ನಗರದ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಸಂಸ್ಥೆಯ ವಾರ್ಷಿಕ ಸರ್ವ ಸಾಧಾರಣ ಸಭೆ ಹಾಗೂ ಸಂಸ್ಥಾಪಕ ಶಾ. ಕುಶಲದಾಸ ಮೆಹತಾ ಅವರ ದಿನಾಚರಣೆ ಇತ್ತೀಚೆಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಗದಗ

ನಗರದ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಸಂಸ್ಥೆಯ ವಾರ್ಷಿಕ ಸರ್ವ ಸಾಧಾರಣ ಸಭೆ ಹಾಗೂ ಸಂಸ್ಥಾಪಕ ಶಾ. ಕುಶಲದಾಸ ಮೆಹತಾ ಅವರ ದಿನಾಚರಣೆ ಇತ್ತೀಚೆಗೆ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಸಂಗಪ್ಪ ಗುಡಿಮನಿ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ಮಾಜಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಹಕಾರದೊಂದಿಗೆ ಉದ್ಯೋಗ ಮೇಳ, ದತ್ತಿ ಉಪನ್ಯಾಸ, ಜಿಎಸ್‌ಟಿ ಕುರಿತ ಕಾರ್ಯಕ್ರಮ ಸೇರಿದಂತೆ ಹಲವು ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಎಪಿಎಂಸಿ ಖರೀದಿದಾರರು, ವರ್ತಕರು, ದಲಾಲರು ಹಾಗೂ ವ್ಯಾಪಾರಸ್ಥರು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಸರ್ಕಾರದ ಗಮನ ಸೆಳೆದು ಪರಿಹಾರ ಒದಗಿಸಲು ಸಂಸ್ಥೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದೆ ಎಂದು ತಿಳಿಸಿದರು.

ಮಾಜಿ ಅಧ್ಯಕ್ಷ ಚಂದ್ರು ಬಾಳಿಹಳ್ಳಿಮಠ ಮಾತನಾಡಿ, 1975ರಲ್ಲಿ ಶಾ. ಕುಶಲದಾಸ ಮೆಹತಾ ಹಾಗೂ ದಿ. ವಿ.ಆರ್.ಮಾಳೇಕೊಪ್ಪಮಠ ಅವರ ಮುಂದಾಳತ್ವದಲ್ಲಿ ಆರಂಭವಾದ ಸಂಸ್ಥೆ ಐದು ದಶಕಗಳಿಗೂ ಹೆಚ್ಚು ಕಾಲ ವ್ಯಾಪಾರ, ಕೈಗಾರಿಕೆ ಹಾಗೂ ಗುಡಿ ಕೈಗಾರಿಕೆಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದೆ ಎಂದರು.

ಸಭೆಯಲ್ಲಿ 2025-26ನೇ ಸಾಲಿನ ವಾರ್ಷಿಕ ವರದಿ, ಕಾರ್ಯವರದಿ ಹಾಗೂ ಲೆಕ್ಕಪತ್ರ ಮಂಡಿಸಿ ಅನುಮೋದಿಸಲಾಯಿತು. ಆನಂದ ಎಲ್. ಪೊತ್ನೀಸ್ ಅವರನ್ನು 2026-27ನೇ ಸಾಲಿನ ಲೆಕ್ಕಪರಿಶೋಧಕರಾಗಿ ನೇಮಕ ಮಾಡಲು ಸಭೆ ಒಪ್ಪಿಗೆ ನೀಡಿತು.

ಮುಂದಿನ ಮೂರು ವರ್ಷಗಳ ಆಡಳಿತ ಮಂಡಳಿಗೆ ಮುರುಗೇಶ ಬಡ್ನಿ, ದಾನಯ್ಯ ವೀರಯ್ಯ ಗಣಾಚಾರಿ, ವಿ.ಎಸ್. ಕೂಗು, ಅರವಿಂದ ಎಸ್.ಕಾಮತ, ಜಿ.ಕೆ. ಆದಪ್ಪಗೌಡ, ಅರವಿಂದ ಪಟೇಲ್, ಪ್ರಕಾಶ ಉಗಲಾಟದ, ವಿ.ಎಸ್. ದೇಸಾಯಿಗೌಡ್ರ, ಅಶೋಕ ಕೆ.ಪಾಟೀಲ, ರಾಘವೇಂದ್ರ ಕಾಲವಾಡ, ರಾಜಣ್ಣ ಬಿ.ಮಲ್ಲಾಡದ ಪುನರಾಯ್ಕೆಯಾದರು.

ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪಗೌಡ ಸೇರಿ ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು ಇದ್ದರು.