ರೋಗಗಳಿಗೆ ಬದಲಾದ ಆಧುನಿಕ ಜೀವನಶೈಲಿ ಕಾರಣ: ಯೋಗೇಂದ್ರ ಶ್ರೀ

| Published : Feb 11 2025, 12:46 AM IST

ರೋಗಗಳಿಗೆ ಬದಲಾದ ಆಧುನಿಕ ಜೀವನಶೈಲಿ ಕಾರಣ: ಯೋಗೇಂದ್ರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕತೆಯಿಂದ ಜೀವನಶೈಲಿ ಬದಲಾದ ಹಿನ್ನೆಲೆಯಲ್ಲಿ ರೋಗಗಳು ಹೆಚ್ಚಾಗಿವೆ ಎಂದು ಶ್ರೀಕ್ಷೇತ್ರ ಕಾರ್ತಿಕೇಯಪೀಠ ಸಾಗರನಜೇಡ್ಡು ಅವಧೂತ ಯೋಗೇಂದ್ರ ಶ್ರೀ ಹೇಳಿದರು.

ಆರೋಗ್ಯ ತಪಾಸಣಾ ಶಿಬಿರ

ಸೊರಬ: ಆಧುನಿಕತೆಯಿಂದ ಜೀವನಶೈಲಿ ಬದಲಾದ ಹಿನ್ನೆಲೆಯಲ್ಲಿ ರೋಗಗಳು ಹೆಚ್ಚಾಗಿವೆ ಎಂದು ಶ್ರೀಕ್ಷೇತ್ರ ಕಾರ್ತಿಕೇಯಪೀಠ ಸಾಗರನಜೇಡ್ಡು ಅವಧೂತ ಯೋಗೇಂದ್ರ ಶ್ರೀ ಹೇಳಿದರು.

ತಾಲೂಕಿನ ಹರಿಶಿ ವ್ಯಾಪ್ತಿಯ ವಿದ್ಯಾನಗರದ ಪ್ರೌಢಶಾಲೆ ಆವರಣದಲ್ಲಿ ರಾಘವಿ ಚಾರಿಟೇಬಲ್ ಟ್ರಸ್ಟ್ ಮತ್ತು ಸೇವಾ ಫೌಂಡೇಶನ್, ಶ್ರೀ ಲಕ್ಷ್ಮಿ ಗ್ರೂಪ್ ಆಫ್ ಆಸ್ಪತ್ರೆ, ಬೆಂಗಳೂರು ಹಾಗೂ ಯುನಿಟಿ ಕೇರ್ ಆಸ್ಪತ್ರೆ, ಶಿವಮೊಗ್ಗದಿಂದ ಹಮ್ಮಿಕೊಂಡ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮನುಷ್ಯನಿಗೆ ಆರೋಗ್ಯ ಮುಖ್ಯವಾಗಿದ್ದು, ಕಾಪಾಡಿಕೊಳ್ಳುವುದು ಆತನ ಕೈಯಲ್ಲೆ ಇದೆ. ಉತ್ತಮ ಆಹಾರ, ಚಿಂತನೆ, ಹವ್ಯಾಸಗಳ ಜತೆಗೆ ಸದಾ ಕ್ರೀಯಾಶೀಲ ದೈಹಿಕ ಚಟುವಟಿಕೆಗಳಿಂದ ಕೂಡಿದ್ದಲ್ಲಿ ಉತ್ತಮ ಆರೋಗ್ಯ ಹೊಂದಬಹುದು ಎಂದರು.

ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯ ಸೂರ್ಯೋದಯದ ಮುಂಚಿತವಾಗಿ ಏಳುವ ಅಭ್ಯಾಸ ಮಾಡಿಕೊಳ್ಳುವ ಜತೆಗೆ ಚಟುವಟಿಕೆಗಳಿಂದ ಕೂಡಿದ್ದಲ್ಲಿ ಉತ್ತಮ ಆರೋಗ್ಯ ಹೊಂದಬಹುದು ಎಂದರು.

ರಾಘವಿ ಚಾರಿಟೇಬಲ್ ಟ್ರಸ್ಟ್ ಮತ್ತು ಸೇವಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಸುಂಟ್ರಹಳ್ಳಿ ಪ್ರಾಸ್ತಾವಿಕ ಮಾತನಾಡಿದರು.

ಹರೀಶಿ, ಸುತ್ತಲಿನ ಗ್ರಾಮಗಳ ಹಿರಿಯನ್ನು ಸನ್ಮಾನಿಸಲಾಯಿತು.

ಹರಿಶಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುಸೂಯಮ್ಮ, ಸಹಕಾರ ಸಂಘದ ಅಧ್ಯಕ್ಷ ಶಿವಣ್ಣ ತಬಲಿ, ಪ್ರಮುಖರಾದ ತಬಲಿ ಬಂಗಾರಪ್ಪ, ಸುನೀಲ್ ಗೌಡ, ಎನ್.ಜಿ.ನಾಯ್ಕ್, ಮಾರ್ಯಪ್ಪ, ಅತ್ಯುತ್ ಹೆಗಡೆ, ಚೌಡಪ್ಪ, ವಜ್ರಕುಮಾರ್, ಉಮಾಕಾಂತಗೌಡ, ಮುಖ್ಯ ಶಿಕ್ಷಕ ಮಂಜುನಾಥ್, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್, ಡಾ.ಮಂಜುನಾಥ್, ಡಾ.ಆಶಿತಾ, ಡಾ.ಐಶ್ವರ್ಯ, ಡಾ.ಜಾನ್, ಡಾ.ಅಜಯ್ ಇದ್ದರು.

ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯ ಮುಖ್ಯ. ಉತ್ತಮ ಆರೋಗ್ಯ ಹೊಂದಿದ್ದಲ್ಲಿ ಉತ್ತಮ ಚಿಂತನೆ, ಕೆಲಸಕಾರ್ಯ, ಸಾಧನೆಗಳನ್ನು ಮಾಡಲು ಸಾಧ್ಯವಾಗುತ್ತದೆ.

ಜಿ.ಜಗದೀಶ್, ಜಿಲ್ಲಾಧಿಕಾರಿ, ಬೆಂಗಳೂರು.