ಸಾರಾಂಶ
ರಾಜ್ಯದಲ್ಲಿ ಮಳೆ ಕೊರತೆಯಿಂದ ತೀವ್ರ ಬರಗಾಲ ಎದುರಾಗಿದೆ, ಪ್ರಭು ಶ್ರೀ ರಾಮನ ಕೃಪೆಯಿಂದ ಉತ್ತಮ ಮಳೆಯಾಗಿ ಬರಗಾಲ ದೂರಮಾಡಲಿ, ಬಿಸಿಲಿನ ತಾಪಮಾನದಿಂದ ಜನಸಾಮಾನ್ಯರು ದಿನ ಪರದಾಡುತ್ತಿದ್ದು, ಆದಷ್ಟು ಬೇಗ ನಿವಾರಣೆಯಾಗಲಿ
ಕನ್ನಡಪ್ರಭ ವಾರ್ತೆ ಮೈಸೂರು
ಬಸವ ಬಳಗ ಚಾಮುಂಡಿಪುರಂ ಸಂಘದ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿ ಬುಧವಾರ ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ಶ್ರೀ ರಾಮನ ಭಾವಚಿತ್ರಕ್ಕೆ ಮಡಿವಾಳಸ್ವಾಮಿ ಮಠದ ಅಡವಿ ಸ್ವಾಮೀಜಿ ಅವರು ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ನಂತರ ಮಜ್ಜಿಗೆ ಮತ್ತು ಪಾನಕ ವಿತರಣೆ ಮಾಡಲಾಯಿತು.ಅಧ್ಯಕ್ಷ ಸಿ. ಸಂದೀಪ್ ಮಾತನಾಡಿ, ರಾಜ್ಯದಲ್ಲಿ ಮಳೆ ಕೊರತೆಯಿಂದ ತೀವ್ರ ಬರಗಾಲ ಎದುರಾಗಿದೆ, ಪ್ರಭು ಶ್ರೀ ರಾಮನ ಕೃಪೆಯಿಂದ ಉತ್ತಮ ಮಳೆಯಾಗಿ ಬರಗಾಲ ದೂರಮಾಡಲಿ, ಬಿಸಿಲಿನ ತಾಪಮಾನದಿಂದ ಜನಸಾಮಾನ್ಯರು ದಿನ ಪರದಾಡುತ್ತಿದ್ದು, ಆದಷ್ಟು ಬೇಗ ನಿವಾರಣೆಯಾಗಲಿ ಎಂದು ತಿಳಿಸಿದರು.
ಈ ಶ್ರೀ ರಾಮನವಮಿ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸಿ. ಸಂದೀಪ್, ಉಪಾಧ್ಯಕ್ಷ ಎಂ. ಬಸವರಾಜು, ಖಜಾಂಜಿ ವಿ. ಬಸವರಾಜು, ಸಹ ಕಾರ್ಯದರ್ಶಿ ಮಹದೇವಪ್ಪ, ನಿರ್ದೇಶಕರಾದ ಬಸವರಾಜು, ಮಂಜುನಾಥ್, ಸೋಮೇಶ್ ಮುಖಂಡರಾದ ಮೋಹನ್, ಮಹೇಶ್, ಸುರೇಶ್ ರಾಜೇಂದ್ರ, ವಿಜಯ್ ಕುಮಾರ್, ಮಹೇಶ್ ಅರಸ್, ಗುರುಮಲ್ಲಪ್ಪ, ನಾಗರಾಜ್, ತಿಪ್ಪೇಶ್, ಸುರೇಂದರ್, ಕುಶಲ್, ಪವನ್, ಧನುಷ್ ಇದ್ದರು.