ಸಾರಾಂಶ
ಚಂಡಿಕಾ ಪಾರಾಯಣ, ಹವನ, ಕುಂಕುಮಾರ್ಚನೆ, ಮಂಗಳಾರತಿ, ಬಲಿ, ಮಂತ್ರಾಕ್ಷತೆ, ಬ್ರಾಹ್ಮಣ ಸಂತರ್ಪಣೆ, ಸುವಾಸಿನಿಯರಿಗೆ ಉಡಿ ತುಂಬುವ ಕಾರ್ಯಕ್ರಮಗಳು ಜರುಗಿದವು.
ಉಡುಪಿ: ಕಲ್ಯಾಣಪುರ ವೆಂಕಟರಮಣ ದೇವಳದಲ್ಲಿ ವರ್ಷಂಪ್ರತಿ ವತಿಯಿಂದ ಜರಗುವ ಚಂಡಿಕಾಯಾಗವು ಸಂಪನ್ನಗೊಂಡಿತು.ಕೆ. ಗೋವಿಂದರಾಯ ಬಾಳಿಗೆ ಕುಟುಂಬಸ್ಥರು ಸೇವಾದಾರರಾಗಿದ್ದು, ಮೊಕ್ತೇಸರರಾದ ಕೆ. ರಾಜಾರಾಮ ನಾಯಕ್, ಅರವಿಂದ ಬಾಳಿಗಾ ಮತ್ತು ಸಂದೇಶ್ ಭಟ್ ಉಪಸ್ಥಿತರಿದ್ದರು.
ಕೆ. ಗಣಪತಿ ಭಟ್ ಮಾರ್ಗದರ್ಶನದಲ್ಲಿ ಜಯದೇವ ಭಟ್, ಕೆ. ದಯಾನಂದ್ ಭಟ್, ಕೆ. ಸಾತ್ವಿಕ್, ಸಂದೇಶ್ ಭಟ್, ಕೆ. ಅಮೋಘ ಜಯದೇವ ಭಟ್, ಪ್ರಭಾಕರ ಭಟ್ ಇತರ ವೈದಿಕರು ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು.ಚಂಡಿಕಾ ಪಾರಾಯಣ, ಹವನ, ಕುಂಕುಮಾರ್ಚನೆ, ಮಂಗಳಾರತಿ, ಬಲಿ, ಮಂತ್ರಾಕ್ಷತೆ, ಬ್ರಾಹ್ಮಣ ಸಂತರ್ಪಣೆ, ಸುವಾಸಿನಿಯರಿಗೆ ಉಡಿ ತುಂಬುವ ಕಾರ್ಯಕ್ರಮಗಳು ಜರುಗಿದವು.ಹವನ ಕಾರ್ಯಕ್ರಮವು ಕೆ. ರಾಮದಾಸ ಬಾಳಿಗಾ ದಂಪತಿ ಹಾಗೂ ಕೆ. ಕಿರಣ ಬಾಳಿಗಾ ದಂಪತಿ ಉಪಸ್ಥಿತಿಯಲ್ಲಿ ಜರುಗಿತು.ಬಾಳಿಗಾ ಕುಟುಂಬದ ಯು. ಅಶೋಕ ಬಾಳಿಗಾ ದಂಪತಿ, ಅರವಿಂದ ಬಾಳಿಗಾ ದಂಪತಿಗಳು, ಅನಂತ ಬಾಳಿಗಾ, ಕಾಮಾಕ್ಷಿ ಬಾಳಿಗಾ ಅಲ್ಲದೆ, ಯು. ವಿದ್ಯಾಧರ್ ಕಾಮತ್, ಕಪ್ಪೆಟ್ಟು, ಪುಂಡಲೀಕ ನಾಯಕ್, ಪುಂಡಲೀಕ ಶೆಣೈ ಭಾಗವಹಿಸಿದ್ದರು.