ಬಿಜೆಪಿ ಮಂಡಲದಿಂದ ಹರ್‌ ಗರ್‌ ತಿರಂಗಾ ಯಾತ್ರೆ

| Published : Aug 14 2025, 02:09 AM IST

ಸಾರಾಂಶ

ಚಾಮುಂಡೇಶ್ವರಿ ಮಂಡಲದ ಅಧ್ಯಕ್ಷ ಟಿ. ರವಿ ಅವರ ನೇತೃತ್ವದಲ್ಲಿ ಜಯಪುರದಿಂದ ಕಡಕೊಳ ಮಾರ್ಗವಾಗಿ ಕೆಲ್ಲಹಳ್ಳಿ ಮುಖಾಂತರ ಉದ್ಬೂರು ಗ್ರಾಮದಲ್ಲಿ ಯಾತ್ರೆಯು ಕೊನೆಗೊಂಡಿತು

ಕನ್ನಡಪ್ರಭ ವಾರ್ತೆ ಮೈಸೂರು79ನೇ ಸ್ವಾತಂತ್ರ್ಯೊತ್ಸವದ ಅಂಗವಾಗಿ ಚಾಮುಂಡೇಶ್ವರಿ ಗ್ರಾಮಾಂತರ ಬಿಜೆಪಿ ಮಂಡಲದ ವತಿಯಿಂದ ಜಯಪುರ ಮಹಾಶಕ್ತಿ ಕೇಂದ್ರದಲ್ಲಿ ಹರ್ ಗರ್ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು.ಹರ್ ಗರ್ ತಿರಂಗಾ ಯಾತ್ರೆಗೆ ಮೈಸೂರು ನಗರ ಮಂಡಲ ಬಿಜೆಪಿ ಅಧ್ಯಕ್ಷ ಎಲ್. ನಾಗೇಂದ್ರ ಚಾಲನೆ ನೀಡಿದರು.ಚಾಮುಂಡೇಶ್ವರಿ ಮಂಡಲದ ಅಧ್ಯಕ್ಷ ಟಿ. ರವಿ ಅವರ ನೇತೃತ್ವದಲ್ಲಿ ಜಯಪುರದಿಂದ ಕಡಕೊಳ ಮಾರ್ಗವಾಗಿ ಕೆಲ್ಲಹಳ್ಳಿ ಮುಖಾಂತರ ಉದ್ಬೂರು ಗ್ರಾಮದಲ್ಲಿ ಯಾತ್ರೆಯು ಕೊನೆಗೊಂಡಿತು.ಯುವ ಮೋರ್ಚಾ ಕಾರ್ಯಕರ್ತರರು ಮಂಡಲದ ಜವಾಬ್ದಾರಿ ನಾಯಕರು ಮುಖಂಡರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರುಯುವ ಮೋರ್ಚಾ ಜಿಲ್ಲಾದ್ಯಕ್ಷ ರಾಕೇಶ್ ಗೌಡ, ಜಿಲ್ಲಾ ಕಾರ್ಯದರ್ಶಿ ಮೋನಿಕಾ ಮಂಡಲ ಪ್ರದಾನ ಕಾರ್ಯದರ್ಶಿ ಗಳಾದ ಹೇಮಂತ್ ಕುಮಾರ್, ಅಪ್ಪಾಜಿಗೌಡ, ಶಿವಕುಮಾರ್, ಯುವ ಮೊರ್ಚಾ ಅಧ್ಯಕ್ಷಮೋಹನ್ ಕುಮಾರ್, ಮಾಜಿ ಅಧ್ಯಕ್ಷ ಮಹೇಶ್, ಗೋಪಾಲ್‌ ರಾವ್, ಹಿನಕಲ್ ಶ್ರೀನೀವಾಸ್, ರಾಜಕುಮಾರ್, ಈರಪ್ಪ, ಯುವ ಮೋರ್ಚಾ ಮಾಜಿ ಅಧ್ಯಕ್ಷ ದಾರಿಪುರ ಡಿ. ಚಂದ್ರಶೇಖರ್, ಚೇತನ್ ಕುಮಾರ್, ಕಿರಣ್ ನಾಯ್ಢು, ರೇವಣ್ಣ,ಶ್ರೀನೀವಾಸ್, ನಾರಾಯಣಚಾರ್, ಸುನಿಲ್ ಕುಮಾರ್, ಶಿವಕುಮಾರ್,ಪರಶಿವಮೂರ್ತಿ, ಲೋಹಿತ್, ಸಚಿನ್, ರಾಜು, ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಗಿರೀಶ್, ಮಹೇಶ್ ಇದ್ದರು.-----------------