಡೆಯುವ ಮೂಲಕ ಅದ್ಭುತ ಸಾಧನೆ ಮಾಡಿದೆ.

ಪ್ರಸ್ತುತ ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ಹಲವು ಪ್ರಮುಖ ಕೋರ್ಸ್‌ಗಳಿಗೆ ಸೇರಲು ನಡೆದ ರಾಜ್ಯಮಟ್ಟದ ಪ್ರವೇಶ ಪರೀಕ್ಷೆಯಲ್ಲಿ, ಕಾಲೇಜಿನ ಸುಮಂತ್ ಗೌಡ ಎಸ್. ದಾನಪ್ಪಗೌಡರ್ ಕೃಷಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 4ನೇ ರ‍್ಯಾಂಕ್‌, ಬಿ.ಎನ್.ವೈ.ಎಸ್. ವಿಭಾಗದಲ್ಲಿ 9ನೇ ರ‍್ಯಾಂಕ್‌, ಬಿ.ಎಸ್.ಸಿ. ನರ್ಸಿಂಗ್ ವಿಭಾಗದಲ್ಲಿ 18ನೇ ರ‍್ಯಾಂಕ್‌, ಪಶು ವೈದ್ಯಕೀಯ ವಿಭಾಗದಲ್ಲಿ 18ನೇ ರ‍್ಯಾಂಕ್‌, ಬಿ/ಡಿ-ಫಾರ್ಮ್ ವಿಭಾಗಗಳಲ್ಲಿ 25ನೇ ರ‍್ಯಾಂಕ್‌ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ 34ನೇ ರ‍್ಯಾಂಕ್‌ ಗಳಿಸಿದ್ದಾರೆ.ವಿದ್ಯಾರ್ಥಿ ಎಚ್.ಎ. ರಾಜೇಶ್, ಬಿ.ಎನ್.ವೈ.ಎಸ್. ವಿಭಾಗದಲ್ಲಿ 35ನೇ ರ‍್ಯಾಂಕ್‌, ಬಿ.ಎಸ್.ಸಿ. ನರ್ಸಿಂಗ್ ವಿಭಾಗ ಮತ್ತು ಪಶು ವೈದ್ಯಕೀಯ ವಿಭಾಗದಲ್ಲಿ 52ನೇ ರ‍್ಯಾಂಕ್‌, ಬಿ/ಡಿ-ಫಾರ್ಮ್ ವಿಭಾಗಗಳಲ್ಲಿ 62ನೇ ರ‍್ಯಾಂಕ್‌ ಪಡೆದು ಶ್ಲಾಘನೀಯ ಸಾಧನೆ ಮಾಡಿದ್ದಾರೆ.ಎಂಜಿನಿಯರಿಂಗ್ ವಿಭಾಗದಲ್ಲಿ ವಿದ್ಯಾರ್ಥಿಗಳಾದ ಮೋನಿಕಾ ಕೆ.ಪಿ. 84ನೇ ರ‍್ಯಾಂಕ್, ಅಭಿನಂದನ್ ಭರಮಪ್ಪ 288ನೇ ರ‍್ಯಾಂಕ್, ಪ್ರಜ್ವಲ್ ಎಸ್.ಎನ್. 438ನೇ ರ‍್ಯಾಂಕ್, ಎನ್. ಸಮರ್ಥನ್ 534ನೇ ರ‍್ಯಾಂಕ್ ಹಾಗೂ ಚೈತನ್ಯ ಜಿ. 744ನೇ ರ‍್ಯಾಂಕ್ ಗಳಿಸಿದ್ದಾರೆ.

ನ್ಯಾಚುರೋಪತಿ ವಿಭಾಗದಲ್ಲಿ ಪ್ರಜ್ವಲ್ ಎಸ್.ಎನ್. 60ನೇ ರ‍್ಯಾಂಕ್, ಅಭಿನಂದನ್ ಭರಮಪ್ಪ 94ನೇ ರ‍್ಯಾಂಕ್, ಗಣೇಶ್ ಜಿ. 276ನೇ ರ‍್ಯಾಂಕ್‌, ಚೈತನ್ಯ ಜಿ. 744ನೇ ರ‍್ಯಾಂಕ್, ಧ್ರುವ 444ನೇ ರ‍್ಯಾಂಕ್ ಹಾಗೂ ಬಿಂದುಪ್ರಿಯ 482ನೇ ರ‍್ಯಾಂಕ್ ಪಡೆದಿದ್ದಾರೆ.

ಕೃಷಿ ವಿಭಾಗದಲ್ಲಿ ಅಭಿನಂದನ್ ಭರಮಪ್ಪ 60ನೇ ರ‍್ಯಾಂಕ್, ಪ್ರಜ್ವಲ್ ಎಸ್.ಎನ್. 75ನೇ ರ‍್ಯಾಂಕ್, ಚೈತನ್ಯ ಜಿ. 123ನೇ ರ‍್ಯಾಂಕ್, ಬಿಂದು ಪ್ರಿಯ 259ನೇ ರ‍್ಯಾಂಕ್, ಭರತ್ ಕೆ. 275ನೇ ರ‍್ಯಾಂಕ್, ಸಂಜನಾ ಕೆ.ಆರ್. 337ನೇ ರ‍್ಯಾಂಕ್, ಪ್ರೇರಣಾ ಪಾಂಡುರಂಗ 428ನೇ ರ‍್ಯಾಂಕ್, ಧ್ರುವ 440ನೇ ರ‍್ಯಾಂಕ್ ಪಡೆದಿದ್ದಾರೆ.

ಪಶು ವೈದ್ಯಕೀಯದಲ್ಲಿ ಪ್ರಜ್ವಲ್ ಎಸ್.ಎನ್. 78ನೇ ರ‍್ಯಾಂಕ್, ಅಭಿನಂದನ್ ಭರಮಪ್ಪ 116ನೇ ರ‍್ಯಾಂಕ್, ಧ್ರುವ 238ನೇ ರ‍್ಯಾಂಕ್, ಸಾತ್ವಿಕ್ ಭಂಡಾರಿ 362ನೇ ರ‍್ಯಾಂಕ್ ಪಡೆದಿದ್ದಾರೆ.

ನರ್ಸಿಂಗ್ ವಿಭಾಗದಲ್ಲಿ ಪ್ರಜ್ವಲ್ ಎಸ್.ಎನ್. 78ನೇ ರ‍್ಯಾಂಕ್, ಅಭಿನಂದನ್ ಭರಮಪ್ಪ 117ನೇ ರ‍್ಯಾಂಕ್, ಧ್ರುವ 240ನೇ ರ‍್ಯಾಂಕ್, ಸಾತ್ವಿಕ್ ಭಂಡಾರಿ 365ನೇ ರ‍್ಯಾಂಕ್ ಪಡೆದಿದ್ದಾರೆ.

ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕ್ರಿಯೇಟಿವ್ ಕಾಲೇಜಿನ 14 ವಿದ್ಯಾರ್ಥಿಗಳು 100ರೊಳಗಿನ ರ‍್ಯಾಂಕ್, 156 ವಿದ್ಯಾರ್ಥಿಗಳು 1000 ರ‍್ಯಾಂಕ್‌ನೊಳಗೆ, 302 ವಿದ್ಯಾರ್ಥಿಗಳು 2000 ರ‍್ಯಾಂಕ್‌ನೊಳಗೆ ಸ್ಥಾನ ಗಳಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದನೆ ಸಲ್ಲಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.