ಚಂದ್ರವಾಡಿ ಗ್ರಾಮದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

| Published : Oct 25 2024, 01:05 AM IST

ಸಾರಾಂಶ

ವಿಕಾಸಿತ ಶ್ರೇಷ್ಠ ಭಾರತಕ್ಕಾಗಿ ಮುಂದಿನ ಪೀಳಿಗೆಯ ಅಭ್ಯುದಯಕ್ಕೆ ಬಲಪಡಿಸಲು ಹೆಚ್ಚು ಹೆಚ್ಚು ಯುವಕರು ಬಿಜೆಪಿ ಸದಸ್ಯತ್ವ

ಕನ್ನಡಪ್ರಭ ವಾರ್ತೆ ಹುಲ್ಲಹಳ್ಳಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಾಸ ಭಾರತದ ಪರಿಕಲ್ಪನೆ ಸಾಕಾರಗೊಳಿಸುವ ಸಲುವಾಗಿ ಗ್ರಾಮೀಣ ಜನರು ಬಿಜೆಪಿ ಸದಸ್ಯರಾಗುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಮಾಜಿ ಶಾಸಕ ಬಿ. ಹರ್ಷವರ್ಧನ್ ಹೇಳಿದರು.

ಹೋಬಳಿಯ ಚಂದ್ರವಾಡಿ ಗ್ರಾಮದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತದ ಕನಸು ನನಸು ಮಾಡಲು ಗ್ರಾಮೀಣ ಯುವಕರು ಜನಸಂಖ್ಯೆಯಲ್ಲಿ ಬಿಜೆಪಿ ಸದಸ್ಯತ್ವ ಕೊಂದಬೇಕು ಕರೆ ನೀಡಿದರು. ವಿಕಾಸಿತ ಶ್ರೇಷ್ಠ ಭಾರತಕ್ಕಾಗಿ ಮುಂದಿನ ಪೀಳಿಗೆಯ ಅಭ್ಯುದಯಕ್ಕೆ ಬಲಪಡಿಸಲು ಹೆಚ್ಚು ಹೆಚ್ಚು ಯುವಕರು ಬಿಜೆಪಿ ಸದಸ್ಯತ್ವ ಪಡೆಯಬೇಕೆಂದರು.

ಕಳೆದ 10 ವರ್ಷಗಳಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಈ ಕೇಂದ್ರ ಸರ್ಕಾರ ಮಾಡಿರುವ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಬೇಕೆಂದರು.

ಗ್ರಾಪಂ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಶಕ್ತಿ ಕೇಂದ್ರದ ಅಧ್ಯಕ್ಷ ಗುರು, ಮಹದೇವಪ್ಪ, ಪರಶಿವಮೂರ್ತಿ, ಮಂಜು, ಚಂದ್ರ, ಬಾಬು, ಮಹೇಶ್, ಶಿವು, ಬಸವಣ್ಣ ಇದ್ದರು.