ಸಾರಾಂಶ
ಗುಬ್ಬಿ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಚನ್ನಬಸವೇಶ್ವರ ಸ್ವಾಮಿಯವರ ಮಹಾ ರಥೋತ್ಸವ ಧಾರ್ಮಿಕ ವಿಧಿ- ವಿಧಾನದೊಂದಿಗೆ ಸಹಸ್ರಾರು ಭಕ್ತರ ಜಯ ಘೋಷದೊಂದಿಗೆ ನೆರವೇರಿತು.
ಗುಬ್ಬಿ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಚನ್ನಬಸವೇಶ್ವರ ಸ್ವಾಮಿಯವರ ಮಹಾ ರಥೋತ್ಸವ ಧಾರ್ಮಿಕ ವಿಧಿ- ವಿಧಾನದೊಂದಿಗೆ ಸಹಸ್ರಾರು ಭಕ್ತರ ಜಯ ಘೋಷದೊಂದಿಗೆ ನೆರವೇರಿತು.
ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಮುಂಜಾನೆಯಿಂದಲೇ ಶ್ರೀ ಚನ್ನಬಸವೇಶ್ವರ ಸ್ವಾಮಿಗೆ ವಿವಿಧ ಪೂಜೆಯೊಂದಿಗೆ ಸ್ವಾಮಿಯನ್ನು ಹೂವಿನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಮಂಗಳವಾದ್ಯದೊಂದಿಗೆ ದೇವಾಲಯದ ಸುತ್ತಲೂ ಉತ್ಸವ ನಡೆಸಿ ನಂತರ ಭಕ್ತರ ಸಮ್ಮುಖದಲ್ಲಿ ಸ್ವಾಮಿಯನ್ನು ತಂದು ಹೂವು ಹಾಗೂ ಬಣ್ಣ ಬಣ್ಣದ ಬಟ್ಟೆಗಳಿಂದ ಸುಂದರಿಸಿದ ರಥದಲ್ಲಿ ಸ್ವಾಮಿಯನ್ನು ಪ್ರತಿಷ್ಠಾಪಿಸಿದ ನಂತರ ಶುಭ ಲಗ್ನದ 1.45ಕ್ಕೆ ಮಠಾಧಿಪತಿಗಳು, ಭಕ್ತರು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.ರಥೋತ್ಸವ ಸಾಗುವ ದಾರಿಯಲ್ಲಿ ನಂದಿ ಧ್ವಜ, ವೀರಗಾಸೆ, ಡೋಲು ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಭಾಗವಹಿಸಿದ್ದವು. ನಾಡಿನ ವಿವಿಧಡೆ ಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸುಡು ಬಿಸಿಲನ್ನು ಲೆಕ್ಕಿಸದೆ ರಥೋತ್ಸವದಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥ ಹರಕೆಗೆ ಹೊತ್ತಿದ್ದ ರಥಕ್ಕೆ ಬಾಳೆಹಣ್ಣು ದವನ ಎಸೆದು ತಮ್ಮ ಅರಿಕೆಯನ್ನು ಸ್ವಾಮಿಗೆ ಸಮರ್ಥಿಸಿದರು. ರಥೋತ್ಸವಕ್ಕೆ ಬಂದ ನಾಡಿನ ಹಾಗೂ ತಾಲೂಕಿನ ಭಕ್ತಾದಿಗಳಿಗೆ ಸಂಘ ಸಂಸ್ಥೆಗಳಿಂದ ಪಾನಕ, ಹೆಸರುಬೇಳೆ, ಮಜ್ಜಿಗೆ, ಪೊಂಗಲ್, ಕೇಸರಿಬಾತು ಹಾಗೂ ವಿಶೇಷವಾಗಿ ದಾಸೋಹ ಏರ್ಪಡಿಸಲಾಗಿತ್ತು.