ವಿಜಯಪುರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ 2025-26ನೇ ಸಾಲಿನ 32ನೇ ವಾರ್ಷಿಕ ಸರ್ವ ಸಾಧಾರಣ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ 2026 ಮಾರ್ಚ್ 31ಕ್ಕೆ ಒಟ್ಟು 12928 ಸದಸ್ಯರು, 25000 ಗ್ರಾಹಕರೊಂದಿಗೆ ₹23,208.52 ಲಕ್ಷ ದುಂಡಿಯುವ ಬಂಡವಾಳದ ಮೂಲಕ ₹96,997.33 ಲಕ್ಷ ವಾರ್ಷಿಕ ವಹಿವಾಟು ಮಾಡಿದೆ. ಬ್ಯಾಂಕು 11 ಶಾಖೆಗಳ ಮೂಲಕ ಒಟ್ಟು ₹212.53 ಲಕ್ಷ ಆದಾಯ ಗಳಿಸಿದ್ದು, ಈ ವರ್ಷ ₹145.39 ಲಕ್ಷ ನಿವ್ವಳ ಲಾಭ ಘೋಷಿಸಿದ್ದು, ಸದಸ್ಯರಿಗೆ ಶೇ.6 ರಷ್ಟು ಲಾಭಾಂಶ ಹಂಚಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷೆ ಮಲ್ಲಮ್ಮ ಯಾಳವಾರ ಹೇಳಿದರು.

ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ 2025-26ನೇ ಸಾಲಿನ 32ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಧಾನ ವ್ಯವಸ್ಥಾಪಕಿ ಲಕ್ಷ್ಮೀ ಬಳಗೊಂಡ ಅವರು 2025-26ನೇ ಸಾಲಿನ ವಾರ್ಷಿಕ ವರದಿ ಮತ್ತು ಅಢಾವೆ ಪ್ರತಿಕೆ ಓದಿದರು. ಬ್ಯಾಂಕಿನ ಸದಸ್ಯರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪ್ರತಿಭಾವಂತ ಮಕ್ಕಳಿಗೆ ಆಡಳಿತ ಮಂಡಳಿ ಸದಸ್ಯರು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಉತ್ತಮವಾಗಿ ಕಾರ್ಯ ನಿರ್ವಹಿಸಿದ ದೇವರಹಿಪ್ಪರಗಿ ಶಾಖೆಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗೆ ಪ್ರಥಮ ಬಹುಮಾನ, ಜಲನಗರ ಶಾಖೆಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗೆ ದ್ವೀತೀಯ ಬಹುಮಾನ ಹಾಗೂ ತಿಕೋಟಾ ಶಾಖೆಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗೆ ತೃತೀಯ ಬಹುಮಾನ ನೀಡಲಾಯಿತು. ವಸೂಲಾತಿ ಪ್ರಮಾಣವನ್ನು ಹೆಚ್ಚಿಸಿ ಬ್ಯಾಂಕಿನ ಅಭಿವೃದ್ಧಿಗೆ ಕಾರಣರಾದ ಮಾರಾಟಾಧಿಕಾರಿ ಬಾಬುರಾವ ರಾಠೋಡ, ಹಿರಿಯ ಸಹಾಯಕಿ ಅಶ್ವಿನಿ ಕಪಾಲಿಗೆ ಬಹುಮಾನ ನೀಡಲಾಯಿತು.

ಪ್ರಭಾವತಿ ಪಾಟೀಲ ಕಾರ್ಯಕ್ರಮ ನಡೆಸಿಕೊಟ್ಟರು. ವ್ಯವಸ್ಥಾಪಕರಾದ ಮೈತ್ರಾ ಬಾಗೇವಾಡಿ ನಿರೂಪಿಸಿದರು. ರೇಣುಕಾ ದೇಸಾಯಿ ವಂದಿಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಆಡಳಿತ ಮಂಡಳಿ, ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.