ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಚಾಮರಾಜನಗರ ಜಿಲ್ಲೆಯು ಜಾನಪದ ತವರೂರಾಗಿದ್ದು, ಜಾನಪದ ಜಿಲ್ಲೆಯೆಂದು ವಿಶೇಷ ಸ್ಥಾನ ಪಡೆದಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.ಪಟ್ಟಣದ ಆದಿವಾಸಿ ಸಾಂಸ್ಕೃತಿಕ ಭವನದಲ್ಲಿ ಗುಂಡ್ಲುಪೇಟೆ ಕ್ರಿಯಾ ಫೌಂಡೇಶನ್, ರಾಜ ಬೊಪ್ಪೇಗೌಡನಪುರ ಧರೆಗೆ ದೊಡ್ಡವರ ಸಂಸ್ಥಾನ ಮಠ, ಮದ್ದೂರು ಕಾಲೋನಿಯ ಸಾಯಿ ಗಿರಿಜನ ಫೌಂಡೇಶನ್ ಸಹಯೋಗದಲ್ಲಿ ಎಸ್.ಕಾಳಿಂಗಸ್ವಾಮಿ ಸಿದ್ಧಾರ್ಥ ಜನಪರ ಅಕಾಡೆಮಿ ಫೆಲೋಷಿಫ್ ಗ್ರಂಥವಾದ ನೀಲಗಾರರ ಪದಗಳಲ್ಲಿ ಸಾಮಾಜಿಕತೆ, ಡಾ.ಎಸ್.ರತ್ನಮ್ಮ ಜನಪದ ಅಕಾಡೆಮಿ ಫೆಲೋಷಿಫ್ ಗ್ರಂಥವಾದ ಸೋಲಿಗರ ಆಚರಣೆ ಜಗತ್ತು ಪುಸ್ತಕ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ತಂತ್ರಜ್ಞಾನಕ್ಕೆ ಮಾರು ಹೋಗುವ ಸಮಯದಲ್ಲಿ ಜಾನಪದವಿದೆ. ಜನಪದ ಮುಂದುವರಿಸಿಕೊಂಡು ಬರುತ್ತಿರುವುದು ನಮ್ಮಲ್ಲೆರ ಪುಣ್ಯ. ಕೃತಿ ಬಿಡುಗಡೆ ಸಮಾರಂಭದಲ್ಲಿ ಕೃತಿಯ ಬಗ್ಗೆ ಸಂವಾದ ನಡೆಸುತ್ತಿರುವುದು ವಿಶೇಷವಾಗಿದ್ದು, ಚರ್ಚೆ ಆಗಬೇಕು. ಜನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನನ್ನ ಬೆಂಬಲ ಸದಾ ಇರುತ್ತದೆ ಎಂದರು.
ತಾಲೂಕಿನಲ್ಲಿ ಕಾಡು ಪ್ರಾಣಿಗಳ ಹಾವಳಿಯಿದೆ. ಅರಣ್ಯ ಇಲಾಖೆ ತಡೆಗಟ್ಟುವ ಕೆಲಸ ನಡೆಯುತ್ತಿದೆ. ಆದರೂ ಅರಣ್ಯ ಇಲಾಖೆ ಕಾಡುಪ್ರಾಣಿಗಳು ನಾಡಿಗೆ ಬರದಂತೆ ತಡೆಯುತ್ತಾರೆ ಎಂಬ ನಂಬಿಕೆ ಇದೆ ಎಂದರು. ರಾಜ ಬೊಪ್ಪೇಗೌಡನಪುರ ಧರೆಗೆ ದೊಡ್ಡವರು ಸಂಸ್ಥಾನ ಮಠದ ಭರತ್ ಪ್ರಭುದೇವರಾಜ ಅರಸ್ ಸಾನ್ನಿಧ್ಯ ವಹಿಸಿದ್ದರು. ನೀಲಗಾರರ ಪದಗಳಲ್ಲಿ ಸಾಮಾಜಿಕತೆ ಕತೃ ಎಸ್.ಕಾಳಿಂಗಸ್ವಾಮಿ ಸಿದ್ಧಾರ್ಥ, ಸೋಲಿಗರ ಆಚರಣೆ ಜಗತ್ತು ಕತೃ ಡಾ.ರತ್ನಮ್ಮ ಪ್ರಾಸ್ತಾವಿಕವಾಗಿ ಕೊಳ್ಳೇಗಾಲ ಖಜಾನಾಧಿಕಾರಿ ಹಾಗು ಸಾಹಿತಿ ಪಿ.ನಾಗರತ್ನಮ್ಮ ಅಧ್ಯಕ್ಷತೆ ವಹಿಸಿದ್ದರು.ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಲಕ್ಷ್ಮಮ್ಮ, ರಾಜ್ಯೋತ್ಸವ ಪುರಸ್ಕೃತ ಮಹದೇವ ಶಂಕನಪುರ, ಎಸಿಎಫ್ ಎನ್.ಪಿ.ನವೀನ್ ಕುಮಾರ್, ಗ್ರಾಪಂ ಅಧ್ಯಕ್ಷ ಆರ್.ಡಿ.ಉಲ್ಲಾಸ್, ಯುವ ವಿಜ್ಞಾನಿ ಡಾ.ನವೀನ್ ಮೌರ್ಯ, ಪಿಡಿಒ ಮಲ್ಲಿಕಾರ್ಜುನ, ತಕ್ಷಶಿಲ ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ಸುಭಾಷ್ ಮಾಡ್ರಹಳ್ಳಿ, ಗಡಿನಾಡು ರಕ್ಷಣಾ ಸೇನೆ ಅಧ್ಯಕ್ಷ ಮುನೀರ್ ಪಾಶ, ಪರಿಸರ ಅಭಿವೃದ್ಧಿ ಸಂಘದ ಅಧ್ಯಕ್ಷ ಬಾಬು,ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಆರ್.ಸಿದ್ದರಾಜು ಸೇರಿದಂತೆ ಹಲವರು ಇದ್ದರು.