ಸೆ.7ರಂದು ಛಲವಾದಿ ಸಮುದಾಯದ ಚಿಂತನ-ಮಂಥನ ಸಭೆ

| Published : Sep 03 2025, 01:02 AM IST

ಸಾರಾಂಶ

ಛಲವಾದಿ ಸಮುದಾಯದ ಮುಂದಿರುವ ಸವಾಲುಗಳ ಕುರಿತು ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಛಲವಾದಿ ಸಮುದಾಯದ ಚಿಂತನ-ಮಂಥನ ಸಭೆ ಹೊಸಪೇಟೆಯಲ್ಲಿ ಸೆ.7ರಂದು ನಡೆಯಲಿದೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಛಲವಾದಿ ಸಮುದಾಯದ ಮುಂದಿರುವ ಸವಾಲುಗಳ ಕುರಿತು ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಛಲವಾದಿ ಸಮುದಾಯದ ಚಿಂತನ-ಮಂಥನ ಸಭೆ ಹೊಸಪೇಟೆಯಲ್ಲಿ ಸೆ.7ರಂದು ನಡೆಯಲಿದೆ. ಈ ಕುರಿತು ವಿಜಯನಗರ ಜಿಲ್ಲಾ ಛಲವಾದಿ ಮಹಾಸಭಾದ ಪೂರ್ವಭಾವಿ ಸಭೆ ನಗರದ ಪ್ರವಾಸಿ ಮಂದಿರದಲ್ಲಿ ನಡೆಯಿತು. ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದ ಬಲಗೈ ಸಮುದಾಯದ ಮುಂದೆ ಇರುವ ಸವಾಲುಗಳ ಕುರಿತು ಪ್ರತಿ ಹಂತದಲ್ಲಿ ಚರ್ಚಿಸಿ ಸಮಸ್ಯೆಗಳ ಪಟ್ಟಿ ಸಿದ್ದಪಡಿಸುವುದು. ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳುದಿರುವಿಕೆಯ ಕಾರಣಗಳು ಮತ್ತು ಪರಿಹಾರ ಕೖಗೊಳ್ಳುವುದು, ಬಲಗೈ ಸಮುದಾಯದ ಮಹಿಳೆಯರಿಗೆ ಆರ್ಥಿಕ ಮತ್ತು ವಿದ್ಯಾರ್ಥಿನಿಯರಿಗೆ ಆತ್ಮಸ್ಥೈರ್ಯ ನೀಡುವಲ್ಲಿನ ಸವಾಲುಗಳು, ಬಲಗೈ ಸಮುದಾಯಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಮುಂದಿರುವ ಸವಾಲು ಮತ್ತು ನಿರುದ್ಯೋಗ ಸಮಸ್ಯೆ ಹಾಗು ಮುಂಬರುವ ದಿನಗಳಲ್ಲಿ ಉದ್ಯೋಗದಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಪಡೆಯುವ ಬಗ್ಗೆ ಸಮುದಾಯದ ಪಾತ್ರ ನಿರ್ವಹಿಸುವ ಕುರಿತು ಚರ್ಚೆ ನಡೆಯಿತು.

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಉದ್ಘಾಟಿಸಲಿದ್ದಾರೆ. ಹುಬ್ಬಳ್ಳಿ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ, ಮಳವಳ್ಳಿ ಶಾಸಕ ನರೇಂದ್ರಸ್ವಾಮಿ, ಕಲಬುರಗಿ ಸಂಸದ ರಾಧಾಕೃಷ್ಣ, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸದಸ್ಯ ಸುನಿಲ್ ಬೋಸ್, ಕುಡುಚಿ ಶಾಸಕ ಮಹೇಂದ್ರ ತಮ್ಮಣ್ಣನವರ್, ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಮತ್ತು ಬಲಗೈ ಸಮುದಾಯದ ಅನೇಕ ನಿಗಮ ಮಂಡಳಿಗಳ ಅಧ್ಯಕ್ಷರು, ಸದಸ್ಯರು ಭಾಗವಹಿಸಲಿದ್ದಾರೆ ಎಂದು ವಿಜಯನಗರ ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಸೋಮಶೇಖರ್ ಬಣ್ಣದಮನೆ, ಪ್ರಧಾನ ಕಾರ್ಯದರ್ಶಿ ಸಿ. ಪರಶುರಾಮ್ ಹರಪನಹಳ್ಳಿ ತಿಳಿಸಿದ್ದಾರೆ.