ಸಾರಾಂಶ
ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ (ಕಸಬಾ ಸೊಸೈಟಿ) ನೂತನ ಅಧ್ಯಕ್ಷರಾಗಿ ಚಂದ್ರಪ್ಪ ಎ. (ಗುಂಡಾ) ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಹಕಾರ ಅಭಿವೃದ್ಧಿ ಇಲಾಖೆ ಅಧಿಕಾರಿ ನವೀನ್ ಕುಮಾರ್ ಹೊನ್ನಾಳಿಯಲ್ಲಿ ಘೋಷಿಸಿದರು.
- ರಾಣಿ ಸುರೇಶ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ
- - -ಹೊನ್ನಾಳಿ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ (ಕಸಬಾ ಸೊಸೈಟಿ) ನೂತನ ಅಧ್ಯಕ್ಷರಾಗಿ ಚಂದ್ರಪ್ಪ ಎ. (ಗುಂಡಾ) ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಹಕಾರ ಅಭಿವೃದ್ಧಿ ಇಲಾಖೆ ಅಧಿಕಾರಿ ನವೀನ್ ಕುಮಾರ್ ಘೋಷಿಸಿದರು.
ಅಧ್ಯಕ್ಷೆಯಾಗಿದ್ದ ರಾಣಿ ಸುರೇಶ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಕಸಬಾ ಸೊಸೈಟಿ ಕಚೇರಿಯಲ್ಲಿ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಚಂದ್ರಪ್ಪ ಎ. ಅವರಿಂದ ಮಾತ್ರವೇ ಉಮೇದುವಾರಿಕೆ ಸಲ್ಲಿಕೆಯಾಗಿತ್ತು. ಇದರಿಂದಾಗಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.ಒಟ್ಟು 12 ಸದಸ್ಯ ಬಲವಿರುವ ಸಂಘದಲ್ಲಿ ರಾಣಿ ಸುರೇಶ್ ಹಾಗೂ ಶಿವಶಂಕರಪ್ಪ ಡಿ.ಆರ್. ಅವರನ್ನು ಹೊರತುಪಡಿಸಿ, ಉಳಿದವರೆಲ್ಲರೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಕಸಬಾ ಸೊಸೈಟಿ ಉಪಾಧ್ಯಕ್ಷ ಈಶ್ವರ ನಾಯ್ಕ, ನಿರ್ದೇಶಕರಾದ ಎಚ್.ಡಿ.ಜೀನದತ್ತ, ಹನುಮಂತಪ್ಪ, ಕುಮಾರ ಸ್ವಾಮಿ ಬಿ.ಎಲ್., ಪುಟ್ಟರಾಜ ಚಾಟಿ, ಪ್ರಕಾಶ್ ಎಚ್.ಪಿ., ಸುರೇಶ್ ಎಂ., ಸರೋಜ ವಾಲಜ್ಜಿ, ನಾಗರಾಜ ಕತ್ತಿಗಿ ಹಾಜರಿದ್ದು, ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಸ್ಥಳಕ್ಕೆ ಅಗಮಿಸಿದ ಬಿಜೆಪಿ ಮಂಡಲ ಅಧ್ಯಕ್ಷ ಆರಕೆರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಮುಖಂಡಂರಾದ ಎಚ್.ಬಿ.ಮೋಹನ್ ಇನ್ನಿತರೆ ಮುಖಂಡರು ಸಹ ಅಭಿನಂದಿಸಿದರು.
ಈ ಸಂದರ್ಭ ಕಸಬಾ ಸೊಸೈಟಿ ಕಾರ್ಯದರ್ಶಿ ರವಿ ನಾಯ್ಕ, ಸಿಬ್ಬಂದಿ ಸುರೇಶ್, ಪ್ರವೀಣ್, ಮುಂತಾದವರು ಇದ್ದರು.- - -
-3ಎಚ್.ಎಲ್.ಐ1:ಹೊನ್ನಾಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚಂದ್ರಪ್ಪ ಎ. ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅಭಿನಂದನೆ ಸಲ್ಲಿಸಲಾಯಿತು.