ದೇವನಹಳ್ಳಿ: ನಾಗಮೋಹನದಾಸ್ ಸರ್ಕಾರಕ್ಕೆ ಸಲ್ಲಿಸಿರುವ ಒಳಮೀಸಲಾತಿ ವರದಿ ಅವೈಜ್ಞಾನಿಕವಾಗಿದ್ದು ಎಬಿಸಿ ವರ್ಗೀಕರಣ ಮಾಡದೇ ಈಗಿರುವಂತೆ ಯಥಾ ಸ್ಥಿತಿ ಮುಂದುವರುಸಿ ನಮ್ಮ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಮಾ. ೨೫ರಂದು ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರಾಜ್ಯ ಛಲವಾಧಿ ಮಹಾಸಭಾ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ದೇವನಹಳ್ಳಿಯಿಂದ 5 ಸಾವಿರ ಬಲಗೈ ಸಮಾಜದವರು ತೆರಳುತ್ತಿದ್ದೇವೆ ಎಂದು ಛಲವಾದಿ ಮಹಾಸಭಾದ ಜಿಲ್ಲಾ ಮುಖಂಡ ಚೌಡಪ್ಪನಹಳ್ಳಿ ಲೋಕೇಶ್ ತಿಳಿಸಿದರು.
ಪೂರ್ವಬಾವಿ ಸಭೆ ಹಾಗೂ ಸದಸ್ಯತ್ವ ಅಭಿಯಾನದ ಬಳಿಕ ಮಾತನಾಡಿದ ಅವರು, ಈ ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ, ನಮ್ಮ ಹಕ್ಕು ನಮ್ಮ ಪಾಲು ಉಳಿಸಿಕೊಳ್ಳಲು ಅಷ್ಟೇ. ನಮ್ಮ ಸಮುದಾಯಕ್ಕೆ ಹಾಗೂ ಅಂಬೇಡ್ಕರ್‌ಗೆ ಅವಮಾನ ಮಾಡುವವರ ವಿರುದ್ಧವಷ್ಟೇ ನಮ್ಮ ಧ್ವನಿ. ಕೋಲಾರ, ಬೆಂಗಳೂರು ನಗರ, ಗ್ರಾಮಾಂತರ, ಹಾಸನ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಲಗೈ ಸಮಾಜದವರೇ ಹೆಚ್ಚಿನ ಸಂಖ್ಯೆಲ್ಲಿದ್ದರೂ ಸಮೀಕ್ಷೆಯಲ್ಲಿ ಕಡಿಮೆ ಅಂಕಿ ಅಂಶ ತೋರಿಸಿದ್ದಾರೆಂದು ಆರೋಪಿಸಿದರು.ದೇವನಹಳ್ಳಿ ಛಲವಾದಿ ಮಹಾಸಭಾ ಅಧ್ಯಕ್ಷ ಎ.ನಾಗರಾಜ್ ಮಾತನಾಡಿ, ಎಬಿಸಿ ವರ್ಗೀಕರಣದನ್ವಯ ಒಳಮೀಸಲಾತಿ ಜಾರಿ ಮಾಡಿದರೆ ಹೊಲೆಯ ಸಮುದಾಯಕ್ಕೆ ಅನ್ಯಾಯವಾಗಲಿದೆ. ಹಿಂದಿನಿಂದಲೂ ನಮ್ಮನ್ನು ಹೊಲೆಯ ಎಂದು ಇವರು ಗುರುತಿಸಿಲ್ಲ. ಈ ಭಾಗದಲ್ಲಿ ಆದಿಕರ್ನಾಟಕ ಎಂದು ತುಮಕೂರು ಭಾಗದಲ್ಲಿ ಆದಿ ದ್ರಾವಿಡ ಎಂದು ವಿಭಜಿಸಿ ನಮ್ಮ ಸಂಖ್ಯಾಬಲ ಕಡಿಮೆ ಮಾಡುವ ಹುನ್ನಾರ ರಾಜಕೀಯ ಓಟ್ ಬ್ಯಾಂಕ್ ಗಾಗಿ ಮಾಡಿದ್ದಾರೆ. ಹಾಗಾಗಿ ನಾಗಮೋಹನದಾಸ್ ವರದಿಯೇ ಅವೈಜ್ಞಾನಿಕ. ಈ ಮೀಸಲಾತಿ ಹಿಂಪಡೆಯಬೇಕೆಂದು ಇಂದಿನ ಸಭೆಯಯಲ್ಲಿ ನಿರ್ಣಯಿಸಿ ೨೫ರ ಹೋರಾಟಕ್ಕೆ ಕರೆ ನೀಡಿದ್ದೇವೆ ಎಂದು ಹೇಳಿದರು.
ಈ ವೇಳೆ ದೇವನಹಳ್ಳಿ ಛಲವಾದಿ ಮಹಾಸಭಾ ಅಧ್ಯಕ್ಷ ಎ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಮಹೇಶ್ ದಾಸ್, ಖಜಾಂಚಿ ಜನತಾ ಕಾಲೋನಿ ರಾಮಣ್ಣ, ಉಪಾಧ್ಯಕ್ಷ ದೇವನಹಳ್ಳಿ ಜಿ.ಸುರೇಶ್, ಪದಾಧಿಕಾರಿಗಳಾದ ಚೌಡಪ್ಪನಹಳ್ಳಿ ಎಂ.ಲೋಕೇಶ್, ಕುಂದಾಣ ಕೆ.ವಿ.ಸ್ವಾಮಿ, ವಿಜಯಪುರ ಪುರಸಭಾ ಸದಸ್ಯ ನಾರಾಯಣಸ್ವಾಮಿ, ಮಾಳಿಗೆನಹಳ್ಳಿ ಪ್ರಕಾಶ್, ಸುಮಿತ್ರಮ್ಮ, ದಾಸರಹಳ್ಳಿ ಜನಕಮಣಿ, ಶ್ರೀನಿವಾಸ ಗಾಂಧಿ, ಶ್ರೀನಿವಾಸ್, ವೈ.ಎಂ.ಮುನಿಕೃಷ್ಣ, ಡಿ.ಎಂ.ನಾಗರಾಜ್, ಜಗದೀಶ್ ವೆಂಕಟೇಶ್, ಮುರಳಿ ತ್ರಿಮೂರ್ತಿ, ಮೂರ್ತಿ, ರವಿಕುಮಾರ್, ನಲ್ಲೂರು ರಾಜೇಶ, ಕೋರಮಂಗಲ ರವಿ, ಪರಮೇಶ್ ಇತರರು ಹಾಜರಿದ್ದರು.೨೩ ದೇವನಹಳ್ಳಿ ಚಿತ್ರಸುದ್ದಿ :೦೧
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರಾಜ್ಯ ಛಲವಾಧಿ ಮಹಾಸಭಾ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆ ಕುರಿತು ಛಲವಾದಿ ಮಹಾಸಭಾದ ಮುಖಂಡರು ಮಾಹಿತಿ ನೀಡಿದರು.