ಜಯಶ್ರೀ ಕದರಮಂಗಲ ಡೇರಿ ಅಧ್ಯಕ್ಷೆ

| Published : Jun 18 2024, 12:56 AM IST

ಸಾರಾಂಶ

ಚನ್ನಪಟ್ಟಣ: ತಾಲೂಕಿನ ಕದರಮಂಗಲ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷೆಯಾಗಿ ಜೆಡಿಎಸ್- ಬಿಜೆಪಿ ಮೈತ್ರಿ ಬೆಂಬಲಿತ ಜಯಶ್ರೀ ಯೋಗೇಶ್ ಹಾಗೂ ಉಪಾಧ್ಯಕ್ಷೆಯಾಗಿ ಸುನೀತಾ ಕೆ.ಆರ್. ಚುನಾಯಿತರಾದರು.

ಚನ್ನಪಟ್ಟಣ: ತಾಲೂಕಿನ ಕದರಮಂಗಲ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷೆಯಾಗಿ ಜೆಡಿಎಸ್- ಬಿಜೆಪಿ ಮೈತ್ರಿ ಬೆಂಬಲಿತ ಜಯಶ್ರೀ ಯೋಗೇಶ್ ಹಾಗೂ ಉಪಾಧ್ಯಕ್ಷೆಯಾಗಿ ಸುನೀತಾ ಕೆ.ಆರ್. ಚುನಾಯಿತರಾದರು.

ಡೇರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷೆ ಸ್ಥಾನಕ್ಕೆ ಜಯಶ್ರೀ ಹಾಗೂ ಶಿಲ್ಪಾ ಕೆ.ಟಿ. ಮತ್ತು ಉಪಾಧ್ಯಕ್ಷೆ ಸ್ಥಾನಕ್ಕೆ ಸುನೀತಾ ಕೆ.ಆರ್. ಹಾಗೂ ರಂಜಿತಾ ಬಿ.ಎಸ್. ಉಮೇದುವಾರಿಕೆ ಸಲ್ಲಿಸಿ ಕಣದಲ್ಲಿದ್ದರು.

ಡೇರಿಯಲ್ಲಿ 12 ನಿರ್ದೇಶಕರು, ಒಂದು ನಾಮನಿರ್ದೇಶನ ಸೇರಿ 13 ನಿರ್ದೇಶಕರಿದ್ದರು. ಈ ಪೈಕಿ ಒಬ್ಬರು ಗೈರಾಗಿದ್ದರು.

ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಜಯಶ್ರೀ ಅವರಿಗೆ 7 ಹಾಗೂ ಉಪಾಧ್ಯಕ್ಷೆ ಸ್ಥಾನದ ಸುನೀತಾ ಅವರಿಗೆ 7 ಮತ ಪಡೆದು ಆಯ್ಕೆಯಾದರು.

ನಿರ್ದೇಶಕರಾದ ಶಿಲ್ಪಾ, ಕಮಲಮ್ಮ, ಚೈತ್ರಾ, ಪ್ರಮೀಳಾ, ಯಶೋಧಮ್ಮ, ಸುನೀತಾ, ಪ್ರೀತಿ, ರಂಜಿತಾ, ಪವಿತ್ರ, ಜಯಶ್ರೀ, ಸವಿತಾ ಹಾಗೂ ನಾಮನಿರ್ದೇಶನ ನಿರ್ದೇಶಕಿ ಭಾಗ್ಯಮ್ಮ ಮರಿಸಿದ್ದೇಗೌಡ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಓರ್ವ ನಿರ್ದೇಶಕಿ ಕೆ.ಎನ್.ಲತಾ ಗೈರಾಗಿದ್ದರು. ಡೇರಿ ಸಿಇಒ ಕೆ.ಶಾರದಮ್ಮ, ಹಾಲು ಪರೀಕ್ಷಕಿ ಕೆ.ಆರ್.ಶಶಿಕಲಾ ಹಾಗೂ ಸಹಾಯಕಿ ಎಚ್.ಆರ್.ಶೃತಿ ಸುಗಮ ಚುನಾವಣೆಗೆ ಸಹಕಾರ ನೀಡಿದರು.

ನೂತನ ಅಧ್ಯಕ್ಷೆ ಜಯಶ್ರೀ ಮಾತನಾಡಿ, ಡೇರಿಯ ಎಲ್ಲಾ ನಿರ್ದೇಶಕರು ಹಾಗೂ ಗ್ರಾಮ ಮುಖಂಡರ ಸಹಕಾರದಿಂದ ಸಂಘದ ಅಧ್ಯಕ್ಷೆಯಾಗಿದ್ದೇನೆ. ನನ್ನ ಮೇಲೆ ನಂಬಿಕೆ ಇಟ್ಟು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ. ಸರ್ವರ ಸಹಕಾರ ಹಾಗೂ ಮಾರ್ಗದರ್ಶನದೊಂದಿಗೆ ಡೇರಿಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.

ಡೇರಿಯ ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರನ್ನು ಗ್ರಾಪಂ ಸದಸ್ಯರಾದ ರಾಜೇಂದ್ರ, ರಾಜು, ಮುಖಂಡರಾದ ವಕೀಲ ರವಿ ಕೆ.ಆರ್ ಗೌಡ, ರಮೇಶ್ ಕೊಂಡಯ್ಯ, ಯೋಗೇಶ್, ಕೆ.ಆರ್.ಸಿದ್ದರಾಜೇಗೌಡ, ಪ್ರದೀಪ್ ಕುಮಾರ್, ಅಜಿತ್, ದಿನೇಶ್, ನಾಗರಾಜು, ನಾಗೇಶ್, ಸ್ವಾಮಿ ಅಭಿನಂದಿಸಿದರು.ಪೊಟೋ೧೭ಸಿಪಿಟಿ೬: ಕದರಮಂಗಲ ಮಹಿಳಾ ಡೇರಿ ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆಯನ್ನು ಗ್ರಾಮದ ಪ್ರಮುಖರು ಅಭಿನಂದಿಸಿದರು.