ಚಾಮರಾಜನಗರ ವಿವಿ: ಚಂದನಾಗೆ 5 ಚಿನ್ನದ ಪದಕ

| Published : Feb 28 2024, 02:37 AM IST

ಸಾರಾಂಶ

ಮೈಸೂರು ವಿಶ್ವವಿದ್ಯಾನಿಲಯದ 2022-23ನೇ ಸಾಲಿನ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಫಲಿತಾಂಶ ಪ್ರಕಟವಾಗಿದ್ದು, ಚಾಮರಾಜನಗರ ವಿವಿಯ ( ಡಾ. ಬಿ.ಆರ್‌. ಅಂಬೇಡ್ಕರ್‌ ಕೇಂದ್ರ) ಕನ್ನಡ ವಿಭಾಗಕ್ಕೆ ಆರು ಚಿನ್ನದ ಪದಕಗಳು ಬಂದಿವೆ. ಜಿ. ಚಂದನಾ ಐದು ಚಿನ್ನದ ಪದಕಗಳನ್ನು ಗಳಿಸಿದರೆ, ಎ. ಮಣಿಕಂಠ ಎಂಬುವರು ಒಂದು ಚಿನ್ನದ ಪದಕ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮೈಸೂರು ವಿಶ್ವವಿದ್ಯಾನಿಲಯದ 2022-23ನೇ ಸಾಲಿನ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಫಲಿತಾಂಶ ಪ್ರಕಟವಾಗಿದ್ದು, ಚಾಮರಾಜನಗರ ವಿವಿಯ ( ಡಾ. ಬಿ.ಆರ್‌. ಅಂಬೇಡ್ಕರ್‌ ಕೇಂದ್ರ) ಕನ್ನಡ ವಿಭಾಗಕ್ಕೆ ಆರು ಚಿನ್ನದ ಪದಕಗಳು ಬಂದಿವೆ. ಜಿ. ಚಂದನಾ ಐದು ಚಿನ್ನದ ಪದಕಗಳನ್ನು ಗಳಿಸಿದರೆ, ಎ. ಮಣಿಕಂಠ ಎಂಬುವರು ಒಂದು ಚಿನ್ನದ ಪದಕ ಪಡೆದಿದ್ದಾರೆ.

ಕೇಂದ್ರದ ಎಂಬಿಎ ವಿಭಾಗದ ನಿದಾಫಾತಿಮಾ 6ನೇ ರ್‍ಯಾಂಕ್‌ ಮತ್ತು ಶ್ರುತಿ 8ನೇ ರ್‍ಯಾಂಕ್‌ ಗಳಿಸಿದ್ದಾರೆ. ಎಂಬಿಎ ವಿಭಾಗದಲ್ಲಿ ರ್‍ಯಾಂಕ್‌ ಬರುತ್ತಿರುವುದು ಇದೇ ಮೊದಲು.

ತಾಲೂಕಿನ ಬದನಗುಪ್ಪೆ ಗ್ರಾಮದ ರೈತ ಗುರುಸ್ವಾಮಿ ಹಾಗೂ ಶೋಭಾ ಅವರ ಪುತ್ರಿ ಜಿ. ಚಂದನಾ ಪ್ರೊ.ಎ.ಆರ್‌. ಕೃಷ್ಣಶಾಸ್ತ್ರಿ, ಎಫ್‌.ಎಂ. ಖಾನ್‌, ಡಾ. ಪು.ತಿ. ನರಸಿಂಹಚಾರ್‌, ಜಯಲಕ್ಷ್ಮಿ ಎಚ್‌. ಶ್ರೀನಿವಾಸಯ್ಯ, ಅಸ್ದಾನ ವಿದ್ವಾನ್‌ ಎಂ.ಇ. ನಂಜುಂಡಆರಾಧ್ಯ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಸದ್ಯ ಅವರು ಮೈಸೂರಿನಲ್ಲಿ ಬಿ.ಇಡಿ ಶಿಕ್ಷಣ ಪಡೆಯುತ್ತಿದ್ದಾರೆ.ಗುಂಡ್ಲುಪೇಟೆ ತಾಲೂಕಿನ ಅಣ್ಣೂರು ಕೇರಿ ರೈತ ಮಹದೇವಶೆಟ್ಟಿ ಹಾಗೂ ರಾಜಮ್ಮ ದಂಪತಿ ಮಗ ಎಂ. ಮಣಿಕಂಠ ಕುಪ್ಪಳ್ಳಿ ಸೀತಮ್ಮ ವೆಂಕಟಪ್ಪ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಮಾರ್ಚ್‌.3ರಂದು ನಡೆಯಲಿರುವ ಮೈಸೂರು ವಿವಿ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪ್ರಧಾನ ನಡೆಯಲಿದೆ.

ಐದು ಚಿನ್ನದ ಪದಕ ಲಭಿಸಿರುವುದು ಖುಷಿ ತಂದಿದೆ. ಪ್ರಾಧ್ಯಾಪಕರ ಮಾರ್ಗದರ್ಶನದಿಂದ ಇದು ಸಾಧ್ಯವಾಗಿದೆ. ಮುಂದೆ ಮತ್ತಷ್ಟು ಸಾಧನೆ ಮಾಡ ಲು ಸ್ಫೂರ್ತಿ ಸಿಕ್ಕಿದಂತಾಗಿದೆ. ಸದ್ಯ ಬಿ.ಇಡಿ ಮಾಡುತ್ತಿದ್ದು, ಮುಂದೆ ಕೆಎಎಸ್ ಅಧಿಕಾರಿಯಾಗುವ ಆಸೆ ಇದೆ. ಜಿ. ಚಂದನಾ, ಐದು ಚಿನ್ನದ ಪದಕ ವಿಜೇತೆ.

.ವಿಮರ್ಶೆ ನನ್ನ ನೆಚ್ಚಿನ ವಿಚಾರ. ಅರದಲ್ಲಿಯೇ ನನಗೆ ಚಿನ್ನದ ಪದಕ ಸಿಕ್ಕಿರುವುದು ಸಂತಸ ಉಂಟು ಮಾಡಿದೆ.ವೃತ್ತಿಯ ಹುಡುಕಾಟದಲ್ಲಿದ್ದೇನೆ. ಊರಿನಲ್ಲಿ ಕೃಷಿ ಮಾಡಿಕೊಂಡು. ಶಿಕ್ಷಕರ ನೇಮಕಾತಿಗಾಗಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಜಿ. ಮಣಿಕಂಠ, ಚಿನ್ನದ ಪದಕ ವಿಜೇತ.

ಕೋಟ್‌....ಚಾಮರಾಜನಗರ ವಿವಿಯ ಭೋಧಕರ ಶ್ರಮ ಮತ್ತು ವಿದ್ಯಾರ್ಥಿಗಳ ಶ್ರಮದಿಂದಾಗಿ ನಮ್ಮ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಲಭಿಸಿದೆ. ಇದಕ್ಕಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸುವೆ. ಪ್ರೊ.ಎಂ.ಆರ್‌. ಗಂಗಾಧರ್‌, ಕುಲಪತಿ, ಚಾಮರಾಜನಗರ ವಿವಿ.ಕನ್ನಡ ವಿಭಾಗ ಆರಂಭವಾದಾಗಿನಿಂದ ಇಲ್ಲಿನವರೆವಿಗೂ ಚಿನ್ನದ ಪದಕಗಳನ್ನು ನಮ್ಮ ವಿದ್ಯಾರ್ಥಿಗಳು ನಿರಂತರವಾಗಿ ಪಡೆಯುತ್ತಾ ಬಂದಿರುವುದು ನಮಗೆ ಬಹಳ ಸಂತಸ ತಂದಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭವಾಗಲಿ.ಬಸವಣ್ಣ ಎಸ್ ಮೂಕಹಳ್ಳಿ, ಕನ್ನಡ ವಿಭಾಗದ ಮುಖ್ಯಸ್ಥ