ಚಾಮರಾಜನಗರ ಅಭಿವೃದ್ಧಿ ಹೊಂದಿದ ಜಿಲ್ಲೆ: ಸಿಇಒ ಮೋನಾರೋತ್

| Published : Sep 06 2025, 01:01 AM IST

ಸಾರಾಂಶ

ಈ ಜಿಲ್ಲೆಯು ಹಿಂದುಳಿದ ಜಿಲ್ಲೆಯಲ್ಲ, ಅಭಿವೃದ್ಧಿ ಹೊಂದಿದ ಜಿಲ್ಲೆಯಾಗಿದೆ ಎಂದು ಜಿಪಂ ಸಿಇಒ ಮೋನಾರೋತ್ ಹೇಳಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಈ ಜಿಲ್ಲೆಯು ಹಿಂದುಳಿದ ಜಿಲ್ಲೆಯಲ್ಲ, ಅಭಿವೃದ್ಧಿ ಹೊಂದಿದ ಜಿಲ್ಲೆಯಾಗಿದೆ ಎಂದು ಜಿಪಂ ಸಿಇಒ ಮೋನಾರೋತ್ ಹೇಳಿದರು.

ತಾಲೂಕಿನ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ 2023-24ನೇ ಸಾಲಿನ ನೇಕಾರರ ಪ್ಯಾಕೇಜ್ ಯೋಜನೆಯ ಎಸ್‌ಸಿಎಸ್‌ಪಿ ರಡಿ ಎಸ್‌ಎಂಇ ಯೋಜನೆಯಡಿ ಸ್ಥಾಪಿಸಲಾದ ಘಟಕ ಶ್ರೀರಂಗನಾಥ ಟ್ರೇಡರ್ಸ್ ಸಿದ್ದ ಉಡುಪು ತಯಾರಿಕಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ತಾಲೂಕಿನ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಯೋಜನೆಯಡಿಯಲ್ಲಿ ಸಿದ್ಧ ಉಡುಪು ತಯಾರಿಕಾ ಘಟಕ ಉದ್ಘಾಟನೆಯಾಗಿದ್ದು, ಸ್ಥಳೀಯವಾಗಿ 120 ಮಂದಿಗೆ ಉದ್ಯೋಗಾವಕಾಶ ದೊರೆಯುತ್ತದೆ. ಎಲ್ಲರೂ ಸ್ಟಿಚ್ಚಿಂಗ್ ಮಾಡುತ್ತಾರೆ. ಬೇರೆ ಬೇರೆ ಕಂಪನಿಗಳೊಂದಿಗೆ ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳಬೇಕು. ಉತ್ಪನ್ನಗಳಿಗೆ ಹೆಚ್ಚು ಅವಕಾಶ ಬಂದರೆ ಅನುಕೂಲವಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಉದ್ಯೋಗಾವಕಾಶಗಳ ಕೊರತೆ ಇದೆ. ಯಾರಾದರು ಬಂದು ಕೇಳುತ್ತಾರೆ ಒಂದು ಕೆಲಸಕೊಡಿ ಎಂದು ಆಗ ಈ ಕೈಗಾರಿಕಾ ಪ್ರದೇಶದಲ್ಲಿ ನಗರದವರಿಗೆ ಅವಕಾಶ ಕೊಟ್ಟರೆ ಜಿಲ್ಲೆಯು ಅಭಿವೃದ್ಧಿ ಆಗುತ್ತದೆ ಎಂದರು.

ಕರ್ನಾಟಕ ದಲಿತ ಎಂಟ‌‌ರ್ಪ್ರೈಸಸ್ ಕಾರ್ಯಾಧ್ಯಕ್ಷ ಸಿ.ಜಿ.ಶ್ರೀನಿವಾಸನ್ ಮಾತನಾಡಿ, 2009ರಲ್ಲಿ ಕೆಐಎಡಿಬಿಯಲ್ಲಿ ನಿವೇಶನ, ಮಳಿಗೆ ಹಂಚಿಕೆಯಲ್ಲಿ ಮೀಸಲಾತಿ ಇರಲಿಲ್ಲ. ಕೆಐಎಡಿಬಿಯಲ್ಲಿ ನಿವೇಶನ, ಮಳಿಗೆ ಹಂಚಿಕೆಯಲ್ಲಿ ಮೀಸಲಾತಿ ಕೊಡಬೇಕು ಎಂದು ರಾಜ್ಯದಲ್ಲಿ ಧ್ವನಿ ಎತ್ತಿದ್ದು, ಕರ್ನಾಟಕ ದಲಿತ ಉದ್ಯಮಿದಾರ ಸಂಘ, 2009ರಲ್ಲಿ ದಲಿತರಿಗೆ ನಿವೇಶನ, ಮಳಿಗೆಯಲ್ಲಿ ಮೀಸಲಾತಿ ಜಾರಿಗೆ ಬಂದ ಮೇಲೆ ಶೇ. 1ರಷ್ಟು ಇದ್ದದ್ದು, ಶೇ. 17 ರಷ್ಟು ಉದ್ಯಮಿದಾರರಾಗಿದ್ದಾರೆ ಇದು ನಮ್ಮ ಸಂಘದ ಕೊಡುಗೆ ಯಾಗಿದೆ ಎಂದರು.

ರಾಜ್ಯದಲ್ಲಿ ಭೂಮಿ, ಶೆಡ್ ತೆಗೆದುಕೊಂಡರೆ ಶೇ. 85 ರಷ್ಟು ಸಬ್ಸಿಡಿ ಕೊಡುತ್ತಾರೆ. ಮಾರ್ಜಿನ್ ಮನಿ ಹೊಂದಿಸಲಾಗದವರಿಗೆ ₹75 ಲಕ್ಷದವರೆಗೂ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಸಿಗುತ್ತದೆ. ಕರ್ನಾಟಕ ರಾಜ್ಯ ಹಣಕಾಸು ನಿಗಮದಿಂದ ಯಿಂದ 10 ಕೋಟಿರು. ತನಕ ಶೇ. 4ರಷ್ಟು ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆಯಬಹುದಾಗಿದೆ ಎಂದರು.

ರಾಜ್ಯದಲ್ಲಿ ಶೇ.1ರಷ್ಟು ಇದ್ದ ಎಸ್‌ಸಿಎಸ್‌ಟಿ ಉದ್ಯಮಿಗಳು ಇಂದು ಎಲ್ಲ ಯೋಜನೆಗಳನ್ನು ಉಪಯೋಗ ಮಾಡಿಕೊಂಡು ರಾಜ್ಯದಲ್ಲಿ 6933 ಮಂದಿ ಕೋಟ್ಯಾಧಿಪತಿಗಳಾಗಿದ್ದಾರೆ. ಇಡೀ ರಾಷ್ಟ್ರದಲ್ಲಿ ಯಾವ ರಾಜ್ಯದಲ್ಲೂ ಕರ್ನಾಟಕದಲ್ಲಿರುವ ಯೋಜನೆಗಳು ಎಲ್ಲಿಯೂ ಇಲ್ಲ ಆಗಾಗಿ ದಲಿತರು ಉದ್ಯಮಿದಾರರಾಗಿ ಆರ್ಥಿಕವಾಗಿ ಸಬಲರಾಗಬೇಕು. ಎಲ್ಲರಂತೆ ನಾವು. ಬೆಳೆಯುತ್ತೇವೆ. ಶ್ರೀರಂಗನಾಥ ಟ್ರೇಡರ್ ಸಿದ್ಧ ಉಡುಪು ತಯಾರಿಕಾ ಘಟಕ ಯಶಸ್ವಿಯಾಗಲಿ. ಎಂದು ಆಶಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಎಚ್. ಶಿವಶಂಕರ್, ಕೈಮಗ್ಗ ಮತ್ತು ಜವಳಿ ಇಲಾಖೆ ಜವಳಿ ಪ್ರವರ್ಧನಾಧಿಕಾರಿ ಕೆ.ಸಿ.ಲಕ್ಷ್ಮೀ ಪತಿ, ಮೈಸೂರು ಎಸ್ ಸಿ, ಎಸ್‌ಟಿ ಕೈಗಾರಿಕ ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ವಿಜಯಶಂಕರ್, ಚಾಮರಾಜನಗರ ಜಿಲ್ಲಾ ಎಸ್ ಸಿ ಎಸ್ ಟಿ ಕೈಗಾರಿಕಾ ಸಂಘದ ಜಿಲ್ಲಾ ಸಂಯೋಜಕ ಎನ್.

ಎನ್ ನಾಗಯ್ಯ, ಶ್ರೀರಂಗನಾಥ ಟ್ರೇಡರ್ಸ್ ಮಾಲೀಕರಾದ ಪಾಪಮ್ಮ, ಶ್ರೀನಿವಾಸದಾಸ್, ನಗರಸಭಾ ಸದಸ್ಯ ಎಂ.ಮಹೇಶ್‌, ಪರ್ವತರಾಜು, ಗ್ರಾ.ಪಂ.ಅಧ್ಯಕ್ಷ ಬಾಲರಾಜು, ಕುಮಾರಸ್ವಾಮಿ, ಪಣ್ಯದಹುಂಡಿ ರಾಜು ಇದ್ದರು.