ಸಾರಾಂಶ
ಪ್ರಸ್ತುತ ಪ್ರಪಂಚ ಎದುರಿಸುತ್ತಿರುವ ಪ್ರಮುಖ ಸವಾಲು ಹಾಗೂ ಬಿಕ್ಕಟ್ಟಿನ ಪರಿಸ್ಥಿತಿಗಳನ್ನು ಕೃತಕ ಬುದ್ಧಿಮತ್ಯೆ (ಎಐ)ಯಿಂದ ಎದುರಿಸಲು ಸಾಧ್ಯವಾಗಿದೆ.
ರಾಯಚೂರು: ಪ್ರಸ್ತುತ ಪ್ರಪಂಚ ಎದುರಿಸುತ್ತಿರುವ ಪ್ರಮುಖ ಸವಾಲು ಹಾಗೂ ಬಿಕ್ಕಟ್ಟಿನ ಪರಿಸ್ಥಿತಿಗಳನ್ನು ಕೃತಕ ಬುದ್ಧಿಮತ್ಯೆ (ಎಐ)ಯಿಂದ ಎದುರಿಸಲು ಸಾಧ್ಯವಾಗಿದೆ ಎಂದು ರಾಯಚೂರಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಯ ನಿರ್ದೇಶಕ ಪ್ರೊ.ಹರೀಶ ಕುಮಾರ ಸರ್ದಾನ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಯರಗೇರಾ ಸಮೀಪದ ರಾಯಚೂರು ವಿಶ್ವವಿದ್ಯಾಲಯದ ಗಣಕ ವಿಜ್ಞಾನ ವಿಭಾಗದಲ್ಲಿ ರಾವಿವಿ ಹಾಗೂ ಯುನೈಟೆಡ್ ಕಿಂಗ್‌ಡಮ್(ಯುಕೆ)ನ, ವೇಲ್ಸ್, ಕಾರ್ಡಿಫ್ ಮೆಟ್ರೋಪೊಲಿಟಿನ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆ್ಯಂಡ್ ಕಂಪ್ಯೂಟರ್ ವಿಷನ್ ವಿತ್ ಹ್ಯಾಂಡ್ಸ್ ಆನ್ ಪ್ರಾಕ್ಟೀಸ್ ಯುಸಿಂಗ್ ಪೈಥಾನ್ ವಿಷಯ ಕುರಿತು ಐದು ದಿನಗಳ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.ಕೃತಕ ಬುದ್ಧಿಮತ್ಯೆಯು ಯಂತ್ರಗಳ ಬುದ್ಧಿವಂತಿಕೆಯನ್ನು ಸೂಚಿಸುತ್ತದೆ. ಇದು ಮಾನವರು ಮತ್ತು ಪ್ರಾಣಿಗಳ ನೈಸರ್ಗಿಕ ಬುದ್ಧಿವಂತಿಕೆಗೆ ವಿರುದ್ಧವಾಗಿದೆ. ಕೃತಕ ಬುದ್ಧಿಮತ್ಯೆಯೊಂದಿಗೆ, ಯಂತ್ರಗಳ ಕಲಿಕೆ, ಯೋಜನೆ, ತಾರ್ಕಿಕ ಮತ್ತು ಸಮಸ್ಯೆ ಪರಿಹರಿಸುವಂತಹ ಕಾರ್ಯಗಳನ್ನು ನಿರ್ವಹಿಸುತ್ತವೆ ಎಂದರು.
ಯುನೈಟೆಡ್ ಕಿಂಗ್‌ಡಮ್ ವೇಲ್ಸ್, ಕಾರ್ಡಿಫ್ ಮೆಟ್ರೋಪಾಲಿಟಿಯನ್ ವಿಶ್ವವಿದ್ಯಾಲಯದ ರೀಡರ್ ಡಾ.ಫಿಯೋನಾ ಕ್ಯಾರೋಲ್, ಡಾ.ಸಂದೀಪ್ ಸಿಂಗ್ ಸೆಂಗರ್,ವಿಜ್ಞಾನ ನಿಕಾಯದ ಡೀನ್ ಪ್ರೊ.ಪಾರ್ವತಿ ಸಿ.ಎಸ್ ಹಾಗೂ ಕಲಾನಿಕಾಯದ ಡೀನ್ ಹಾಗೂ ಕಾರ್ಯಗಾರದ ಸಂಯೋಜಕರಾದ ಪ್ರೊ.ಪಿ.ಭಾಸ್ಕರ್ ಅವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಯಚೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಹರೀಶ ರಾಮಸ್ವಾಮಿವಹಿಸಿದ್ದರು.
ಈ ಸಂದರ್ಭದಲ್ಲಿ ರಾವಿವಿಯ ಕುಲಸಚಿವ (ಮೌಲ್ಯಮಾಪನ) ಪ್ರೊ.ಯರಿಸ್ವಾಮಿ.ಎಂ, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ರಾಘವೇಂದ್ರ ಫತ್ತೇಪುರ, ಉಪಕುಲಸಚಿವ ಡಾ.ಜಿ.ಎಸ್.ಬಿರಾದಾರ್, ಅಭಿಯಂತರರು ಪಂಪಾಪತಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ರವಿ ಕುಮಾರ, ಡಾ.ಚಂದ್ರಶೇಖರ ಸಜ್ಜನ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.