ಲಿಂಗಾಯತ ಧರ್ಮಕ್ಕೆ ತಾತ್ವಿಕ ಚೌಕಟ್ಟು ನೀಡಿದ ಚನ್ನಬಸವಣ್ಣ

| Published : Oct 25 2025, 01:00 AM IST

ಲಿಂಗಾಯತ ಧರ್ಮಕ್ಕೆ ತಾತ್ವಿಕ ಚೌಕಟ್ಟು ನೀಡಿದ ಚನ್ನಬಸವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಷಟಸ್ಥಲ ಚಕ್ರವರ್ತಿ ಎಂದೇ ಕರೆಯಲಾಗುವ ಚನ್ನಬಸವಣ್ಣ ರಚಿಸಿದ ವಚನಗಳ ಸಾರವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಬಾಳಿ ಬದುಕಬೇಕಿದೆ

ಯಲಬುರ್ಗಾ: ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಸಂಸ್ಕಾರಗೊಂಡ ಲಿಂಗಾಯತ ಧರ್ಮಕ್ಕೆ ಚನ್ನಬಸವಣ್ಣನವರು ತಾತ್ವಿಕ ಚೌಕಟ್ಟು ಕೊಟ್ಟಿದ್ದಾರೆ ಎಂದು ನಿವೃತ್ತ ಪಿಎಸ್ಐ ಬಸನಗೌಡ ಪೊಲೀಸ್ ಪಾಟೀಲ್ ಹೇಳಿದರು.

ತಾಲೂಕಿನ ಗುಳೆ ಗ್ರಾಮದ ವಿಶ್ವಗುರು ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವದಳ ಮತ್ತು ಅಕ್ಕ ನಾಗಲಾಂಭಿಕಾ ಮಹಿಳಾ ಗಣ ಹಾಗೂ ಯುವ ಘಟಕದಿಂದ ಹಮ್ಮಿಕೊಂಡಿದ್ದ ಚಿನ್ಮಯಜ್ಞಾನಿ ಚನ್ನಬಸವಣ್ಣನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಷಟಸ್ಥಲ ಚಕ್ರವರ್ತಿ ಎಂದೇ ಕರೆಯಲಾಗುವ ಚನ್ನಬಸವಣ್ಣ ರಚಿಸಿದ ವಚನಗಳ ಸಾರವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಬಾಳಿ ಬದುಕಬೇಕಿದೆ ಎಂದರು.

ಬೆಂಗಳೂರಿನ ಬಸವಪರ ಚಿಂತಕ ಶಂಕ್ರಪ್ಪ ಬೇವೂರು ಹಾಗೂ ಶರಣಪ್ಪ ಹೊಸಳ್ಳಿ ಚನ್ನಬಸವಣ್ಣನವರು ಷಟಸ್ಥಲವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ವೈಜ್ಞಾನಿಕವಾಗಿ ರಚಿಸುವುದರ ಮೂಲಕ ಅತ್ಯಂತ ಅರ್ಥಪೂರ್ಣವಾದ ಸಾಹಿತ್ಯವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.

ಕಾರ್ಯಕ್ರಮದ ಪೂರ್ವದಲ್ಲಿ ಗುರುಪೂಜೆ ಸಾಮೂಹಿಕ ಇಷ್ಟಲಿಂಗ ಅರ್ಚನೆ ಬಳಿಕ ಚನ್ನಬಸವಣ್ಣನ ವಚನ ಆಧಾರಿತ ಅನುಭವ ಕಾರ್ಯಕ್ರಮ ಜರುಗಿತು. ರಾಷ್ಟ್ರೀಯ ಬಸವದಳ ಕಾರ್ಯದರ್ಶಿ ಬಸವರಾಜ ಹೂಗಾರ ಮಾತನಾಡಿದರು.

ಈ ವೇಳೆ ನಾಗನಗೌಡ ಜಾಲಿಹಾಳ, ದೇವಪ್ಪ ಕೋಳೂರು, ಗಿರಿಮಲ್ಲಪ್ಪ ಪರಂಗಿ, ಶಿವಾನಂದಪ್ಪ ಬೇವೂರು, ಫಕೀರಪ್ಪ ಮಂತ್ರಿ, ಲಿಂಗನಗೌಡ ದಳಪತಿ, ಶಿವಪುತ್ರಪ್ಪ ಉಚ್ಚಲಕುಂಟಿ, ಯಮನಪ್ಪ ಕೋಳೂರು, ಹನುಮೇಶ ಹೊಸಳ್ಳಿ, ನಿಜಲಿಂಗಪ್ಪ ಮಂತ್ರಿ, ಶೇಖಪ್ಪ ಮಂತ್ರಿ, ಮಲ್ಲಿಕಾರ್ಜುನ ಮಂತ್ರಿ, ಜಗದೀಶ ಮೇಟಿ, ಬಸವರಾಜ ಹೊಸಳ್ಳಿ, ನಿಂಗಪ್ಪ ಮಂತ್ರಿ, ಶಿವಕುಮಾರ ಹೊಸಳ್ಳಿ, ಮಲ್ಲಿಕಾರ್ಜುನ ಹೊಸಳ್ಳಿ, ಹನುಮಂತಪ್ಪಜ್ಜ, ಶರಣಪ್ಪ ಮೇಟಿ, ಶಂಕ್ರಮ್ಮ ಹೊಸಳ್ಳಿ, ಸಾವಿತ್ರಮ್ಮ, ವಿಶಾಲಾಕ್ಷಮ್ಮ, ರೇಣುಕಮ್ಮ, ಶಿವಕಲ್ಲಮ್ಮ, ಶರಣಮ್ಮ ಪಾಟೀಲ್ ಸೇರಿದಂತೆ ಮತ್ತಿತರರು ಇದ್ದರು.