ಚಳ್ಳಕೆರೆ: ತೊಗರಿ ಖರೀದಿ ಕೇಂದ್ರ ಆರಂಭ

| Published : Mar 10 2025, 12:19 AM IST

ಸಾರಾಂಶ

ಚಳ್ಳಕೆರೆ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರಾರಂಭಗೊಂಡ ತೊಗರಿ ಕೇಂದ್ರಕ್ಕೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು.

ಸದೂಪಯೋಗಪಡಿಸಿಕೊಳ್ಳಲು ಶಾಸಕ ಟಿ.ರಘುಮೂರ್ತಿ ಮನವಿಕನ್ನಡಪ್ರಭ ವಾರ್ತೆ ಚಳ್ಳಕೆರೆ

ಕಳೆದ ಕೆಲವು ವರ್ಷಗಳಿಂದ ಈ ಭಾಗದ ರೈತರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ರೈತ ಸಂಘಟನೆಗಳು ಸಹ ತೊಗರಿ ಕೇಂದ್ರ ಆರಂಭಕ್ಕೆ ಒತ್ತಡ ಹೇರಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ರೈತರ ನೆರವಿಗಾಗಿ ಸರ್ಕಾರ ತೊಗರಿ ಕೇಂದ್ರವನ್ನು ಆರಂಭಿಸಿದೆ. ರೈತರು ತಾವು ಬೆಳೆದ ತೊಗರಿಯನ್ನು ಮಾರುಕಟ್ಟೆಗೆ ರವಾನಿಸಿ ಉತ್ತಮ ಲಾಭ ಪಡೆಯುವಂತೆ ಶಾಸಕ ಟಿ.ರಘುಮೂರ್ತಿ ಹೇಳಿದರು.

ಮಾರುಕಟ್ಟೆ ಆವರಣದಲ್ಲಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ವತಿಯಿಂದ ಪ್ರಾರಂಭಗೊಂಡ ತೊಗರಿ ಕೇಂದ್ರವನ್ನು ತೊಗರಿ ಕಾಳುಗಳನ್ನು ಶುದ್ಧಪಡಿಸುವ ಯಂತ್ರಕ್ಕೆ ಹಾಕಿ ಚಾಲನೆ ನೀಡಿ ಅವರು ಮಾತನಾಡಿದರು.ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ 6 ಸಾವಿರವಿದೆ, ಖರೀದಿ ಕೇಂದ್ರದಲ್ಲಿ 7550 ಹಾಗೂ ರಾಜ್ಯ ಸರ್ಕಾರ450 ರು.ಬೆಂಬಲ ಬೆಲೆ ಸೇರಿ 8 ಸಾವಿರ ರೈತರ ತೊಗರಿಯನ್ನು ಖರೀದಿ ಮಾಡಲಾಗುತ್ತದೆ.

ರೈತರು ಇದರ ಸದುಪಯೋಗವನ್ನು ಪೂರ್ಣ ಪ್ರಮಾಣದಲ್ಲಿ ಪಡೆಯುವಂತೆ ಮನವಿ ಮಾಡಿದರು. ಸಹಕಾರ ಮಂಡಳಿ ನಿರ್ದೇಶಕ ಗಿರೀಶ್ ಮಾತನಾಡಿ, ಪ್ರಸ್ತುತ ವರ್ಷ ತೊಗರಿಬೆಳೆ ಕುಂಠಿತವಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ತೊಗರಿ ಖರೀದಿಸಲು ಸಾಧ್ಯವಾಗದು. ಅಂದಾಜು ಏಳೆಂಟು ಸಾವಿರ ಕ್ವಿಂಟಲ್ ಮಾತ್ರ ಖರೀದಿಸಬಹುದು. ತಾಲೂಕಿನಾದ್ಯಂತ ಒಟ್ಟು 600 ರೈತರು ತೊಗರಿ ಬೆಳೆಗಾರರಾಗಿ ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದರು.

ಈ ವೇಳೆ ಕಾರ್ಯಕ್ರಮದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ನಗರಸಭೆ ಉಪಾಧ್ಯಕ್ಷೆ ಸುಮ, ಸದಸ್ಯರಾದ ಕೆ.ವೀರಭದ್ರಪ್ಪ, ಎಂ.ಜೆ.ರಾಘವೇಂದ್ರ, ಬಿ.ಟಿ.ರಮೇಶ್‌ ಗೌಡ, ಎಪಿಎಂಸಿ ಕಾರ್ಯದರ್ಶಿ ಸುರೇಶ್, ವೆಂಕಟಲಕ್ಷ್ಮಿ, ಚನ್ನಸ್ವಾಮಿ ಉಪಸ್ಥಿತರಿದ್ದರು.