ಸಾರಾಂಶ
ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿದ ಸಿಇಟಿ ಪರೀಕ್ಷೆಯಲ್ಲಿ ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಕ್ಷಯ್ ಎಂ. ಹೆಗ್ಡೆ ಅವರು ಅಗ್ರಿಕಲ್ಚರ್ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಈ ವಿಭಾಗದಲ್ಲಿ 10ರಲ್ಲಿ 8 ರ್‍ಯಾಂಕ್ ದ.ಕ. ಜಿಲ್ಲೆಗೆ ಲಭಿಸಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿದ ಸಿಇಟಿ ಪರೀಕ್ಷೆಯಲ್ಲಿ ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಕ್ಷಯ್ ಎಂ. ಹೆಗ್ಡೆ ಅವರು ಅಗ್ರಿಕಲ್ಚರ್ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಈ ವಿಭಾಗದಲ್ಲಿ 10ರಲ್ಲಿ 8 ರ್‍ಯಾಂಕ್ ದ.ಕ. ಜಿಲ್ಲೆಗೆ ಲಭಿಸಿದೆ.ಇದೇ ರೀತಿ ಮಂಗಳೂರಿನ ಕೊಡಿಯಾಲ್‌ಬೈಲ್ ಹಾಗೂ ವಳಚ್ಚಿಲ್ ಎಕ್ಸ್‌ಪರ್ಟ್ ಕಾಲೇಜು, ಮೂಡುಬಿದಿರೆಯ ಆಳ್ವಾಸ್ ಹಾಗೂ ಕಲ್ಲಬೆಟ್ಟುವಿನ ಎಕ್ಸಲೆಂಟ್ ಕಾಲೇಜುಗಳ ಹಲವು ವಿದ್ಯಾರ್ಥಿಗಳು ಉತ್ತಮ ರ‍್ಯಾಂಕ್ ಗಳಿಸಿ ಸಾಧನೆ ಮೆರೆದಿದ್ದಾರೆ.
ಅಗ್ರಿಕಲ್ಚರ್ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಅಕ್ಷಯ್ ಎಂ. ಹೆಗ್ಡೆ ಪ್ರಥಮ ರ್‍ಯಾಂಕ್ ಗಳಿಸಿದ್ದರೆ, ವಳಚ್ಚಿಲ್‌ನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಸಾಹಿಸ್ ಶ್ರವಣ್ ಪಂಡಿತ್‌ಗೆ ದ್ವಿತೀಯ ರ್‍ಯಾಂಕ್, ಸುಚಿತ್ ಪಿ. ಪ್ರಸಾದ್‌ಗೆ ತೃತೀಯ ರ್‍ಯಾಂಕ್, ಸ್ನೇಹ ಐ ಯಾರಗಾನ್ವಿಗೆ 5ನೇ ರ್‍ಯಾಂಕ್, ಸಿದ್ದೇಶ್ ಬಿ. ದಮ್ಮಾಲಿಗೆ 7ನೇ ರ್‍ಯಾಂಕ್, ನಿಖಿಲ್ ಸೊನ್ನಾದ್‌ಗೆ 8ನೇ ರ್‍ಯಾಂಕ್ ಮತ್ತು ವಚನ್ ಎಲ್.ಎ. ಅವರಿಗೆ 10ನೇ ರ್‍ಯಾಂಕ್, ಕೊಡಿಯಾಲ್‌ಬೈಲ್ ಎಕ್ಸ್‌ಪರ್ಟ್ ಪಿಯು ಕಾಲೇಜು ವಿದ್ಯಾರ್ಥಿ ಕೆ.ರೆಹಾನ್ ಮಹಮ್ಮದ್ 9ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.ವೆಟರ್ನರಿಯಲ್ಲಿ ವಳಚ್ಚಿಲ್ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಸಫಲ್ ಎಸ್. ಶೆಟ್ಟಿ 3ನೇ ರ್‍ಯಾಂಕ್, ಮೂಡುಬಿದಿರೆ ಕಲ್ಲಬೆಟ್ಟುವಿನ ನೂತನ್ ಕೃಷ್ಣ ಡಿ. ಭೈರವೇಶ್ 6ನೇ ರ‍್ಯಾಂಕ್ ಗಳಿಸಿದ್ದಾರೆ.
ನರ್ಸಿಂಗ್ ವಿಭಾಗದಲ್ಲಿ ವಳಚ್ಚಿಲ್ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಸಫಲ್ ಎಸ್. ಶೆಟ್ಟಿ ಅವರಿಗೆ 3ನೇ ರ್‍ಯಾಂಕ್, ಮೂಡುಬಿದಿರೆ ಕಲ್ಲಬೆಟ್ಟುವಿನ ನೂತನ್ ಕೃಷ್ಣ ಡಿ. ಭೈರವೇಶ್‌ಗೆ 6ನೇ ರ‍್ಯಾಂಕ್ ದೊರೆತಿದೆ.ಬಿಎನ್‌ವೈಎಸ್‌ನಲ್ಲಿ ವಳಚ್ಚಿಲ್ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಸಫಲ್ ಎಸ್ ಶೆಟ್ಟಿ ಅವರಿಗೆ 3ನೇ ರ್‍ಯಾಂಕ್, ಮೂಡುಬಿದಿರೆ ಕಲ್ಲಬೆಟ್ಟುವಿನ ನೂತನ್ ಕೃಷ್ಣ ಡಿ. ಭೈರವೇಶ್ 4ನೇ ರ‍್ಯಾಂಕ್ ಗಳಿಸಿದ್ದಾರೆ.
ವೆಟರ್ನರಿ ಪ್ರಾಕ್ಟಿಕಲ್‌ನಲ್ಲಿ ಮೂಡುಬಿದಿರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಅಕ್ಷಯ್ ರಾಜೇಂದ್ರ ತಹಸೀಲ್ದಾರ್ 6ನೇ ರ‍್ಯಾಂಕ್ ಪಡೆದಿದ್ದರೆ, ಎಂಜಿನಿಯರಿಂಗ್ ವಿಭಾಗದಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಶಿಶಿರ್ ಎಚ್. ಶೆಟ್ಟಿ 4ನೇ ರ‍್ಯಾಂಕ್ ಪಡೆದಿದ್ದಾರೆ.