ಸಾರಾಂಶ
ಸುಮಾರು ೨೭೮ ಭಕ್ತರು ಸ್ವಯಂಪ್ರೇರಿತರಾಗಿ ಸೇವೆ ನೆರವೇರಿಸಿದರು. ೧೬೨ ಪುರುಷರು, ೧೦೨ ಮಹಿಳೆಯರು, ೧೪ ಮಕ್ಕಳು ಸೇವೆ ಸಲ್ಲಿಸಿದರು.
ಸುಬ್ರಹಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ದಿನವಾದ ಶನಿವಾರ ೨೭೮ ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು. ಗೋವು ಸೇವಿಸಿದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸುವ ಮೂಲಕ ಚಂಪಾಷಷ್ಠಿಯ ಜಾತ್ರೋತ್ಸವದ ದಿನದಂದು ಎಡೆಸ್ನಾನ ಹರಕೆ ಸೇವೆ ಸಲ್ಲಿಸಿದರು. ಸುಮಾರು ೨೭೮ ಭಕ್ತರು ಸ್ವಯಂಪ್ರೇರಿತರಾಗಿ ಸೇವೆ ನೆರವೇರಿಸಿದರು. ೧೬೨ ಪುರುಷರು, ೧೦೨ ಮಹಿಳೆಯರು, ೧೪ ಮಕ್ಕಳು ಸೇವೆ ಸಲ್ಲಿಸಿದರು.