ಸಾರಾಂಶ
ರಾಣಿಬೆನ್ನೂರು: ಹಲವಾರು ಶಿಕ್ಷಕರು, ವರ್ತಕರು, ಸಾಹಿತಿಗಳು, ವೈದ್ಯರು, ರಾಜಕಾರಣಿಗಳನ್ನು ಸನ್ಮಾನಿಸಿದ್ದಲ್ಲದೆ ಒಬ್ಬ ಗುರು, ತಂದೆ, ತಾಯಿಯಾಗಿ ಭಕ್ತರನ್ನು ಸಲಹಿ ಮಾರ್ಗದರ್ಶನ ಮಾಡಿರುವ ಲಿಂಗೈಕ್ಯ ಚಂದ್ರಶೇಖರ ಒಡೆಯರ ಶಿವಾಚಾರ್ಯರು ಕಾಮಧೇನು ಕಲ್ಪವೃಕ್ಷವಾಗಿದ್ದಾರೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು. ಇಲ್ಲಿನ ಮೃತ್ಯುಂಜಯ ನಗರದ ಚೆನ್ನೇಶ್ವರ ಮಠದ ವಾಗೀಶ ಪಂಡಿತಾರಾಧ್ಯ ಸಭಾಭವನದಲ್ಲಿ ಸ್ಥಳೀಯ ಹೊನ್ನಾಳಿ ಶ್ರೀ ಚೆನ್ನಮಲ್ಲಕಾರ್ಜುನಸ್ವಾಮಿ ಸಂಸ್ಕೃತಿ ಪ್ರಸಾರ ಪರಿಷತ್ತು ವತಿಯಿಂದ ಆಯೋಜಿಸಲಾಗಿದ್ದ ಜ್ಞಾನವಾಹಿನಿ ಮಾಸಿಕ ಧರ್ಮಸಭೆ ಹಾಗೂ ಸಂಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಮನ್ವಯಾಚಾರ್ಯ ವಿಷಯ ಕುರಿತು ರಮಣಶ್ರೀ ಮತ್ತು ಚನ್ನಬಸವ ಪ್ರಶಸ್ತಿ ಪುರಸ್ಕೃತ ಎಚ್. ಎ. ಭಿಕ್ಷಾವರ್ತಿಮಠ ಉಪನ್ಯಾಸ ನೀಡಿದರು. ನಿವೃತ್ತ ಶಿಕ್ಷಕ ಪಾಲಾಕ್ಷಯ್ಯ ನೆಗಳೂರಮಠ ಮಾತನಾಡಿದರು. ನೆಹರು ಮಾರ್ಕೆಟ್ ವರ್ತಕರ ಸಂಘದ ಅಧ್ಯಕ್ಷ ಬಸವರಾಜಪ್ಪ ಪಟ್ಟಣಶೆಟ್ಟಿ, ಉಪಾಧ್ಯಕ್ಷ ಹಾಲಪ್ಪ ಮುದ್ದಿಯವರ, ಗೌರವ ಕಾರ್ಯದರ್ಶಿ ಪುಟ್ಟನಗೌಡ ತೆಂಬದ, ನಿರ್ದೇಶಕರಗಳಾದ ಈರಣ್ಣ ಶೆಟ್ಟರ, ರಾಜಶೇಖರ ಹಾದಿಮನಿ, ಸುರೇಶ ಸಣ್ಣಗೌಡರ, ವಿಜಯ ಕಬ್ಬಿಣದ, ಸುರೇಶಗೌಡ್ರು ಮಾಳಗಿ, ಶಿವಯೋಗಿ ಅಂಗಡಿ, ನಾಗರಾಜ ಅಂಗಡಿ, ಮೃತ್ಯುಂಜಯ ಪಾಟೀಲ, ಪಿ.ಎನ್. ಚಿನ್ನಿಕಟ್ಟಿ, ಕೋಮಲಕುಮಾರ ಕೋರಿಶೆಟ್ರ, ಮಂಜುನಾಥ ಗೌಡಶಿವಣ್ಣನವರ, ಬಸವರಾಜ ನರಸಿಗೊಂಡರ, ವಾದಿರಾಜ ಕುಲಕರ್ಣಿ, ಸಿದ್ದಣ್ಣ ಶಿವಲಿಂಗಪ್ಪನವರ ಇವರುಗಳಿಗೆ ಗುರು ರಕ್ಷೆಯನ್ನು ನೀಡಲಾಯಿತು.
ಬ್ಯಾಡಗಿ ವರ್ತಕ ನಾಗರಾಜಪ್ಪ ಕೆಂಬಿ ಹಾಗೂ ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿ ಅವರನ್ನು ಸನ್ಮಾನಿಸಲಾಯಿತು. ಶ್ರೀಮಠದ ಕಲಾವಿದರಾದ ಗುಡ್ಡಪ್ಪ ಹಿಂದಲಮನಿ, ಮೌನೇಶ ತ್ರಾಸದ, ರಜನಿ ಕರಿಗಾರ, ಯುವರಾಜ ಹಿರೇಮಠ ಸಂಗೀತ ಸೇವೆ ಸಲ್ಲಿಸಿದರು. ಗೌರಮ್ಮ, ವೀರಣ್ಣ ಜಂಬಗಿ, ಗುರುಪ್ರಶಾಂತಯ್ಯ ಆರಾಧ್ಯಮಠ, ಸುರೇಶ ಮಳೀಮಠ, ಶಿವಯೋಗಿ ಹಿರೇಮಠ, ಅಮೃತಗೌಡ ಹಿರೇಮಠ, ಜಗದೀಶ ಮಳಿಮಠ, ವಿ.ಎಂ. ಕರ್ಜಗಿ, ಜ್ಯೋತಿಬಣ್ಣದ, ಚನ್ನವೀರಗೌಡ ಪಾಟೀಲ, ಸೋಮನಾಥ ಹಿರೇಮಠ, ರಾಚಯ್ಯ ಶಾಸ್ತ್ರಿಗಳು, ಗೌರಿಶಂಕರಸ್ವಾಮಿ ನೆಗಳೂರಮಠ, ಎಂ.ಕೆ. ಹಾಲಸಿದ್ದಯ್ಯಸ್ವಾಮಿಗಳು, ಸುನಂದಮ್ಮ ತಿಳುವಳ್ಳಿ, ಗಾಯತ್ರಿ ಕುರುವತ್ತಿ, ಭಾಗ್ಯಶ್ರಿ ಗುಂಡಗಟ್ಟಿ ಹಾಗೂ ತಾಲೂಕು ಶ್ರೀ ವೀರಶೈವ ಜಂಗಮ ಪುರೋಹಿತ ಮತ್ತು ಅರ್ಚಕರ ಸಂಘ, ಶ್ರೀ ದಾನೇಶ್ವರಿ ಜಾಗೃತಿ ಅಕ್ಕನ ಬಳಗ ಹಾಗೂ ಕದಳಿ ವೇದಿಕೆಯ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.