ಚಾಮರಾಜನಗರ ಲೋಕಸಭೆ ಚುನಾವಣೇಲಿ ಗೆಲುವು ನಮ್ಮದೆ

| Published : May 23 2024, 01:06 AM IST

ಸಾರಾಂಶ

ಚಾಮರಾಜನಗರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಜೊತೆಗೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಎರಡಂಕಿ ದಾಟುವ ಮೂಲಕ ಹೆಚ್ಚಿನ ಸ್ಥಾನಗಳಿಸಲಿದೆ. ಈ ಬಗ್ಗೆ ಮತದಾರರಿಂದಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈಗಗಾಲೇ ಮತದಾನವಾಗಿದ್ದು ಎಣಿಕೆ ಪ್ರಕ್ರಿಯೆ ಮಾತ್ರ ಬಾಕಿ ಇದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಚಾಮರಾಜನಗರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಜೊತೆಗೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಎರಡಂಕಿ ದಾಟುವ ಮೂಲಕ ಹೆಚ್ಚಿನ ಸ್ಥಾನಗಳಿಸಲಿದೆ. ಈ ಬಗ್ಗೆ ಮತದಾರರಿಂದಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈಗಗಾಲೇ ಮತದಾನವಾಗಿದ್ದು ಎಣಿಕೆ ಪ್ರಕ್ರಿಯೆ ಮಾತ್ರ ಬಾಕಿ ಇದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.ಪಟ್ಟಣದಲ್ಲಿ ವಾಸವಿ ಜಯಂತಿ ಹಿನ್ನೆಲೆ ಕನ್ನಿಕಾ ಪರಮೇಶ್ವರಿ ದೇಗುಲಕ್ಕೆ ಭೇಟಿ ನೀಡಿ, ಆರ್ಯ ವೈಶ್ಯ ಸಮಾಜ ಇತ್ತೀಚೆಗೆ

ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮಾಡಿದ ಉಪಕಾರಣವನ್ನು ನಾನು ಎಂದೆಂದಿಗೂ ಮರೆತಿಲ್ಲ. ಮರೆಯುವ ವ್ಯಕ್ತಿತ್ವವೂ ನನ್ನದಲ್ಲ. 19ವರ್ಷಗಳ ನಂತರ ನನಗೆ ಜನಸೇವೆ ಮಾಡುವ ಅವಕಾಶ ಸಿಕ್ಕಿದೆ.

1 ಮತದ ಸೋಲು ಇತಿಹಾಸ, 1ಲಕ್ಷಕ್ಕೂ ಅಧಿಕ ಮತದಲ್ಲಿ ಗೆದ್ದದ್ದು ಇತಿಹಾಸ, ರಾಜ್ಯದಲ್ಲೆ ಅತ್ಯಧಿಕ ಮತಗಳಿಂದ ಗೆದ್ದ ಐದನೇ ಶಾಸಕ ನಾನು. ನಾನು ಶಾಸಕನಾಗಿದ್ದರೂ ಶಾಸಕನೆಂಬ ಉದ್ಧಟತನ ತೋರಿಲ್ಲ. ಜನ ಸೇವಕನಾಗಿಯೇ ಕಾರ್ಯನಿರ್ವಹಿಸುವೆ, ಜನ ಸೇವೆ ನನ್ನ ಗುರಿಯಾಗಿದೆ ಎಂದರು. ಕನ್ನಿಕಾ ಪರಮೇಶ್ವರಿ ದೇವಿ ಆಶೀರ್ವಾದ ನನಗೆ ಇಂದು ಸಿಕ್ಕಿದ್ದು ಇದು ನನ್ನ ಪುಣ್ಯ. ನನಗೆ ಹೆಚ್ಚಿನ ಅವಕಾಶ, ಅಧಿಕಾರ ಸಿಕ್ಕರೆ ಇನ್ನು ಜನಸೇವೆಗೆ ಸಾಧ್ಯವಾಗಲಿದೆ ಎಂದರು. ಈ ಸಂದರ್ಭದಲ್ಲಿ ಆರ್ಯವೈಶ್ಯ ಸಂಘ ಅಧ್ಯಕ್ಷ ಎ.ಡಿ.ಕುಮಾರಕೃಷ್ಣ, ಉಪಾಧ್ಯಕ್ಷ ಸತ್ಯನಾರಾಯಣ್, ವಾಸವಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಪಿ.ಜಿ.ಶ್ರೀಧರ್, ನಾಗಮಾಣಿಕ್ಯ ಶೆಟ್ಟಿ, ನಗರಸಭೆ ಸದಸ್ಯ ಶಂಕರ ನಾರಾಯಣಗುಪ್ತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಕಾರ್ಯದರ್ಶಿ ಬಸ್ತೀಪುರ ರವಿ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರು ಇನ್ನಿತರರಿದ್ದರು.