ತಾಲೂಕಿನ ಕುರಿಕೋಟಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ ಶಾಲೆಗೆ ಮಕ್ಕಳ ಆಯೋಗ ರಾಜ್ಯಾಧ್ಯಕ್ಷ ಸಂತೋಷ್ ಪಾಟೀಲ ಭೇಟಿ ನೀಡಿ ಶಾಲಾ ಕೋಣೆ ಮೇಲ್ಚಾವಣಿ ಗೋಡೆ ಬಿದ್ದಿರುವುದನ್ನು ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಕಮಲಾಪುರ
ತಾಲೂಕಿನ ಕುರಿಕೋಟಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ ಶಾಲೆಗೆ ಮಕ್ಕಳ ಆಯೋಗ ರಾಜ್ಯಾಧ್ಯಕ್ಷ ಸಂತೋಷ್ ಪಾಟೀಲ ಭೇಟಿ ನೀಡಿ ಶಾಲಾ ಕೋಣೆ ಮೇಲ್ಚಾವಣಿ ಗೋಡೆ ಬಿದ್ದಿರುವುದನ್ನು ಪರಿಶೀಲಿಸಿದರು.ಕಟ್ಟಡದ ಸಂಪೂರ್ಣ ಸ್ಥಿತಿ ಪರಿಶೀಲಿಸಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಮಾತುಕತೆ ನಡೆಸಿ, ಶಾಲಾ ಕಟ್ಟಡದ ಸಮಸ್ಯೆ ಹಾಗೂ ಮಕ್ಕಳಿಗೆ ಎದುರಾಗುತ್ತಿರುವ ಅಪಾಯದ ಕುರಿತು ಮಾಹಿತಿ ಪಡೆದುಕೊಂಡರು.ಶಾಲೆಯ ಕಟ್ಟಡದ ದುಸ್ಥಿತಿ ಹಾಗೂ ವಿದ್ಯಾರ್ಥಿಗಳ ಸುರಕ್ಷತೆ ಕುರಿತು, ವಿದ್ಯಾರ್ಥಿಗಳಿಗೆ ಎದುರಾಗುತ್ತಿರುವ ತೊಂದರೆಗಳು ಹಾಗೂ ಸುರಕ್ಷತಾ ಕ್ರಮಗಳ ಕುರಿತು ಮುಖ್ಯ ಶಿಕ್ಷಕಿ ಮಾಹಿತಿ ಪಡೆದುಕೊಂಡ ಅವರು ಮಕ್ಕಳಿಗೆ ಯಾವುದೇ ರೀತಿಯ ಅಪಾಯ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು.ಮುಖ್ಯ ಶಿಕ್ಷಕಿ ಮಹದೇವಿ ಮಾತನಾಡಿ, ವಿದ್ಯಾರ್ಥಿಗಳು ಜೀವ ಭಯದಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲಾ ಕಟ್ಟಡದ ಗೋಡೆಗಳು ಹಾಗೂ ಮೇಲ್ಛಾವಣಿ ಹದಗೆಟ್ಟಿದ್ದು, ಯಾವ ಸಂದರ್ಭವಾದರೂ ಅನಾಹುತ ಸಂಭವಿಸಬಹುದು ಎಂಬ ಭಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಲ್ಲಿ ಕಾಡಿದೆ. ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿಯೇ ಮಕ್ಕಳು ಪಾಠ ಕೇಳುವುದು ಅನಿವಾರ್ಯ ಎಂದು ಅಳಲು ತೋಡಿಕೊಂಡರು.ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೂಡಲೇ ಶಾಲೆ ಕಟ್ಟಡಗಳು ದುರಸ್ತಿಪಡಿಸಿ, ಅಗತ್ಯವಿದ್ದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡುವ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದ. ಜತೆಗೆ ಶೀಘ್ರವೇ ಸಮಸ್ಯೆ ಬಗೆಹರಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
--ಕೋಟ್ಸ್------ಈಗಾಗಲೇ ಎರಡು ಕೋಣೆಗಳು ಗೋಡೆ ಬಿದಿದ್ದು, ಮಕ್ಕಳು ಆತಂಕದಲ್ಲಿ ಪಾಠ ಕೇಳುವುದು ಅನಿವಾರ್ಯವಾಗಿದೆ. ಇದರ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಮಕ್ಕಳಿಗೆ ಏನಾದರೂ ಅನಾಹುತ ಆದರೆ ಅದಕ್ಕೆ ನೇರ ಹೊಣೆ ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳದ್ದು.
-ಗಣೇಶ ಚಿಕ್ಕನಾಗಾಂವ, ಪಿಕೆಪಿಎಸ್ ಅಧ್ಯಕ್ಷ