ಭರತ ಬೊಮ್ಮಾಯಿ ಬೆಂಬಲಿಸಿ ರೈತರಿಂದ ಚಕ್ಕಡಿ ಮೆರವಣಿಗೆ

| Published : Nov 12 2024, 12:45 AM IST

ಸಾರಾಂಶ

ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ಅವರನ್ನು ಬೆಂಬಲಿಸಿ ರೈತರು ಸ್ವಯಂಪ್ರೇರಣೆಯಿಂದ ಸೋಮವಾರ ಜೋಡುಎತ್ತು ಚಕ್ಕಡಿ ಸಮೇತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕೈಗೊಂಡರು.

ಸವಣೂರು: ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ಅವರನ್ನು ಬೆಂಬಲಿಸಿ ರೈತರು ಸ್ವಯಂಪ್ರೇರಣೆಯಿಂದ ಸೋಮವಾರ ಜೋಡುಎತ್ತು ಚಕ್ಕಡಿ ಸಮೇತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕೈಗೊಂಡರು.ಹುರಳಿಕುಪ್ಪಿ ವೃತ್ತದಲ್ಲಿರುವ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆರಂಭಗೊಂಡ 75 ಕ್ಕೂ ಹೆಚ್ಚಿನ ಜೋಡೆತ್ತು-ಚಕ್ಕಡಿ ಮೆರವಣಿಗೆ ಗೌಡ್ರ ಓಣಿ, ಶುಕ್ರವಾರ ಪೇಟೆ, ಉಪ್ಪಾರ ಓಣಿ, ದಂಡಿನ ಪೇಟೆ, ಸಿಂಪಿಗಲ್ಲಿ, ಬುಧವಾರ ಪೇಟೆ, ಕೋರಿಪೇಟೆ, ಸೈಬಣ್ಣನವರ ಓಣಿ, ಸುಣಗಾರ ಓಣಿ, ಚಿತ್ರಗಾರ ಓಣಿಯಲ್ಲಿ ಹಾಯ್ದು ಭರಮಲಿಂಗೇಶ್ವರ ವೃತ್ತದಲ್ಲಿ ಸಂಪನ್ನಗೊಂಡಿತು.ರೈತ ಮುಖಂಡ ಶಂಕರಗೌಡ ಪಾಟೀಲ ಮಾತನಾಡಿ, ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರು ಕೈಗೊಂಡ ಅಭಿವೃದ್ಧಿ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ಅವರಿಗೆ ''''''''ನಮ್ಮ ಹೊಲ, ನಮ್ಮ ದಾರಿ'''''''' ಹಾಗೂ ನಮ್ಮೂರು, ನಮ್ಮ ಕೆರೆ ಅಭಿವೃದ್ಧಿ''''''''ಗಾಗಿ ಸ್ಥಳೀಯ ರೈತ ಮುಖಂಡರಾದ ಗಣೇಶ ಗಾಣಗೇರ, ಶಿವಲಿಂಗಪ್ಪ ಕುಲಕರ್ಣಿ, ಉಮೇಶ ಕುಲಕರ್ಣಿ ಅವರ ನೇತೃತ್ವದಲ್ಲಿ ರೈತರು ಸ್ವಯಂ ಪ್ರೇರಣೆಯಿಂದ ಬಿಜೆಪಿ ಪರ ಪ್ರಚಾರ ಕೈಗೊಳ್ಳಲು ಮುಂದಾಗಿದ್ದಾರೆ ಎಂದರು.

ಪ್ರಮುಖರಾದ ಸಂಗಪ್ಪ ಏರೇಶಿಮಿ, ಹನುಮಂತಗೌಡ ಮುದಿಗೌಡ್ರ, ಬಸನಗೌಡ ವಾಡೇದ, ಈಶ್ವರಗೌಡ ಪಾಟೀಲ, ವೀರನಗೌಡ ಪಾಟೀಲ ಹಾಗೂ ಇತರರು ಪಾಲ್ಗೊಂಡಿದ್ದರು.