ಸಾರಾಂಶ
ಶ್ರೀ ಮುತ್ತಪ್ಪ ಭಗವತಿ ದೇವಾಲಯದಲ್ಲಿ ಚಂಡಿಕಾ ಹೋಮ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡರು.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಇಲ್ಲಿನ ಶ್ರೀ ಮುತ್ತಪ್ಪ ಭಗವತಿ ದೇವಾಲಯದಲ್ಲಿ ಚಂಡಿಕಾ ಹೋಮ ಶ್ರದ್ಧಾ ಭಕ್ತಿಯಿಂದ ನಡೆಯಿತು.ದೇವಾಲಯದ ವಾರ್ಷಿಕೋತ್ಸವ ಪ್ರಯುಕ್ತ 5 ದಿನಗಳ ಕಾಲ ನಡೆಯುವ ವಿವಿಧ ಪೂಜಾ ಕೈಂಕರ್ಯಗಳ ಭಾಗವಾಗಿ ಶನಿವಾರ ದುರ್ಗಾ ದೇವಿಗೆ ಚಂಡಿಕಾ ಹೋಮ ನಡೆಸಲಾಯಿತು. ಸಿದ್ದಾಪುರ ಸುತ್ತಮುತ್ತಲಿನ ಭಾಗಗಳಿಂದ ಸಾವಿರಾರು ಭಕ್ತರು ಚಂಡಿಕಾ ಹೋಮದಲ್ಲಿ ಪಾಲ್ಗೊಂಡು ತಮ್ಮ ಹರಕೆಗಳನ್ನು ನೆರವೇರಿಸಿದರು. ಚಂಡಿಕಾ ಹೋಮದ ನಂತರ ಮಹಾ ಮಂಗಳಾರತಿ ನಡೆದು ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು. ದೇವಾಲಯದ ವಾರ್ಷಿಕೋತ್ಸವದ ಭಾಗವಾಗಿ ಮಾ. 2 ರ ಭಾನುವಾರದಂದು ಆಶ್ಲೇಷ ಬಲಿಪೂಜೆ ನಡೆಯಲಿದೆ.
ಈ ಸಂಧರ್ಭ ದೇವಾಲಯದ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಕಾರ್ಯದರ್ಶಿ ಸಿಜು , ಆಡಳಿತ ಮಂಡಳಿ ನಿರ್ದೇಶಕರಾದ ಅನಿಲ್ ಕುಮಾರ್, ಸುಬ್ರಮಣಿ, ರಾಜೀವ್, ಶ್ರೀಧರ್ ಸೇರಿದಂತೆ ಸಮಿತಿ ಸದಸ್ಯರು ಇದ್ದು ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡರು.